New Delhi: ದೀಪಾವಳಿಗೆ ಮುನ್ನ ಸರ್ಕಾರ ಪ್ರಮುಖ ಸುಧಾರಣಾ ಕ್ರಮ ಘೋಷಿಸಬಹುದು ಎಂದು ನೀತಿ ಆಯೋಗ್ (NITI Aayog) ಸಿಇಒ ಬಿ.ವಿ.ಆರ್. ಸುಬ್ರಹ್ಮಣ್ಯಂ ತಿಳಿಸಿದ್ದಾರೆ. ಇತ್ತೀಚೆ GSTಯಲ್ಲಿ ಸರಕುಗಳ ತೆರಿಗೆ ಕಡಿಮೆಯಾಗಿತ್ತು. GST 2.0 ಕ್ರಮವನ್ನು ಬಹಳಷ್ಟು ವಲಯಗಳಿಂದ ಸ್ವಾಗತ ಮಾಡಲಾಗಿದೆ. ಈಗ ಭಾರತ ಮ್ಯಾನುಫ್ಯಾಕ್ಚರಿಂಗ್ ಕ್ಷೇತ್ರದಲ್ಲಿ ಮತ್ತಷ್ಟು ಸುಧಾರಣೆಯನ್ನು ಎದುರು ನೋಡುತ್ತಿದೆ.
ಸರ್ಕಾರ ಮುಂದೆ ಹಲವು ಸುಧಾರಣಾ ಕ್ರಮಗಳ ಕುರಿತು ಯೋಚಿಸುತ್ತಿದೆ. ನೀತಿ ಆಯೋಗ್ ಸದಸ್ಯ ರಾಜೀವ್ ಗೌಬ ನೇತೃತ್ವದ ಎರಡು ಸಮಿತಿಗಳು ಈಗಾಗಲೇ ವರದಿಗಳನ್ನು ಸಲ್ಲಿಸಿದ್ದಾರೆ. ಮುಂದಿನ ತಲೆಮಾರಿಗೆ ಸುಧಾರಣೆಗಳನ್ನು ಉತ್ತೇಜಿಸಲು ಮತ್ತೊಂದು ಸಮಿತಿಯು ಕ್ರಮಗಳನ್ನು ಪರಿಶೀಲಿಸುತ್ತಿದೆ.
- ಮುಖ್ಯ ಅಂಶಗಳು
- ಆಮದುಗಳ ಮೇಲೆ ತೆರಿಗೆ ಕಡಿಮೆ ಮಾಡಬೇಕು.
- ನಾನ್-ಟ್ಯಾರಿಫ್ ತಡೆಗಳನ್ನು ನಿವಾರಣೆ ಮಾಡಬೇಕು.
ಮಾರುಕಟ್ಟೆಯನ್ನು ಮುಕ್ತಗೊಳಿಸುವ ಮೂಲಕ ಮ್ಯಾನುಫ್ಯಾಕ್ಚರಿಂಗ್ ಕ್ಷೇತ್ರದಲ್ಲಿ ಸ್ಪರ್ಧಾತ್ಮಕತೆ ಹೆಚ್ಚಿಸಬಹುದು.
ಭವಿಷ್ಯದಲ್ಲಿ ರಾಷ್ಟ್ರೀಯ ಉತ್ಪಾದನಾ ನೀತಿ ಜಾರಿಗೆ ಬರುವ ಸಾಧ್ಯತೆ ಇದೆ. ಭಾರತವು ವಿಶ್ವದರ್ಜೆಯ ಉದ್ಯಮ ಪರಿಸರವನ್ನು ನಿರ್ಮಿಸಲು ಗಮನಹರಿಸಬೇಕು ಎಂದು ಸಿಇಒ ಹೇಳಿದ್ದಾರೆ.