Home India Jammu and Kashmir Indian Army ಬೆಂಗಾವಲು ವಾಹನದ ಮೇಲೆ Terror Attack: 2 ಸೈನಿಕರ ಸಾವು

Indian Army ಬೆಂಗಾವಲು ವಾಹನದ ಮೇಲೆ Terror Attack: 2 ಸೈನಿಕರ ಸಾವು

133

Srinagar: ಜಮ್ಮು ಕಾಶ್ಮೀರದ (Jammu and Kashmir) ಗುಲ್ಮಾರ್ಗ್ ಸೆಕ್ಟರ್‌ನ (Gulmarg Sector) ಗಡಿ ನಿಯಂತ್ರಣ ರೇಖೆ ಬಳಿ ನಡೆದ (Terror Attack) ಭಯೋತ್ಪಾದಕ ದಾಳಿಯಲ್ಲಿ ಭಾರತೀಯ ಸೇನೆಯಲ್ಲಿ (Indian Army) ಕೆಲಸ ಮಾಡುತ್ತಿದ್ದ ಇಬ್ಬರು ಸೈನಿಕರು ಮತ್ತು ಇಬ್ಬರು ನಾಗರಿಕ ಪೋರ್ಟರ್‌ಗಳು ಹುತಾತ್ಮರಾಗಿದ್ದು, ದಾಳಿಯಲ್ಲಿ ಮೂವರು ಯೋಧರು ಗಾಯಗೊಂಡಿದ್ದಾರೆ.

ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಅವರು ಶ್ರೀನಗರದಲ್ಲಿ ಕಳೆದ ವಾರ ನಡೆದ ಉಗ್ರ ದಾಳಿಗಳ ಹಿನ್ನೆಲೆಯಲ್ಲಿ ಭದ್ರತಾ ಪರಿಸ್ಥಿತಿಯನ್ನು ಪರಿಶೀಲಿಸಲು ಏಕೀಕೃತ ಪ್ರಧಾನ ಕಛೇರಿಯಲ್ಲಿ (UHQ) ಸಭೆಯನ್ನು ನಡೆಸಿದ ಕೆಲವೇ ಗಂಟೆಗಳ ನಂತರ ಈ ಭಯೋತ್ಪಾದಕ ದಾಳಿ ನಡೆದಿದೆ.

ಈ ಸಭೆಯಲ್ಲಿ ಉನ್ನತ ಸೇನೆ, ಪೊಲೀಸ್, ಅರೆಸೇನಾಪಡೆ ಮತ್ತು ಗುಪ್ತಚರ ಅಧಿಕಾರಿಗಳು ಭಾಗವಹಿಸಿದ್ದರು.

Gulmarg ಘಟನೆಯ ವಿವರ

ಮೂಲಗಳ ಪ್ರಕಾರ, ಗುರುವಾರ ಸಂಜೆ, ಗುಲ್ಮಾರ್ಗ್‌ನ ಪ್ರಮುಖ ಪ್ರವಾಸಿ ತಾಣದಿಂದ ಏಳು ಕಿಲೋಮೀಟರ್‌ಗಳಷ್ಟು ದೂರದಲ್ಲಿರುವ ಬೋಟಾ ಪತ್ರಿಯಲ್ಲಿನ ನಾಗಿನ್ ಪೋಸ್ಟ್ ಬಳಿ ಬೆಂಗಾವಲು ಪಡೆಯ ಭಾಗವಾಗಿದ್ದ ಸೇನಾ ವಾಹನವನ್ನು ಉಗ್ರರು ಗುರಿಯಾಗಿಸಿ ದಾಳಿ ಮಾಡಿದ್ದಾರೆ.

ಬೋಟಾ ಪತ್ರಿ ಗಡಿ ನಿಯಂತ್ರಣ ರೇಖೆಗೆ ಸಮೀಪದಲ್ಲಿದ್ದು, ಈ ಪ್ರದೇಶದಲ್ಲಿ ನಾಗರಿಕ ಸಂಚಾರವನ್ನು ನಿರ್ಬಂಧಿಸಲಾಗಿದೆ.

ಸೇನೆಯು ಉಗ್ರರ ಗುಂಡಿನ ದಾಳಿ ಬಗ್ಗೆ ದೃಢಪಡಿಸಿದ್ದು, ಈ ಕುರಿತು ಹೆಚ್ಚಿನ ವಿವರಗಳು ಇನ್ನಷ್ಟೇ ಬರಬೇಕಿದೆ. ಉತ್ತರ ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯ ಬೋನಿಯಾರ್ ನಿವಾಸಿಗಳಾದ ಮುಷ್ತಾಕ್ ಅಹ್ಮದ್ ಮತ್ತು ಜಹೂರ್ ಅಹ್ಮದ್ ಎಂಬ ಇಬ್ಬರು ಹಮಾಲಿಗಳನ್ನು ಮೂಲಗಳು ಗುರುತಿಸಿವೆ.

ಉಗ್ರರ ದಾಳಿಯ ಬಗ್ಗೆ ಜಮ್ಮು ಕಾಶ್ಮೀರ ಮುಖ್ಯಮಂತ್ರಿ ಓಮರ್ ಅಬ್ದುಲ್ಲಾ ಮತ್ತು ಮಾಜಿ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಪ್ರತಿಕ್ರಿಯೆ ನೀಡಿದ್ದು, ಈ ದಾಳಿಯನ್ನು ಖಂಡಿಸಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ಸಿಎಂ ಓಮರ್ ಅಬ್ದುಲ್ಲಾ, ‘ಉತ್ತರ ಕಾಶ್ಮೀರದ ಬೋಟಾ ಪತ್ರಿ ಪ್ರದೇಶದಲ್ಲಿ ಸೇನಾ ವಾಹನಗಳ ಮೇಲಿನ ದಾಳಿಯು ಅತ್ಯಂತ ದುರದೃಷ್ಟಕರವಾಗಿದ್ದು, ಕಾಶ್ಮೀರದಲ್ಲಿ ಇತ್ತೀಚೆಗೆ ನಡೆಯುತ್ತಿರುವ ದಾಳಿಗಳು ಗಂಭೀರ ಕಳವಳಕಾರಿ ವಿಷಯವಾಗಿದೆ.

ಪ್ರಾಣ ಕಳೆದುಕೊಂಡ ಜನರ ಪ್ರೀತಿಪಾತ್ರರಿಗೆ ನನ್ನ ಸಂತಾಪವನ್ನು ಸೂಚಿಸುತ್ತೇನೆ. ಗಾಯಗೊಂಡವರು ಸಂಪೂರ್ಣ ಮತ್ತು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ನಾನು ಪ್ರಾರ್ಥಿಸುತ್ತೇನೆ’ ಎಂದು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.

ಈ ವಾರ ಕಣಿವೆಯಲ್ಲಿ ಇದು ನಾಲ್ಕನೇ ಉಗ್ರಗಾಮಿ ದಾಳಿಯಾಗಿದ್ದು, ಮಧ್ಯ ಕಾಶ್ಮೀರದ ಗಂದರ್‌ಬಾಲ್ ಜಿಲ್ಲೆಯ ಸೋನಾಮಾರ್ಗ್ ಪ್ರವಾಸಿಧಾಮ ಬಳಿಯ ಗಗಾಂಗೀರ್‌ನಲ್ಲಿನ ಕ್ಯಾಂಪ್‌ಸೈಟ್‌ನಲ್ಲಿ ಭಯೋತ್ಪಾದಕರು APCO ಇನ್‌ಫ್ರಾಟೆಕ್‌ನ ಸ್ಥಳೀಯ ವೈದ್ಯ ಸೇರಿದಂತೆ ಏಳು ಉದ್ಯೋಗಿಗಳನ್ನು ಕೊಂದಿದ್ದರು.

For Daily Updates WhatsApp ‘HI’ to 7406303366

NO COMMENTS

LEAVE A REPLY

Please enter your comment!
Please enter your name here

You cannot copy content of this page