
Chikkaballapur : ಆಷಾಢ ಮಾಸದ ಪೂರ್ಣಿಮೆ ಅಂಗವಾಗಿ ಗುರುವಾರ ಚಿಕ್ಕಬಳ್ಳಾಪುರ ಜಿಲ್ಲೆಯಾದ್ಯಂತ ಶ್ರದ್ಧಾಭಕ್ತಿ, ಸಂಭ್ರಮದಿಂದ ಗುರು ಪೂರ್ಣಿಮೆ ಆಚರಿಸಲಾಯಿತು. ಶಿರಡಿ ಸಾಯಿ ಬಾಬಾ ಮಂದಿರಗಳಲ್ಲಿ ದಿನಪೂರ್ತಿ ವಿಶೇಷ ಧಾರ್ಮಿಕ ಕೈಂಕರ್ಯಗಳು ಹೂಮ, ಪೂಜೆ, ಮೆರವಣಿಗೆಗಳು ನಡೆದವು. ಭಕ್ತರು ಬೆಳಿಗ್ಗೆಯಿಂದಲೇ ಬಾಬಾ ದರ್ಶನ ಪಡೆಯಲು ದೇವಸ್ಥಾನಗಳತ್ತ ತೆರಳುತ್ತಿದ್ದರು.

ಚಿಕ್ಕಬಳ್ಳಾಪುರ ನಗರದ ಎಚ್.ಎಸ್.ಗಾರ್ಡನ್‌ನಲ್ಲಿರುವ ಸುಬ್ರಹ್ಮಣ್ಯೇಶ್ವರ, ಶನೈಶ್ವರ, ಶಿರಡಿ ಸಾಯಿಬಾಬಾ ಮಂದಿರದಲ್ಲಿ, ಹಾರೋಬಂಡೆಯ ಸಾಯಿಬಾಬಾ ಮಂದಿರದಲ್ಲಿ ಅದ್ದೂರಿಯಾಗಿ ಗುರು ಪೂರ್ಣಿಮೆ ಆಚರಿಸಲಾಯಿತು. ದೇವರ ಉತ್ಸವ ಮೂರ್ತಿಗಳ ಹೂವಿನ ಪಲ್ಲಕ್ಕಿ ಮೆರವಣಿಗೆ ನಡೆಯಿತು. ನಗರದ ಯೋಗಿ ನಾರೇಯಣ ಭಕ್ತ ಮಂಡಳಿಯಿಂದ ಯೋಗಿ ನಾರೇಯಣರ ರಥೋತ್ಸವ ಜರುಗಿತು.
ಬಾಗೇಪಲ್ಲಿ :

ಬಾಗೇಪಲ್ಲಿ ಪಟ್ಟಣದ ಶಿರಿಡಿ ಸಾಯಿಬಾಬಾ ಮಂದಿರ, ಶಂಕರ ಹಾಗೂ ರಾಘವೇಂದ್ರಸ್ವಾಮಿ ಮಠ, ಅವಧೂತ ಹುಸೇನುದಾಸಯ್ಯಸ್ವಾಮಿ ಹಾಗೂ ಸುಜ್ಞಾನಂಪಲ್ಲಿ ಗ್ರಾಮದ ಅವಧೂತ ಆದಿನಾರಾಯಣಸ್ವಾಮಿ ಗದ್ದುಗೆ ಸೇರಿದಂತೆ ಮಂದಿರ, ಮಠ ಹಾಗೂ ದರ್ಗಾಗಳಲ್ಲಿ ಗುರುವಾರ ಗುರುಪೌರ್ಣಿಮೆ ಪ್ರಯುಕ್ತ ಹಿಂದೂ-ಮುಸ್ಲಿಮರ ಸಮ್ಮುಖದಲ್ಲಿ ವಿಜೃಂಭಣಿಯಿಂದ ಪೂಜೆ ನಡೆಯಿತು.
ಗೌರಿಬಿದನೂರು :

ಶಿರಡಿ ಸಾಯಿ ನಗರದ ಮಂದಿರದಲ್ಲಿ ವಿಜೃಂಭಣೆಯಿಂದ ಪೂರ್ಣಿಮೆ ಗುರುವಾರ ಆಚರಿಸಲಾಯಿತು
ಚಿಂತಾಮಣಿ :

ತಾಲ್ಲೂಕಿನ ಶ್ರೀ ಕ್ಷೇತ್ರ ಕೈವಾರದಲ್ಲಿ ಗುರು ಪೂರ್ಣಿಮಾ ಅಂಗವಾಗಿ ಸಂಗೀತೋತ್ಸವ ನಡೆಸಲಾಯಿತು.
ಶಿಡ್ಲಘಟ್ಟ :
ಶಿಡ್ಲಘಟ್ಟ ತಾಲ್ಲೂಕಿನ ಮಳ್ಳೂರಿನ ಸಮೀಪ ಸಾಯಿನಾಥ ಜ್ಞಾನ ಮಂದಿರ ದಲ್ಲಿ ಗುರುಪೂರ್ಣಿಮೆ ಅಂಗವಾಗಿ ಗುರುವಾರ ವಿಶೇಷ ಪೂಜೆ ಆಯೋಜಿಸಲಾಗಿತ್ತು.
ಗುಡಿಬಂಡೆ :

ಗುಡಿಬಂಡೆ ಪಟ್ಟಣದ ಗಂಗಾಧರೇಶ್ವರ ದೇಗುಲ ಆವರಣ, ಕೈವಾರ ತಾತಯ್ಯ ದೇವಾಲಯ, ಬೆಟ್ಟದ ಕೆಳಗಿನ ಪೇಟೆಯ ಸಾಯಿರಾಮ ಬಾಬಾ ಭಜನೆ ಮಂದಿರ ಹಾಗೂ ಆದಿನಾರಾಯಣಸ್ವಾಮಿ ದೇವಾಲಯದಲ್ಲಿ ಗುರು ಪೂರ್ಣಿಮೆ ಶ್ರದ್ಧೆಯಿಂದ ಆಚರಿಸಲಾಯಿತು.
For Daily Updates WhatsApp ‘HI’ to 7406303366
The post ಜಿಲ್ಲೆಯಾದ್ಯಂತ ಸಂಭ್ರಮದ ಗುರು ಪೂರ್ಣಿಮೆ appeared first on Chikkaballapur | Chikballapur | Chikkaballapura Latest Breaking New Stories | ಚಿಕ್ಕಬಳ್ಳಾಪುರ ಸುದ್ದಿ.