Chikkaballapur : ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಶ್ರಯದಲ್ಲಿ ಮಂಗಳವಾರ ಹಡಪದ ಅಪ್ಪಣ್ಣ ಜಯಂತಿ (Hadapada Appanna Jayanthi) ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಈ ಸಂಧರ್ಭದಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ಡಾ.ಪಿ.ಎನ್ ರವೀಂದ್ರ “ಅಸಮಾನತೆಯಿಂದ ಕೂಡಿದ್ದ ಸಮಾಜವನ್ನು ಧಿಕ್ಕರಿಸಿ ಜನಮುಖಿ ಸಮಾಜ ನಿರ್ಮಿಸಲು ನಡೆದ ಚಳವಳಿಯನ್ನು ಮುನ್ನಡೆಸಿದವರಲ್ಲಿ ಹಡಪದ ಅಪ್ಪಣ್ಣ ಪ್ರಮುಖರು. ಅವರ ವಚನಗಳ ಮತ್ತು ವಿಚಾರಧಾರೆಗಳು ಸಮಾಜದ ಸರ್ವತೋಮುಖ ವಿಕಾಸಕ್ಕೆ ಸಂಜೀವಿನಿಯಾಗಿದ್ದು ಅವರ ವಚನದಲ್ಲಿ ಲಾಲಿತ್ಯ, ಗುರು, ಲಿಂಗ, ಜಂಗಮ, ನಿಷ್ಠೆ ಇತ್ತು” ಎಂದು ತಿಳಿಸಿದರು.
ಹೆಚ್ಚುವರಿ ಜಿಲ್ಲಾಧಿಕಾರಿ ಎನ್.ಭಾಸ್ಕರ್, ಉಪವಿಭಾಗಾಧಿಕಾರಿ ಅಶ್ವಿನ್, ಈಶ್ವರಪ್ಪ, ರಾಘವೇಂದ್ರ, ನಟರಾಜ್, ಡಿ.ಎಂ.ರವಿಕುಮಾರ್, ಸವಿತಾ ಸಮಾಜದ ಮುಖಂಡರು ಉಪಸ್ಥಿತರಿದ್ದರು.
For Daily Updates WhatsApp ‘HI’ to 7406303366
The post ಹಡಪದ ಅಪ್ಪಣ್ಣ ಜಯಂತಿ ಕಾರ್ಯಕ್ರಮ appeared first on Chikkaballapur | Chikballapur | Chikkaballapura | ಚಿಕ್ಕಬಳ್ಳಾಪುರ ಸುದ್ದಿ.