back to top
19.1 C
Bengaluru
Sunday, July 20, 2025
HomeNewsIsrael ಸೇನೆಯಿಂದ ಗಾಜಾದ ಆಸ್ಪತ್ರೆಯ ಅಡಿಯಲ್ಲಿ Hamas Militants ಗುಹೆ ಪತ್ತೆ

Israel ಸೇನೆಯಿಂದ ಗಾಜಾದ ಆಸ್ಪತ್ರೆಯ ಅಡಿಯಲ್ಲಿ Hamas Militants ಗುಹೆ ಪತ್ತೆ

- Advertisement -
- Advertisement -

Tel Aviv (Israel): ಗಾಜಾ (Gaza) ಮೇಲೆ ಇಸ್ರೇಲ್ ದಾಳಿ ತೀವ್ರವಾಗಿದೆ. ಇತ್ತೀಚೆಗೆ ಗಾಜಾದ ಖಾನ್ ಯೂನಿಸ್‌ದಲ್ಲಿ ಇರುವ ಪ್ರಮುಖ ಆಸ್ಪತ್ರೆಯ ಕೆಳಗೆ ಹಮಾಸ್ ಉಗ್ರರು (Hamas Militants) ಸುರಂಗ ನಿರ್ಮಿಸಿಕೊಂಡಿದ್ದಾರೆ ಎಂದು ಇಸ್ರೇಲ್ ಸೇನೆ (IDF) ತಿಳಿಸಿದೆ. ಈ ಸುರಂಗವನ್ನು ಯೂರೋಪಿಯನ್ ಆಸ್ಪತ್ರೆಯ ಆವರಣದಲ್ಲಿ ಕಂಡುಹಿಡಿದಿದ್ದಾರೆ.

ಹಮಾಸ್ ನ ಹಿರಿಯ ನಾಯಕರು ಈ ಸುರಂಗವನ್ನು ತಮ್ಮ ಕಮಾಂಡ್ ಸೆಂಟರ್ ಆಗಿ ಮತ್ತು ಇಸ್ರೇಲ್ ಮೇಲೆ ದಾಳಿ ಮಾಡಲು ಬಳಸುತ್ತಿದ್ದಾರಂತೆ. ಐಡಿಎಫ್ ಸಾಮಾಜಿಕ ಜಾಲತಾಣದಲ್ಲಿ ಈ ಸುರಂಗದ ವೀಡಿಯೋವನ್ನು ಹಂಚಿಕೊಂಡಿದೆ. ವೀಡಿಯೋದಲ್ಲಿ ರೈಫಲ್, ಶಸ್ತ್ರಾಸ್ತ್ರ, ಕಣ್ಗಾವಲು ಉಪಕರಣಗಳು ಮತ್ತು ಮತ್ತಿತರ ಸಲಕರಣೆಗಳೂ ಕಂಡು ಬರುತ್ತಿವೆ.

ಈ ವಿಶೇಷ ಕಾರ್ಯಾಚರಣೆ ಗೋಲನ್ ಬ್ರಿಗೇಡ್, ಯಹಲೋಮ್ ಘಟಕ ಮತ್ತು ಇಸ್ರೇಲ್ ಗುಪ್ತಚರ ತಂಡಗಳ ನೇತೃತ್ವದಲ್ಲಿ ನಡೆದಿದ್ದು, ಹಮಾಸ್ ಉಗ್ರರು ಆಸ್ಪತ್ರೆಗಳನ್ನು ತಮ್ಮ ಉದ್ದೇಶಗಳಿಗೆ ಬಳಸುತ್ತಿದ್ದು ನಾಗರಿಕರಿಗೆ ಹಾನಿ ಮಾಡುತ್ತಿರುವುದು ಆರೋಪಿಸಿದೆ.

2023ರಲ್ಲಿ ಕೂಡ ಗಾಜಾದ ಅಲ್ ಶಿಫಾ ಆಸ್ಪತ್ರೆಯ ಅಡಿಯಲ್ಲಿ ಸುರಂಗಗಳನ್ನು ಕಂಡುಹಿಡಿದು, ಅವುಗಳನ್ನು ನಾಶ ಮಾಡಲು ದಾಳಿ ನಡೆಸಿದ್ದಾಗ ಅನೇಕ ನಿರಪಾಯರು ಮೃತಪಟ್ಟಿದ್ದರು. ಆದರೆ ಪ್ಯಾಲೇಸ್ಟಿನಿಯನ್ ಅಧಿಕಾರಿಗಳು ಇದನ್ನು ಸುಳ್ಳು ಎನ್ನುತ್ತಿದ್ದಾರೆ.

ಈಗಾಗಲೇ 2023ರ ಅಕ್ಟೋಬರ್‌ ನಿಂದ ಇಸ್ರೇಲ್-ಹಮಾಸ್ ಯುದ್ಧದಲ್ಲಿ 53,000ಕ್ಕೂ ಹೆಚ್ಚು ಜನರು ಸಾವು ಹೊಂದಿದ್ದಾರೆ ಎಂದು ಗಾಜಾದ ಆಡಳಿತ ಹೇಳಿದೆ. ಕಳೆದ 24 ಗಂಟೆಗಳಲ್ಲಿ 60 ಜನರು ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.

ಇಸ್ರೇಲ್ ಅಧ್ಯಕ್ಷ ಬೆಂಜಮಿನ್ ನೆತನ್ಯಾಹು ಕೆಲವು ದಿನಗಳ ಹಿಂದೆ ಮಾತನಾಡುತ್ತಾ, ನಾವು ಸಂಪೂರ್ಣ ಗಾಜಾವನ್ನೇ ನಿಯಂತ್ರಣಕ್ಕೆ ತೆಗೆದುಕೊಳ್ಳುತ್ತೇವೆ. ಈ ವಿಚಾರವಾಗಿ ಹಿಂದೆ ಸರಿಯುವ ಮಾತೇ ಇಲ್ಲ ಎಂದಿದ್ದರು.

For Daily Updates WhatsApp ‘HI’ to 7406303366

- Advertisement -
Latest news
- Advertisement -
Related news
- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!

You cannot copy content of this page