![](https://kannadatopnews.com/wp-content/uploads/2023/12/25DecCbp.jpg)
Chikkaballapur : ಹನುಮ ಜಯಂತಿಯ (Hanuman Jayanthi) ಪ್ರಯುಕ್ತ ಭಾನುವಾರ ಚಿಕ್ಕಬಳ್ಳಾಪುರ ಜಿಲ್ಲೆಯಾದ್ಯಂತ ಆಂಜನೇಯ ಸ್ವಾಮಿ ದೇವಸ್ಥಾನಗಳಲ್ಲಿ ಶ್ರದ್ಧಾಭಕ್ತಿ ಮತ್ತು ಸಡಗರದಿಂದ ವಿವಿಧ ಧಾರ್ಮಿಕ ಕಾರ್ಯಗಳು ನಡೆದವು.
ನಗರದ ಹೊರವಲಯದ ಆದಿಚುಂಚನಗಿರಿ ಶಾಖಾ ಮಠದ ವೀರಾಂಜನೇಯಸ್ವಾಮಿ ದೇವಾಲಯದಲ್ಲಿ ನಿರ್ಮಲಾನಂದನಾಥ ಸ್ವಾಮೀಜಿ ಅವರ ನೇತೃತ್ವದಲ್ಲಿ ಅದ್ಧೂರಿಯಾಗಿ ಹನುಮ ಜಯಂತಿ ಆಚರಿಸಲಾಯಿತು. ಎಚ್.ಎಸ್.ಗಾರ್ಡನ್‌ನ ಆಂಜನೇಯಸ್ವಾಮಿ ದೇವಾಲಯದಲ್ಲಿ, ಗಂಗಮ್ಮನ ಗುಡಿ ಬೀದಿಯಲ್ಲಿರುವ ಪೇಟೆ ಆಂಜನೇಯಸ್ವಾಮಿ ದೇವಾಲಯ, ಹಳೇ ಪೊಲೀಸ್ ಠಾಣೆ ರಸ್ತೆಯ ಜೀವಾಂಜನೇಯಸ್ವಾಮಿ, ಇಂದಿರಾ ನಗರದ ಅಭಯ ಆಂಜನೇಯಸ್ವಾಮಿ, ಹಳೇ ಜಿಲ್ಲಾಸ್ಪತ್ರೆಯ ಪಂಚಮುಖಿ ಆಂಜನೇಯಸ್ವಾಮಿ ದೇವಾಲಯ ಸೇರಿದಂತೆ ಅನೇಕ ಕಡೆಗಳಲ್ಲಿ ಆಂಜನೇಯನ ಆರಾಧನೆ ನಡೆಯಿತು.
ಶಿಡ್ಲಘಟ್ಟ :
![Hanuman Jayanthi Sidlaghatta](https://kannadatopnews.com/wp-content/uploads/2023/12/24DecSd02b-1024x683-1.jpg)
ಶಿಡ್ಲಘಟ್ಟ ನಗರದ ಕೋಟೆ ಆಂಜನೇಯಸ್ವಾಮಿ, ಮಯೂರ ವೃತ್ತದ ಆಂಜನೇಯಸ್ವಾಮಿ, ಚಿಂತಾಮಣಿ ರಸ್ತೆಯಲ್ಲಿರುವ ವೀರಾಂಜನೇಯಸ್ವಾಮಿ, ಅಪ್ಪೇಗೌಡನಹಳ್ಳಿ ಆಂಜನೇಯಸ್ವಾಮಿ, ಅಪ್ಪೇಗೌಡನಹಳ್ಳಿ ಗೇಟ್ ಬಯಲಾಂಜನೇಯಸ್ವಾಮಿ, ಮುತ್ತೂರು ಗ್ರಾಮ, ನಾಗಮಂಗಲ ಅಭಯ ಹಸ್ತಾಂಜನೇಯಸ್ವಾಮಿ ದೇವಾಲಯ ಹಾಗೂ ಎಚ್.ಕ್ರಾಸ್, ಚೊಕ್ಕಂಡಹಳ್ಳಿ, ಎದ್ದಲತಿಪ್ಪೇನಹಳ್ಳಿ, ಜಂಗಮಕೋಟೆ ಕ್ರಾಸ್ ಮುಂತಾದೆಡೆ ಶ್ರದ್ಧಾ ಭಕ್ತಿಯಿಂದ ಹನುಮ ಜಯಂತಿ ಆಚರಿಸಲಾಯಿತು.
ಚಿಂತಾಮಣಿ :
![Hanuman Jayanthi Chintamani](https://kannadatopnews.com/wp-content/uploads/2023/12/25DecChintamani-1024x683-1.jpg)
ಚಿಂತಾಮಣಿ ನಗರದ ವರದಾದ್ರಿ ಬೆಟ್ಟದ ಮೇಲಿನ ಆಂಜನೇಯಸ್ವಾಮಿ ದೇವಾಲಯ, ಕನಂಪಲ್ಲಿ ಪಂಚಮುಖಿ ಆಂಜನೇಯಸ್ವಾಮಿ ದೇವಾಲಯ ಕುರುಟಹಳ್ಳಿ ವೀರಾಂಜನೇಯಸ್ವಾಮಿ ದೇವಾಲಯ, : ಆಲಂಬಗಿರಿ ಆಂಜನೇಯಸ್ವಾಮಿ ದೇವಾಲಯ, ನಗರದ ನಾರಸಿಂಹಪೇಟೆಯ ವೀರಾಂಜನೇಯಸ್ವಾಮಿ, ಅಂಬಾಜಿ ದುರ್ಗದ ಬೆಟ್ಟದ ಅಭಯ ಆಂಜನೇಯಸ್ವಾಮಿ, ಬೂರಗಮಾಕಲಹಳ್ಳಿಯ ವೀರಾಂಜನೇಯಸ್ವಾಮಿ, ಕಂಗಾನಹಳ್ಳಿ ಆಂಜನೇಯಸ್ವಾಮಿ, ವೀರಪ್ಪಲ್ಲಿ ಗ್ರಾಮದ ಅಭಯ ಆಂಜನೇಯಸ್ವಾಮಿ ದೇವಾಲಯ ಸೇರಿದಂತೆ ವಿವಿಧ ದೇವಾಲಯಗಳಲ್ಲಿ ವಿಶೇಷ ಅಲಂಕಾರ, ಪೂಜೆ ಮತ್ತಿತರ ಧಾರ್ಮಿಕ ಕಾರ್ಯಕ್ರಮಗಳು ನೆರವೇರಿದವು.
ಚೇಳೂರು:
![Hanuman Jayanthi Chelur](https://kannadatopnews.com/wp-content/uploads/2023/12/25DecChelur-1024x683-1.jpg)
ಚೇಳೂರು ಪಟ್ಟಣದ ಇತಿಹಾಸ ಪ್ರಸಿದ್ಧ ಕೋದಂಡ ರಾಮಸ್ವಾಮಿ ದೇವಾಲಯದಲ್ಲಿ ಭಾನುವಾರ ಹನುಮ ಜಯಂತಿಯನ್ನು ವಿಜೃಂಭಣೆಯಿಂದ ಆಚರಿಸಲಾಯಿತು.
ಬಾಗೇಪಲ್ಲಿ:
![Hanuman Jayanthi Bagepalli](https://kannadatopnews.com/wp-content/uploads/2023/12/25DecBagepalli-1024x683-1.jpg)
ಬಾಗೇಪಲ್ಲಿ ಪಟ್ಟಣದ ಬೈಲಾಂಜನೇಯಸ್ವಾಮಿ, ಗಡಿದಂ ಬೆಟ್ಟದ ಪಕ್ಕದಲ್ಲಿನ ಎರಡು ಕಣ್ಣಿನ ಆಂಜನೇಯ ಸೇರಿದಂತೆ ಶ್ರೀರಾಮ ಹಾಗೂ ಆಂಜನೇಯ ದೇವಾಲಯಗಳಲ್ಲಿ ಭಾನುವಾರ ಹನುಮ ಜಯಂತಿ ಅಂಗವಾಗಿ ಪೂಜಾ ಕೈಂಕಾರ್ಯಗಳು ನಡೆದವು.
ಗೌರಿಬಿದನೂರು:
![Hanuman Jayanthi Gauribidanur](https://kannadatopnews.com/wp-content/uploads/2023/12/25DecGauribidanur-1024x683-1.jpg)
ಗೌರಿಬಿದನೂರು ನಗರದ ನದಿ ದಡ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ಭಾನುವಾರ ಹನುಮ ಜಯಂತಿ ಪ್ರಯುಕ್ತ ರಥೋತ್ಸವ ವಿಜೃಂಭಣೆಯಿಂದ ನಡೆಯಿತು.
For Daily Updates WhatsApp ‘HI’ to 7406303366
Follow Chikkaballapur District News
Facebook: https://www.facebook.com/hicbpur
Twitter: https://twitter.com/hicbpur
The post ಜಿಲ್ಲೆಯಾದ್ಯಂತ ಹನುಮನ ಸ್ಮರಣೆ appeared first on Chikkaballapur.