back to top
25.5 C
Bengaluru
Thursday, July 24, 2025
HomeKarnatakaMysuruಒಂದೇ ವಾರದಲ್ಲಿ ಬೋನಿಗೆ ಬಿದ್ದ 3 ಚಿರತೆಗಳು

ಒಂದೇ ವಾರದಲ್ಲಿ ಬೋನಿಗೆ ಬಿದ್ದ 3 ಚಿರತೆಗಳು

- Advertisement -
- Advertisement -

Mysuru: ಹೆಚ್.ಡಿ.ಕೋಟೆ (H.D Kote) ಪಟ್ಟಣದ ಬಳಿಯ ಡ್ರೈವರ್ ಕಾಲೋನಿ ಸಮೀಪ 7 ವರ್ಷದ ಗಂಡು ಚಿರತೆಯೊಂದು ಅರಣ್ಯ ಇಲಾಖೆ (Forest department) ಇರಿಸಿದ್ದ ಬೋನಿಗೆ ಬಿದ್ದಿದೆ. ಒಂದೇ ವಾರದಲ್ಲಿ ಒಂದೇ ಜಾಗದಲ್ಲಿ 3 ಚಿರತೆ (Leopard) ಸೆರೆಸಿಕ್ಕಿರುವುದರಿಂದ, ಸುತ್ತಮುತ್ತಲ ಗ್ರಾಮಸ್ಥರು, ರೈತರು ಕಾಡು ಪ್ರಾಣಿಗಳ ದಾಳಿಯ ಆತಂಕಕ್ಕೆ ಒಳಗಾಗಿದ್ದಾರೆ.

ರೈತ ರಾಮಕೃಷ್ಣ ಅವರ ಜಮೀನಿನಲ್ಲಿ ಕೋಟೆ ವಲಯ ಅರಣ್ಯಾಧಿಕಾರಿಗಳು ಇರಿಸಿದ್ದ ಬೋನಿನಲ್ಲಿ ಚಿರತೆ ಸೆರೆಯಾಗಿದೆ. ಒಂದು ವಾರದ ಹಿಂದೆ ರೈತ ಗುಂಡು ಮಲ್ಲು ಅವರ ಜಮೀನಿನಲ್ಲಿ 2 ಚಿರತೆಗಳು ಸೆರೆಸಿಕ್ಕಿದ್ದವು.

5 ವರ್ಷದ ಗಂಡು ಚಿರತೆ ಬೋನಿಗೆ ಬಿದ್ದ ಮೂರೇ ದಿನದಲ್ಲಿ ಮತ್ತೊಂದು ಚಿರತೆ ಬೋನಿಗೆ ಬಿದ್ದಿತ್ತು. ಇದೀಗ ಏಳು ವರ್ಷದ ಗಂಡು ಚಿರತೆ ಬೋನಿಗೆ ಬಿದ್ದಿರುವುದು ಆತಂಕಕ್ಕೆ ಕಾರಣವಾಗಿದೆ.

ಈ ಪ್ರದೇಶದಲ್ಲಿ ಇನ್ನಷ್ಟು ಕಾಡುಪ್ರಾಣಿಗಳಿರುವ ಸಾಧ್ಯತೆಯಿದ್ದು ಜನರ ಮೇಲೆ ದಾಳಿ ಮಾಡಿದರೆ ಎಂಬುದು ಸ್ಥಳೀಯರ ಆತಂಕವಾಗಿದೆ.

For Daily Updates WhatsApp ‘HI’ to 7406303366

- Advertisement -
Latest news
- Advertisement -
Related news
- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!

You cannot copy content of this page