Bengaluru (Bangalore) : ಹೆಬ್ಬಾಳ (Hebbal), ಕೆ.ಆರ್.ಪುರ (K.R.Puram) ಮತ್ತು ಗೊರಗುಂಟೆಪಾಳ್ಯ (Goraguntepalya) ಜಂಕ್ಷನ್‌ನಲ್ಲಿ ಸಂಚಾರ ದಟ್ಟಣೆ (Traffic Jam) ಕಡಿಮೆ ಮಾಡಲು BBMP, BDA, BESCom, ಜಲ ಮಂಡಳಿ (BWSSB) ಅಧಿಕಾರಿಗಳು ಮಂಗಳವಾರ ತಡರಾತ್ರಿ ಸ್ಥಳ ತಪಾಸಣೆ ನಡೆಸಿ ತಾತ್ಕಾಲಿಕ ಮತ್ತು ದೀರ್ಘಾವಧಿಯ ಯೋಜನೆಗಳನ್ನು ಕೈಗೆತ್ತಿಕೊಳ್ಳಲು ನಿರ್ಧರಿಸಿತು.
ಈ ವೇಳೆ ಮಾತನಾಡಿದ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ (Tushar Giri Nath IAS) “ತುಮಕೂರು (Tumkur) ರಸ್ತೆಯಿಂದ ಬಳ್ಳಾರಿ (Ballery) ರಸ್ತೆ ಕಡೆಗೆ ಹೋಗುವ ಸರ್ವೀಸ್ ರಸ್ತೆ ವಿಸ್ತರಣೆ ಮಾಡಿ ಎಸ್ಟೀಮ್ ಮಾಲ್ (Esteem Mall) ಮುಂಭಾಗ ರಸ್ತೆಯಲ್ಲಿ ಬಸ್‌ಗಳು ನಿಲ್ಲುವುದನ್ನು ತಪ್ಪಿಸುವುದು. ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ (Kempegowda International Airport) ಕಡೆಯಿಂದ ಬಳ್ಳಾರಿ ರಸ್ತೆಯ ಮೂಲಕ ಮೇಲ್ಸೇತುವೆಯಿಂದ ಬರುವ ವಾಹನಗಳನ್ನು ನೇರವಾಗಿ ಹೆಬ್ಬಾಳದ ಮೇಲುಸೇತುವೆ ಮೂಲಕ ಹಾದು ಹೋಗುವಂತೆ ಮಾಡುವುದರಿಂದ ದಟ್ಟನೆ ಕಡಿಮೆ ಆಗಲಿದೆ. ಹೆಬ್ಬಾಳ ಮೇಲ್ಸೇತುವೆ ಕೆಳಗೆ ಕೆ.ಆರ್.ಪುರದ ಕಡೆಗೆ ಹೋಗುವ ಬಸ್‌ಗಳು ನಿಲ್ಲುವುದರಿಂದ ತೊಂದರೆ ಆಗುತ್ತಿದ್ದು ರಸ್ತೆ ವಿಭಜಕಗಳನ್ನು ಅಳವಡಿಸಿ ಕೆಳಗಿನ ರಸ್ತೆಗಳಿಂದ ಬರುವ ವಾಹನಗಳು ಮೇಲ್ಸೇತುವೆಗೆ ಹೋಗಲು ಅನುವು ಮಾಡಿಕೊಡದಿದ್ದರೆ ಟ್ರಾಫಿಕ್ ಜಾಮ್ ಸಮಸ್ಯೆಗೆ ಸ್ವಲ್ಪ ಪರಿಹಾರ ದೊರೆಯಲಿದೆ” ಎಂದು ಹೇಳಿದರು.
ಬಿಬಿಎಂಪಿ ಆಡಳಿತಾಧಿಕಾರಿ ರಾಕೇಶ್ ಸಿಂಗ್, ಜಲಮಂಡಳಿ ಅಧ್ಯಕ್ಷ ಎನ್. ಜಯರಾಮ್, ಬಿಡಿಎ ಆಯುಕ್ತ ರಾಜೇಶ್‌ಗೌಡ, ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕಿ ಜಿ.ಸತ್ಯವತಿ, ಸಂಚಾರ ಪೋಲಿಸ್ ಜಂಟಿ ಆಯುಕ್ತ ರವಿಕಾಂತೇಗೌಡ, ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ರಾಜೇಂದ್ರ ಚೋಳನ್ ಮತ್ತಿತರರು ಉಪಸ್ಥಿತರಿದ್ದರು.