back to top
24.3 C
Bengaluru
Thursday, August 14, 2025
HomeKarnatakaHigh Court ನಿಂದ ತನಿಖೆಗೆ ತಡೆ–Priyank Kharge ರಾಜೀನಾಮೆಗೆ ಆಗ್ರಹಿಸಿ BJP ಮುಖಂಡರ ಪ್ರತಿಭಟನೆ

High Court ನಿಂದ ತನಿಖೆಗೆ ತಡೆ–Priyank Kharge ರಾಜೀನಾಮೆಗೆ ಆಗ್ರಹಿಸಿ BJP ಮುಖಂಡರ ಪ್ರತಿಭಟನೆ

- Advertisement -
- Advertisement -

Bengaluru: ಸಚಿವ ಪ್ರಿಯಾಂಕ್ ಖರ್ಗೆ ರಾಜೀನಾಮೆ (Priyank Kharge) ನೀಡಬೇಕು ಎಂಬ ಒತ್ತಾಯದೊಂದಿಗೆ, ಡಿಸೆಂಬರ್ 31, 2024ರಂದು ಬೆಳಿಗ್ಗೆ 10 ಗಂಟೆಗೆ ಮಾಧವನಗರ ಜಂಕ್ಷನ್ ಬಳಿ ಬಿಜೆಪಿ ಮುಖಂಡ ಛಲವಾದಿ ನಾರಾಯಣಸ್ವಾಮಿ ನೇತೃತ್ವದಲ್ಲಿ ಕೆಲ ನಾಯಕರು ಮತ್ತು ಕಾರ್ಯಕರ್ತರು ರಸ್ತೆ ಮೇಲೆ ಪ್ರತಿಭಟನೆ ನಡೆಸಿದರು.

ಈ ಸಂದರ್ಭ, ಸಾರ್ವಜನಿಕರ ಸಂಚಾರಕ್ಕೆ ಅಡ್ಡಿ ಉಂಟುಮಾಡಿದ್ದು, ಸಾರ್ವಜನಿಕ ಶೌಚಾಲಯದ ಗೋಡೆಯ ಮೇಲೆ “ಸೂಸೈಡ್ ಮತ್ತು ಸುಪಾರಿ ಭಾಗ್ಯ ನೀಡಿದ ಕಾಂಗ್ರೆಸ್ ಸರ್ಕಾರಕ್ಕೆ ಧಿಕ್ಕಾರ” ಎಂಬ ಪೋಸ್ಟರ್ ಅಂಟಿಸಿರುವುದರಿಂದ ನಗರ ಸೌಂದರ್ಯಕ್ಕೆ ಹಾನಿಯಾಗಿದೆ ಎಂಬ ಆರೋಪ ಕೇಳಿಬಂದಿದೆ.

ಈ ಪ್ರಕರಣದಲ್ಲಿ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಆದರೆ, ಬಿಜೆಪಿ ಮುಖಂಡರಾದ ಛಲವಾದಿ ನಾರಾಯಣಸ್ವಾಮಿ, ಸಿ.ಟಿ. ರವಿ, ರವಿಕುಮಾರ್, ಉಮೇಶ್ ಶೆಟ್ಟಿ ಸೇರಿ 12 ಮಂದಿ ಈ ಪ್ರಕರಣವನ್ನು ಪ್ರಶ್ನಿಸಿ ಹೈಕೋರ್ಟ್‌ಗೆ ಮೊರೆಹೋದರು.

ನ್ಯಾಯಮೂರ್ತಿ ಎಸ್.ಆರ್. ಕೃಷ್ಣಕುಮಾರ್ ಅವರ ನೇತೃತ್ವದ ಪೀಠ, ಈ ಆರೋಪಗಳ ಬಗ್ಗೆ ಪೊಲೀಸರು ನಡೆಸುತ್ತಿರುವ ತನಿಖೆಗೆ ತಡೆ ನೀಡಿದ್ದು, ಹೈಗ್ರೌಂಡ್ಸ್ ಪೊಲೀಸರಿಗೆ ನೋಟಿಸ್ ಕಳುಹಿಸಿ ವಿಚಾರಣೆಯನ್ನು ಮುಂದೂಡಿದೆ.

For Daily Updates WhatsApp ‘HI’ to 7406303366

- Advertisement -
Latest news
- Advertisement -
Related news
- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!

You cannot copy content of this page