Bengaluru: ಕರ್ನಾಟಕ ರಾಜ್ಯ ವಕೀಲರ ಪರಿಷತ್ (Bar Council) (KSBC) ಆಡಳಿತ ಮಂಡಳಿಯ 5 ವರ್ಷದ ಅವಧಿ 2023ರ ಜೂನ್‌ನಲ್ಲಿ ಮುಕ್ತಾಯಗೊಂಡಿದ್ದು, ಈಗಲೂ ಹೊಸ ಚುನಾವಣೆ ನಡೆಯದೆ ಇದ್ದ ಹಿನ್ನೆಲೆಯಲ್ಲಿ, ಹಾಲಿ ಆಡಳಿತ ಮಂಡಳಿಯನ್ನು ಪದಿಚ್ಯುತಗೊಳಿಸಿ ಹೊಸ ಚುನಾವಣೆ ನಡೆಸುವ ಬಗ್ಗೆ ಪ್ರತಿಕ್ರಿಯೆ ನೀಡುವಂತೆ ಭಾರತೀಯ ವಕೀಲರ ಪರಿಷತ್ (ಬಿಸಿಐ)ಗೆ ಹೈಕೋರ್ಟ್ (High Court) ಸೂಚಿಸಿದೆ.
ವಕೀಲ ರೆಹಮತ್ ಉಲ್ಲಾ ಕೊತ್ವಾಲ್ ಸಲ್ಲಿಸಿದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಸ್. ಸುನಿಲ್ ದತ್ ಯಾದವ್ ಅವರ ಏಕಸಸ್ಯ ಪೀಠ, ವಕೀಲರ ಕಾಯಿದೆ ಸೆಕ್ಷನ್ 8 ಪ್ರಕಾರ ಹೊಸ ಚುನಾವಣೆಗಾಗಿ ಬಿಸಿಐ ತನ್ನ ನಿಲುವು ಸ್ಪಷ್ಟಪಡಿಸಬೇಕು ಎಂದು ತಿಳಿಸಿದೆ. ಪೀಠವು ಇದೇ ಜುಲೈ 31ಕ್ಕೆ ವಿಚಾರಣೆಯನ್ನು ಮುಂದೂಡಿದೆ.
ಕೆಎಸ್ಬಿಸಿ ಪರ ವಕೀಲರು ಸಲ್ಲಿಸಿದ ವಾದದಲ್ಲಿ, ವಕೀಲರ ಪರಿಷತ್ ಅಧಿಕಾರಾವಧಿಯ ನಂತರ 18 ತಿಂಗಳವರೆಗೆ ಪ್ರಮಾಣಪತ್ರ ಮತ್ತು ವೃತ್ತಿ ಸ್ಥಳ ಪರಿಶೀಲನೆ ಮಾಡಬಹುದೆಂದು 2015ರ ನಿಯಮ 32 ತಿದ್ದುಪಡಿಯು ಅವಕಾಶ ನೀಡಿದೆ. ಈ ಅವಧಿ ಮೇ 2025ರಲ್ಲಿ ಮುಕ್ತಾಯವಾಗಲಿದ್ದು, ಆ ನಂತರವೂ ಮತದಾರರ ಪರಿಶೀಲನೆಗಾಗಿ ಆರು ತಿಂಗಳಲ್ಲಿ ಚುನಾವಣೆ ನಡೆಸಲು ಅವಕಾಶವಿದ್ದು, ಅದು ನವೆಂಬರ್ 2025ಕ್ಕೆ ಮುಕ್ತಾಯವಾಗಲಿದೆ. ಈ ಎಲ್ಲ ಕಾರಣಗಳಿಂದಾಗಿ ಈಗಲೇ ಚುನಾವಣೆ ನಡೆಸುವುದು ಕಷ್ಟಕರ ಎಂದು ವಾದಿಸಿದ್ದಾರೆ.
ಅರ್ಜಿದಾರರು ವಕೀಲರ ಕಾಯಿದೆ 1961ರ ಸೆಕ್ಷನ್ 8ನಡಿ, ಕಾನೂನು ವ್ಯವಸ್ಥೆ, ಪಾರದರ್ಶಕತೆ ಹಾಗೂ ಪ್ರಜಾಪ್ರಭುತ್ವಕ್ಕಾಗಿ ತಕ್ಷಣವೇ ಚುನಾವಣೆ ನಡೆಸಬೇಕು ಎಂದು ಹುರಿದುಬಿಡಿದರು. 2025ರ ಜನವರಿ 7ರಂದು ಅವರು ಸಲ್ಲಿಸಿದ ಮನವಿಯನ್ನೂ ಪರಿಗಣಿಸಲು ಬಿಸಿಐಗೆ ನಿರ್ದೇಶನ ನೀಡಬೇಕೆಂದು ಬೇಡಿಕೆ ಇಟ್ಟಿದ್ದಾರೆ. ಹಾಲಿ ಆಡಳಿತ ಮಂಡಳಿಯ ಅವಧಿಯನ್ನು ಹೆಚ್ಚಿಸುವ ಬಿಸಿಐ ನಿರ್ಧಾರ ಕಾನೂನಿಗೆ ವಿರುದ್ಧವಾಗಿದೆ ಎಂದು ಅವರು ಹೈಕೋರ್ಟ್‌ಗೆ ವಿವರಿಸಿದರು.