back to top
21.4 C
Bengaluru
Tuesday, October 7, 2025
HomeKarnatakaOnline Gaming Act ವಿರುದ್ಧ ಹೈಕೋರ್ಟ್ ಅರ್ಜಿ – ಆಗಸ್ಟ್ 30ಕ್ಕೆ ವಿಚಾರಣೆ

Online Gaming Act ವಿರುದ್ಧ ಹೈಕೋರ್ಟ್ ಅರ್ಜಿ – ಆಗಸ್ಟ್ 30ಕ್ಕೆ ವಿಚಾರಣೆ

- Advertisement -
- Advertisement -

Bengaluru: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಆನ್‌ಲೈನ್ ಗೇಮಿಂಗ್ ಪ್ರಚಾರ ಮತ್ತು ನಿಯಂತ್ರಣ ಕಾಯಿದೆ-2025 (Online Gaming Act) ವಿರುದ್ಧ ಹೈಕೋರ್ಟಿನಲ್ಲಿ ಅರ್ಜಿ ಸಲ್ಲಿಸಲಾಗಿದೆ. ಈ ಅರ್ಜಿಯ ವಿಚಾರಣೆ ಆಗಸ್ಟ್ 30ರಂದು ನಡೆಯಲಿದೆ.

ಎ23 ರಮ್ಮಿ ಎಂಬ ಆನ್‌ಲೈನ್ ಗೇಮ್ (Online Gaming) ನಡೆಸುವ ಹೆಡ್ ಡಿಜಿಟಲ್ ವರ್ಕ್ಸ್ ಪ್ರೈವೇಟ್ ಲಿಮಿಟೆಡ್ ಕಂಪನಿ ಅರ್ಜಿ ಸಲ್ಲಿಸಿದೆ.

ಕಾಯಿದೆಯ ಮುಖ್ಯ ಅಂಶಗಳು

  • ಹಣವನ್ನು ಪಣಕ್ಕಿಟ್ಟು ಆಡುವ ಆನ್‌ಲೈನ್ ಜೂಜಾಟಗಳಿಗೆ ನಿಷೇಧ.
  • ಕೌಶಲ್ಯ ಆಧಾರಿತ ಆನ್‌ಲೈನ್ ಕ್ರೀಡೆಗಳನ್ನು ಜೂಜಿನಿಂದ ಪ್ರತ್ಯೇಕ ಗುರುತು.
  • ಗ್ರಾಹಕರಿಗೆ ರಕ್ಷಣಾ ವ್ಯವಸ್ಥೆ.
  • ನಿಯಂತ್ರಣಕ್ಕಾಗಿ ರಾಷ್ಟ್ರೀಯ ಇ-ಪ್ರಾಧಿಕಾರ ರಚನೆ.
  • ಕಂಪನಿಗಳ ನೋಂದಣಿ, ಸುರಕ್ಷತೆ, ದೂರುಗಳ ವಿಚಾರಣೆ.
  • ವಾರೆಂಟ್ ಇಲ್ಲದೇ ತನಿಖಾಧಿಕಾರಿಗಳಿಗೆ ಬಂಧನ ಹಾಗೂ ಆಸ್ತಿ ವಶಪಡಿಸಿಕೊಳ್ಳುವ ಅಧಿಕಾರ.

ಶಿಕ್ಷೆ ಮತ್ತು ದಂಡ

  • ಕಾನೂನು ಉಲ್ಲಂಘಿಸಿದರೆ 3 ವರ್ಷ ಜೈಲು ಅಥವಾ 1 ಕೋಟಿ ರೂ. ದಂಡ ಅಥವಾ ಎರಡೂ.
  • ಗೇಮಿಂಗ್ ಪ್ರಚಾರ ಮಾಡಿದರೆ 2 ವರ್ಷ ಜೈಲು ಅಥವಾ 50 ಲಕ್ಷ ರೂ. ದಂಡ ಅಥವಾ ಎರಡೂ.

ಈ ಮಸೂದೆಗೆ ಲೋಕಸಭೆ ಮತ್ತು ರಾಜ್ಯಸಭೆ ಒಪ್ಪಿಗೆ ನೀಡಿ, ರಾಷ್ಟ್ರಪತಿ ಆಗಸ್ಟ್ 22ರಂದು ಅನುಮತಿ ನೀಡಿದ್ದಾರೆ. ಈಗ ಇದು ಕಾನೂನಾಗಿ ಜಾರಿಗೆ ಬಂದಿದೆ. ಅದನ್ನು ಪ್ರಶ್ನಿಸಿ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಕೆಯಾಗಿದೆ.

For Daily Updates WhatsApp ‘HI’ to 7406303366

- Advertisement -
Latest news
- Advertisement -
Related news
- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!

You cannot copy content of this page