Bengaluru: ಸರ್ಕಾರಿ ಆಸ್ಪತ್ರೆಗಳ ಆವರಣದಲ್ಲಿರುವ ಜನೌಷಧ (Janaushadhi) ಕೇಂದ್ರಗಳನ್ನು ಮುಚ್ಚುವಂತೆ ರಾಜ್ಯ ಸರ್ಕಾರ ನೀಡಿದ್ದ ಆದೇಶಕ್ಕೆ ಕರ್ನಾಟಕ ಹೈಕೋರ್ಟ್ (High Court) ತಡೆಯಾಜ್ಞೆ ನೀಡಿದೆ. ಇದರ ಫಲ ಸರ್ಕಾರದ ನಿರ್ಧಾನಕ್ಕೆ ತಡೆಯಾಗಿದೆ.
ರಾಜ್ಯ ಸರ್ಕಾರವು ಸಾರ್ವಜನಿಕ ಆಸ್ಪತ್ರೆಗಳೊಳಗಿನ ಜನೌಷಧಿ ಕೇಂದ್ರಗಳನ್ನು ತಾತ್ಕಾಲಿಕವಾಗಿ ಮುಚ್ಚಲು ಆದೇಶ ಹೊರಡಿಸಿತ್ತು. ಆದರೆ ಈ ನಿರ್ಧಾರಕ್ಕೆ ಸಾರ್ವಜನಿಕರಿಂದ ಹಾಗೂ ವಿರೋಧ ಪಕ್ಷಗಳಿಂದ ಭಾರೀ ವಿರೋಧ ವ್ಯಕ್ತವಾಯಿತು. ಹೈಕೋರ್ಟ್ ಮುಂದೆ 16 ಮಂದಿ ಅರ್ಜಿ ಸಲ್ಲಿಸಿದ್ದು, ನ್ಯಾಯಮೂರ್ತಿ ಎಂ.ಐ. ಅರುಣ್ ಅವರಿದ್ದ ಪೀಠ, ಮುಂದಿನ ವಿಚಾರಣೆಯವರೆಗೆ ಜನೌಷಧಿ ಕೇಂದ್ರಗಳನ್ನು ಮುಚ್ಚಬಾರದು ಎಂದು ಮಧ್ಯಂತರ ತೀರ್ಪು ನೀಡಿದೆ.
ಈ ಕೇಂದ್ರಗಳು ಬಡ ಜನರಿಗೆ ಕಡಿಮೆ ಬೆಲೆಗೆ ಔಷಧಿಗಳನ್ನು ನೀಡುತ್ತಿರುವ ಹಿನ್ನೆಲೆಯಲ್ಲಿ ಮುಚ್ಚುವುದು ಅಮಾನವೀಯ ಎಂದು ಬಿಜೆಪಿ ಸೇರಿದಂತೆ ಹಲವರು ಆಕ್ಷೇಪ ವ್ಯಕ್ತಪಡಿಸಿದ್ದರು. ವಿರೋಧ ಪಕ್ಷಗಳು ಈ ನಿರ್ಧಾರವನ್ನು ಹಿಂಪಡೆಯುವಂತೆ ಸರ್ಕಾರವನ್ನು ಒತ್ತಾಯಿಸಿವೆ.
ಸರ್ಕಾರವು ವೈದ್ಯರು ರೋಗಿಗಳಿಗೆ ಹೊರಗಿನಿಂದ ಬ್ರಾಂಡೆಡ್ ಔಷಧಿಗಳನ್ನು ತರುವಂತೆ ಸಲಹೆ ನೀಡಬಾರದು ಎಂಬ ನಿರ್ಧಾರ ಕೈಗೊಂಡಿದೆ. ಇದನ್ನೇ ಆಧಾರವಾಗಿ ಜನೌಷಧಿ ಕೇಂದ್ರಗಳು ಸರ್ಕಾರದ ನೀತಿಗೆ ವಿರುದ್ಧ ಎನ್ನಲಾಗಿದೆ.
ಭಾರತೀಯ ಔಷಧ ಮಂಡಳಿ (BPPI) ಈ ಕೇಂದ್ರಗಳ ನೋಡಲ್ ಸಂಸ್ಥೆಯಾಗಿದೆ. ಸರ್ಕಾರದ ನಿಯಮದಂತೆ ಈ ಕೇಂದ್ರಗಳನ್ನು ಮುಚ್ಚಬೇಕೆಂದು ಹೇಳಲಾಗಿತ್ತು ಮತ್ತು ಹೊಸ 31 ಕೇಂದ್ರಗಳಿಗೆ ಅನುಮತಿ ನೀಡದಂತೆ ಸೂಚನೆ ಕೂಡ ನೀಡಲಾಗಿತ್ತು. ಆದರೆ ಈಗ ಹೈಕೋರ್ಟ್ ತಡೆಯಾಜ್ಞೆ ನೀಡಿದ್ದು, ಕೇಂದ್ರಗಳು ಮುಂದುವರಿಯಲಿವೆ.