ಕರ್ನಾಟಕದಲ್ಲಿ ಒಂದೇ ರೀತಿಯ ಸಿನಿಮಾ ಟಿಕೆಟ್ ದರವನ್ನು ಜಾರಿಗೆ ತರಲು ಸರ್ಕಾರ 200 ರೂ. ದರ ನಿಗದಿ ಮಾಡಿತ್ತು. ಆದರೆ, multiplexes ಹಾಗೂ ಹೊಂಬಾಳೆ ಫಿಲ್ಮ್ಸ್ ಈ ಆದೇಶವನ್ನು ಹೈಕೋರ್ಟ್‌ಗೆ ಪ್ರಶ್ನೆ ಮಾಡಿದ್ದರು. ಹೈಕೋರ್ಟ್ ಈಗ ಮಧ್ಯಂತರ ತಡೆಯಾಜ್ಞೆ ನೀಡಿದ್ದು, ‘ಕಾಂತಾರ: ಚಾಪ್ಟರ್ 1’ ಚಿತ್ರದ ರಿಲೀಸ್ ಸಂದರ್ಭದಲ್ಲಿ ಈ ಬೆಳವಣಿಗೆ ನಡೆದಿದೆ.
Multiplexe ನಲ್ಲಿ ಟಿಕೆಟ್ ದರ ಹೆಚ್ಚಾಗಿ ಜನರಿಗೆ ತೊಂದರೆ ಮಾಡುತ್ತಿತ್ತು. ಆದಕಾರಣ ಸರ್ಕಾರ ಟಿಕೆಟ್ ಬೆಲೆಗೆ ಕಡಿವಾಣ ಹಾಕಲು ಮುಂದಾಯಿತು. ಸೆಪ್ಟೆಂಬರ್ 12ರಂದು 200 ರೂ. ಟಿಕೆಟ್ ಬೆಲೆ ಜೊತೆಗೆ 18% ತೆರಿಗೆಯೊಂದಿಗೆ 236 ರೂ. ಕ್ಕಿಂತ ಹೆಚ್ಚು ದರ ಹಾಕಬಾರದೆಂದು ಆದೇಶ ಜಾರಿಗೆ ಬಂದಿತ್ತು. ಆದರೆ, ಎರಡು ವಾರಕ್ಕೂ ಈ ಆದೇಶಕ್ಕೆ ಹೈಕೋರ್ಟ್ ಬ್ರೇಕ್ ಬಿದ್ದಿದೆ.
‘ಕಾಂತಾರ: ಚಾಪ್ಟರ್ 1’ ಚಿತ್ರ ಅಕ್ಟೋಬರ್ 2ರಂದು ರಿಲೀಸ್ ಆಗಲಿದೆ. ದೊಡ್ಡ ಬಜೆಟ್‌ನಲ್ಲಿ ನಿರ್ಮಾಣವಾದ ಈ ಚಿತ್ರಕ್ಕೆ 200 ರೂ. ಟಿಕೆಟ್ ಬೆಲೆಯಿಂದ ಹೆಚ್ಚಿನ ಕಲೆಕ್ಷನ್ ಆಗುವುದಿಲ್ಲವೆಂದು ನಿರ್ಮಾಪಕರು ಭಾವಿಸಿದ್ದರು. ಇದರಿಂದ ಹೊಂಬಾಳೆ ಫಿಲ್ಮ್ಸ್ ಮಲ್ಟಿಪ್ಲೆಕ್ಸ್ ಗಳೊಂದಿಗೆ ಸೇರಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಈಗ ಅವರ ಅರ್ಜಿ ಅಂಗೀಕಾರವಾಗಿದೆ.
ರಿಲೀಸ್ ದಿನ ಅಕ್ಟೋಬರ್ 2 ಗುರುವಾರ ಮತ್ತು ಗಾಂಧೀ ಜಯಂತಿ ರಾಜ್ಯ ರಜೆಯ ದಿನವಾಗಿದ್ದು, ಟಿಕೆಟ್ ಬೆಲೆ ಗಗನಕ್ಕೇರಬಹುದು. ಜೊತೆಗೆ ಶುಕ್ರವಾರ, ಶನಿವಾರ ಮತ್ತು ಭಾನುವಾರ ಕೂಡ ಟಿಕೆಟ್ ದರ ಹೆಚ್ಚಿರಲಿದೆ.