back to top
30 C
Bengaluru
Wednesday, February 25, 2026
HomeKarnatakaKumaraswamy ವಿರುದ್ಧದ ಭೂಮಿ ಕಬಳಿಕೆ ತನಿಖೆಗೆ High Court ತಾತ್ಕಾಲಿಕ ಬ್ರೇಕ್

Kumaraswamy ವಿರುದ್ಧದ ಭೂಮಿ ಕಬಳಿಕೆ ತನಿಖೆಗೆ High Court ತಾತ್ಕಾಲಿಕ ಬ್ರೇಕ್

- Advertisement -
- Advertisement -

ರಾಮನಗರ ಜಿಲ್ಲೆಯ ಕೇತಗಾನಹಳ್ಳಿಯಲ್ಲಿ 14 ಎಕರೆ ಸರ್ಕಾರಿ ಭೂಮಿಯನ್ನು ಹೆಚ್.ಡಿ. ಕುಮಾರಸ್ವಾಮಿ (Kumaraswamy) ಮತ್ತು ಅವರ ಸಂಬಂಧಿಗಳು ಕಬಳಿಸಿದ್ದಾರೇ ಎಂಬ ಆರೋಪ ಎದುರಾಗಿದೆ. ಈ ಬಗ್ಗೆ ತನಿಖೆ ನಡೆಸಲು ರಾಜ್ಯ ಸರ್ಕಾರ ವಿಶೇಷ ತನಿಖಾ ತಂಡ (SIT) ರಚಿಸಿ ಆದೇಶ ಹೊರಡಿಸಿತ್ತು. ಆದರೆ, ಈ SIT ರಚನೆಯ ವಿರುದ್ಧ ಕುಮಾರಸ್ವಾಮಿ ಹೈಕೋರ್ಟ್ (High Court) ಮೆಟ್ಟಿಲೇರಿದ್ದರು.

ಅವರ ಅರ್ಜಿ ವಿಚಾರಿಸಿದ ಹೈಕೋರ್ಟ್, SIT ರಚನೆಗೆ ಸಂಬಂಧಿಸಿದಂತೆ ಸರ್ಕಾರ ಯಾವುದೇ ಅಧಿಕೃತ ಅಧಿಸೂಚನೆ (ಗೆಜೆಟ್ ನೋಟಿಫಿಕೇಷನ್) ಹೊರಡಿಸಿಲ್ಲ ಎಂದು ಹೇಳಿ ತನಿಖೆಗೆ ತಾತ್ಕಾಲಿಕ ತಡೆ ನೀಡಿದೆ. ಇದರಿಂದಾಗಿ ಈಗಾಗಲೇ ಕುಮಾರಸ್ವಾಮಿಗೆ ತಾತ್ಕಾಲಿಕವಾಗಿ ನಿಟ್ಟುಸಿರು ಬಿದ್ದಂತಾಗಿದೆ.

ಅರ್ಜಿಯಲ್ಲಿ, ಕುಮಾರಸ್ವಾಮಿ ಅವರು ಈ ಭೂಮಿಯನ್ನು 1995ರಿಂದ ಖರೀದಿಸಿ ತಮ್ಮ ಹೆಸರಿನಲ್ಲಿ ದಾಖಲೆ ಮಾಡಿಸಿಕೊಂಡಿದ್ದು, ಅವರು ನಿಜವಾದ ಮಾಲಿಕರಾಗಿದ್ದಾರೆ ಎಂದು ಉಲ್ಲೇಖಿಸಿದ್ದಾರೆ. ಸರ್ಕಾರವು ಭೂಮಿ ಸರ್ವೇ ಮತ್ತು ವಿಚಾರಣೆಗಾಗಿ ಆದೇಶಿಸಿದರೂ ಅದಕ್ಕೆ ಕಾನೂನುಬದ್ಧತೆಗೆ ತಕ್ಕಂತೆ ಅಧಿಸೂಚನೆ ಹೊರಡಿಸಿಲ್ಲ. ಹಾಗಾಗಿ, ಎಸ್ಐಟಿ ರಚನೆಯ ಈ ಆದೇಶವನ್ನು ಅಮಾನ್ಯಗೊಳಿಸಬೇಕು ಎಂದು ಅವರು ಕೋರಿದ್ದಾರೆ.

ಈ ಹಿಂದೆ ಲೋಕಾಯುಕ್ತ ಈ ಭೂಮಿ ಸಂಬಂಧ ತನಿಖೆ ನಡೆಸಿ ವರದಿ ನೀಡಿದ್ದರೂ ಸರ್ಕಾರ ಕ್ರಮ ಕೈಗೊಂಡಿರಲಿಲ್ಲ. ಇದನ್ನು ಪ್ರಶ್ನಿಸಿ ಸಮಾಜ ಪರಿವರ್ತನಾ ಸಮುದಾಯದ ಎಸ್ಆರ್ ಹಿರೇಮಠ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಿದ್ದರು. ಹೈಕೋರ್ಟ್ ಈ ವಿಚಾರದಲ್ಲಿ ಗಂಭೀರ ಎಚ್ಚರಿಕೆ ನೀಡಿ, ಕ್ರಮ ತೆಗೆದುಕೊಳ್ಳದ ಅಧಿಕಾರಿಗಳನ್ನು ಜೈಲಿಗೆ ಕಳುಹಿಸುವೆವು ಎಂದು ಹೇಳಿತ್ತು.

ಈ ಹಿನ್ನೆಲೆಯಲ್ಲಿ ಸರ್ಕಾರ SIT ರಚಿಸಿ ತನಿಖೆಗೆ ಮುಂದಾಗಿತ್ತು. ಆದರೆ ಈಗ ಹೈಕೋರ್ಟ್ ತಡೆ ನೀಡಿರುವುದರಿಂದ ತನಿಖಾ ಪ್ರಕ್ರಿಯೆಗೆ ತಾತ್ಕಾಲಿಕ ವಿರಾಮ ದೊರೆತಿದೆ.

For Daily Updates WhatsApp ‘HI’ to 7406303366

- Advertisement -
Latest news
- Advertisement -
Related news
- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!

You cannot copy content of this page