back to top
20.7 C
Bengaluru
Monday, July 21, 2025
HomeHealthಕರ್ನಾಟಕದಲ್ಲಿ HMPV Test ಕಡ್ಡಾಯವಲ್ಲ: ಆರೋಗ್ಯ ಇಲಾಖೆ

ಕರ್ನಾಟಕದಲ್ಲಿ HMPV Test ಕಡ್ಡಾಯವಲ್ಲ: ಆರೋಗ್ಯ ಇಲಾಖೆ

- Advertisement -
- Advertisement -

Bengaluru: ಕರ್ನಾಟಕ ಸರ್ಕಾರ ಆರೋಗ್ಯ ಇಲಾಖೆ  HMPV (Human Metapneumo virus) ಪರೀಕ್ಷೆ ಕಡ್ಡಾಯವಲ್ಲ ಎಂದು ಸ್ಪಷ್ಟಪಡಿಸಿದೆ. ಆಸ್ಪತ್ರೆಗಳಿಗೆ ಹೋಗುವ ಜನರು ಈ ವೈರಸ್‌ಗಾಗಿ ಪರೀಕ್ಷೆ ಮಾಡಿಸಬೇಕಾದ ಅಗತ್ಯವಿಲ್ಲ ಎಂದು ಮಾಹಿತಿ ನೀಡಿದೆ. ಜೊತೆಗೆ, ಖಾಸಗಿ ಲ್ಯಾಬ್ ಹಾಗೂ ಆಸ್ಪತ್ರೆಗಳ ಮೇಲೆ ನಿಗಾ ಇಡಲಾಗುವುದು ಎಂದೂ ಇಲಾಖೆ ತಿಳಿಸಿದೆ.

ಖಾಸಗಿ ಆಸ್ಪತ್ರೆಗಳಲ್ಲಿ ಈ ಟೆಸ್ಟ್‌ಗಳಿಗೆ ₹10,000-₹12,000 ರೂಪಾಯಿಯ ದರ ಇದ್ದು, ಇದರ ಅಗತ್ಯವಿಲ್ಲ ಎಂಬ ಅಧಿಕೃತ ಪ್ರಕಟಣೆಯನ್ನು ಇಂದು (ಬುಧವಾರ) ಹೊರಡಿಸಲಾಗುವುದು ಎಂದು ಮೂಲಗಳು ತಿಳಿಸಿವೆ.

ಆರೋಗ್ಯ ಇಲಾಖೆ ತಿಳಿಸಿದಂತೆ, ಚಳಿಗಾಲದಲ್ಲಿ ವೈರಸ್‌ಗಳು ಸಾಮಾನ್ಯ. ಈ HMPV ವೈರಸ್ ಅಪಾಯಕಾರಿ ಇಲ್ಲ, ಹಾಗೆಯೇ ಚೀನಾದಲ್ಲಿ ಪತ್ತೆಯಾದ ವೈರಸ್‌ಗಿಂತ ಬೇರೆಯದು ಎಂಬುದಾಗಿ ಸ್ಪಷ್ಟಪಡಿಸಲಾಗಿದೆ.

ಬೆಂಗಳೂರು ಮತ್ತು ಶಿವಮೊಗ್ಗದಲ್ಲಿ ಮಕ್ಕಳು ಈ ವೈರಸ್‌ಗೆ ತುತ್ತಾಗಿದ್ದರು, ಆದರೆ, ಅವರು ಈಗ ಆರೋಗ್ಯವಾಗಿದ್ದಾರೆ. ದೇಶಾದ್ಯಂತ 7 HMPV ಪಾಸಿಟಿವ್ ಪ್ರಕರಣಗಳು ವರದಿಯಾಗಿವೆ: ಕರ್ನಾಟಕದಲ್ಲಿ 2, ತಮಿಳುನಾಡು 2, ಮಹಾರಾಷ್ಟ್ರ 2, ಮತ್ತು ಗುಜರಾತ್ 1. ಜನರು ಆತಂಕಕ್ಕೊಳಗಾಗುವ ಅಗತ್ಯವಿಲ್ಲ. ಮುನ್ನೆಚ್ಚರಿಕೆ ವಹಿಸಿಕೊಳ್ಳಿ ಮತ್ತು ಆರೋಗ್ಯ ಕಾಪಾಡಿಕೊಳ್ಳಿ ಎಂದು ಆರೋಗ್ಯ ಇಲಾಖೆ ಸಲಹೆ ನೀಡಿದೆ.

For Daily Updates WhatsApp ‘HI’ to 7406303366

- Advertisement -
Latest news
- Advertisement -
Related news
- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!

You cannot copy content of this page