Bengaluru: ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಪರಿಣಾಮ (drop in air pressure in the Bay of Bengal) ಕರ್ನಾಟಕದ ಒಳನಾಡಿನಲ್ಲಿ ಮಳೆ ಆರಂಭವಾಗಿದೆ. ಅದರಲ್ಲೂ ಬೆಂಗಳೂರಿನಲ್ಲಿ(Bengaluru) ಇಂದು (ಅಕ್ಟೊಬರ್ 15) ಬೆಳಗ್ಗೆಯಿಂದ ಭಾರೀ ಮಳೆ ಸುರಿಯುತ್ತಿದ್ದು, ರಸ್ತೆ-ಚರಂಡಿಗಳು ತುಂಬಿ ಹರಿಯುತ್ತಿವೆ.
ಅಲ್ಲದೇ ವಿವಿಧ ಏರಿಯಾಗಳಲ್ಲಿ ಮರಗಳು ಸಹ ಮುರಿದುಬಿದ್ದು, ಮಳೆ ನಗರದ ಹಲವೆಡೆ ಭಾರೀ ಅನಾಹುತ ಸೃಷ್ಟಿಸಿದೆ. ಆದರೂ ಮುಂದಿನ ಮೂರು ದಿನ ಬೆಂಗಳೂರಿನಲ್ಲಿ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ 9 (meteorological department) ಮುನ್ಸೂಚನೆ ನೀಡಿದೆ.
ಹೀಗಾಗಿ ನಾಳೆ (ಅಕ್ಟೋಬರ್ 16) ಬೆಂಗಳೂರಿನ ಎಲ್ಲಾ ಶಾಲಾ ಕಾಲೇಜುಗಳಿಗೆ ರಜೆ (Holiday) ನೀಡಿ ಜಿಲ್ಲಾಧಿಕಾರಿ ಜಗದೀಶ್ ಸೂಚಿಸಿದ್ದಾರೆ.
ಸರ್ಕಾರಿ ಪ್ರಾಥಮಿಕ ಶಾಲೆಗಳಿಗೆ ಅಕ್ಟೋಬರ್ 20 ರವರೆಗೆ ದಸರಾ ರಜೆ ಇದೆ. ಆದ್ರೆ ಖಾಸಗಿ ಶಾಲೆಗಳು ಶಾಲೆ ಆರಂಭ ಮಾಡಿವೆ. ಸೋಮುವಾರದಿಂದಲೆ ಖಾಸಗಿ ಶಾಲೆಗಳು ಪುನರಾರಂಭವಾಗಿವೆ.
ಹೀಗಾಗಿ ಮಕ್ಕಳಿಗೆ ಶಾಲೆಗೆ ಬರಲು ಕಷ್ಟ ಎದುರಾಗಿದೆ. ಇದರಿಂದ ರಾಜಧಾನಿಯ ಶಾಲೆಗಳಿಗೆ ರಜೆ ನೀಡಲು ಬೆಂಗಳೂರು ನಗರ ಜಿಲ್ಲಾಧಿಕಾರಿ ಜಗದೀಶ್ ಸೂಚನೆ ನೀಡಿದ್ದಾರೆ. ಈ ಬಗ್ಗೆ ಸಂಜೆ 5 ಗಂಟೆ ಬಳಿಕ ಅಧಿಕೃತ ಆದೇಶ ಹೊರಡಿಸುವ ಸಾಧ್ಯತೆಗಳಿವೆ.