
ಅಲ್ಪ ಅವಧಿಯಲ್ಲಿ ಭಾರತದ ಟಾಪ್ ನಿರ್ಮಾಣ ಸಂಸ್ಥೆಗಳಲ್ಲಿ ಒಂದಾಗಿ ಬೆಳೆದಿರುವ ಹೊಂಬಾಳೆ ಫಿಲ್ಮ್ಸ್, (Hombale Films) ಈಗ ಮತ್ತೊಂದು ದೊಡ್ಡ ಘೋಷಣೆ ಮಾಡಿದೆ. ಹಿಂದಿನಂತೆ ಈ ಬಾರಿ ಕೂಡ ಅದು ಪೌರಾಣಿಕ ಹಾಗೂ ಸಂಸ್ಕೃತಿಯ ಅಂಶಗಳು ಹೊಂದಿರುವ ಭಾರಿ ಬಜೆಟ್ ಸಿನಿಮಾಗಳ ಬಗ್ಗೆ ಮಾಹಿತಿ ಕೊಟ್ಟಿದೆ.
ಇತ್ತೀಚೆಗೆ ನಟ ಪ್ರಭಾಸ್ ಜೊತೆ ಮೂರು ಸಿನಿಮಾಗಳ ಘೋಷಣೆ ಮಾಡಿದ ಬಳಿಕ, ಈಗ ಒಟ್ಟಿಗೆ ಏಳು ಪೌರಾಣಿಕ ಸಿನಿಮಾಗಳ ಘೋಷಣೆ ಮಾಡಿದೆ. ಈ ಹೊಸ ಸಿನಿಮಾ ಸರಣಿಗೆ ‘ಮಹಾವತಾರ ಯೂನಿವರ್ಸ್’ (Mahavatara Universe) ಎಂಬ ಹೆಸರು ನೀಡಲಾಗಿದೆ.
ಈ ಶ್ರೇಣಿಯಲ್ಲಿ ವಿಷ್ಣುವಿನ ಏಳು ಮಹತ್ವದ ಅವತಾರಗಳ ಕುರಿತು ಸಿನಿಮಾ ತಯಾರಿಸಲು ಹೊಂಬಾಳೆ ಮುಂದಾಗಿದೆ. ಈ ಸರಣಿಯ ಮೊದಲ ಸಿನಿಮಾ ‘ಮಹಾವತಾರ ನರಸಿಂಹ’, ಜುಲೈ 25, 2025ರಂದು ಬಿಡುಗಡೆಯಾಗಲಿದೆ. ಈಗಾಗಲೇ ಇದರ ಟೀಸರ್ ಹೊರಬಿದ್ದಿದ್ದು, ಇದು ಅನಿಮೇಷನ್ ಫಿಲ್ಮ್ ಆಗಿರಲಿದೆ.
ಇಂದು (ಜೂನ್ 25) ಹೊಂಬಾಳೆ ಫಿಲ್ಮ್ಸ್ ಈ ಏಳು ಸಿನಿಮಾಗಳ ಹೆಸರನ್ನು ಹಾಗೂ ಬಿಡುಗಡೆ ವರ್ಷವನ್ನು ಪ್ರಕಟಿಸಿದೆ,
- ಮಹಾವತಾರ ನರಸಿಂಹ – 2025
- ಮಹಾವತಾರ ಪರಶುರಾಮ – 2027
- ಮಹಾವತಾರ ರಘುನಂದನ (ಶ್ರೀರಾಮ) – 2029
- ಮಹಾವತಾರ ದ್ವಾರಕಾದೀಶ (ಶ್ರೀಕೃಷ್ಣ) – 2031
- ಮಹಾವತಾರ ಗೋಕುಲನಂದ – 2033
- ಮಹಾವತಾರ ಕಲ್ಕಿ 1 – 2035
- ಮಹಾವತಾರ ಕಲ್ಕಿ 2 – 2037
ಈ ಎಲ್ಲ ಸಿನಿಮಾಗಳು ಅನಿಮೇಷನ್ ಆಧಾರಿತವಾಗಿರುತ್ತವೆಯೋ ಅಥವಾ ಹೈ-ಫೈ ಫೀಚರ್ ಫಿಲ್ಮ್ಗಳಾಗಿರುತ್ತವೆಯೋ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.
ಘೋಷಣೆಯಲ್ಲಿ ಹೊಂಬಾಳೆ ಫಿಲ್ಮ್ಸ್ ತಿಳಿಸಿರುವಂತೆ, “ಸಾಧ್ಯತೆಗಳಿಗೆ ಗಡಿ ಇಲ್ಲ. ನಮ್ಮ ಪಾತ್ರಗಳು ತೆರೆಯ ಮೇಲೆ ಭಾರೀ ಶಕ್ತಿ ಹಾಗೂ ಶ್ರದ್ಧೆಯಿಂದ ಓದುಗರ ಮುಂದೆ ಬರಲಿವೆ. ಈ ಅದ್ಭುತ ಸಿನಿಮಾ ಪ್ರಯಾಣಕ್ಕಾಗಿ ತಯಾರಾಗಿರಿ.”
ಇದೆ ವೇಳೆ, ಪ್ರಭಾಸ್ ಅಭಿನಯದ ಮೂರು ಸಿನಿಮಾ ಘೋಷಣೆ ಮಾಡಿರುವ ಹೊಂಬಾಳೆ, ಈ ‘ಮಹಾವತಾರ ಯೂನಿವರ್ಸ್’ನಲ್ಲೂ ಅವನು ಭಾಗವಹಿಸುವ ಸಾಧ್ಯತೆ ಇದೆ. ಅದರಲ್ಲೂ ಒಂದು ಸಿನಿಮಾ ‘ಸಲಾರ್ 2’ ಆಗಿರಬಹುದು ಎನ್ನಲಾಗಿದೆ. ಆದರೆ ಈ ಬಗ್ಗೆ ಅಧಿಕೃತ ಮಾಹಿತಿ ಇನ್ನೂ ಬರಬೇಕಿದೆ.