Home Movies Kannada ಮಾರ್ಚ್ 27ಕ್ಕೆ KGF 2 ಸಿನಿಮಾದ Trailer

ಮಾರ್ಚ್ 27ಕ್ಕೆ KGF 2 ಸಿನಿಮಾದ Trailer

Rocking Star Yash Kannada Movie KGF-2 Trailer Release Prashanth Neel Vijay Kirgandur Hombale Films

ಸ್ಯಾಂಡಲ್ ವುಡ್ (Sandalwood) ನ ಬಹುನಿರೀಕ್ಷಿತ ರಾಕಿಂಗ್ ಸ್ಟಾರ್ ಯಶ್‌ (Rocking Star Yash) ನಟನೆಯ ಪ್ಯಾನ್‌ ಇಂಡಿಯಾ ಸಿನಿಮಾ, KGF 2 ಸಿನಿಮಾದ ಟ್ರೇಲರ್‌ ಯಾವಾಗ ಬಿಡುಗಡೆ ಎನ್ನುವ ಅಭಿಮಾನಿಗಳ ಪ್ರಶ್ನೆಗೆ ತೆರೆ ಬಿದ್ದಿದೆ. ಪ್ರಶಾಂತ್‌ ನೀಲ್‌ (Prashanth Neel) ನಿರ್ದೇಶನದ ಈ ಸಿನಿಮಾದ ಎರಡನೇ ಭಾಗದ ಟ್ರೇಲರ್‌ ಮಾರ್ಚ್ 27ರಂದು ಸಂಜೆ 6.40ಕ್ಕೆ ಹೊಂಬಾಳೆ ಫಿಲಂಸ್ ನ (Hombale Films) ಅಧಿಕೃತ ಯೌಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆಗೊಳ್ಳಲಿದೆ ಎಂದು ಹೊಂಬಾಳೆ ಸಂಸ್ಥೆ ತಮ್ಮ ಸಾಮಾಜಿಕ ಜಾಲತಾಣಗಳ ಮೂಲಕ ಮಾಹಿತಿ ನೀಡಿದೆ.

ಹೊಂಬಾಳೆ ಫಿಲಂಸ್‌ ಬ್ಯಾನರ್‌ನಡಿ ವಿಜಯ್‌ ಕಿರಗಂದೂರು ನಿರ್ಮಾಣ ಮಾಡುತ್ತಿರುವ ‘ಕೆ.ಜಿ.ಎಫ್‌–2’ ಚಿತ್ರದಲ್ಲಿ ‘ಅಧೀರ’ ಪಾತ್ರಕ್ಕೆ ಬಾಲಿವುಡ್‌ ನಟ ಸಂಜಯ್‌ ದತ್‌ (Sanjay Dutt) ಬಣ್ಣಹಚ್ಚಿದ್ದಾರೆ. 21 December 2018 ರಂದು ಮೊದಲ ಭಾಗ ಬಿಡುಗಡೆಗೊಂಡು ಕನ್ನಡ ಚಲನಚಿತ್ರಗಳಲ್ಲಿ ದಾಖಲೆ ನಿರ್ಮಿಸಿತ್ತು. ಕಳೆದ ವರ್ಷದ ಜುಲೈನಲ್ಲೇ ಬಿಡುಗಡೆಯಾಗಬೇಕಿದ್ದ ಚಿತ್ರವು ಕೋವಿಡ್‌ ಎರಡನೇ ಅಲೆಯ ಕಾರಣದಿಂದಾಗಿ ಮುಂದಕ್ಕೆ ಹೋಗಿತ್ತು. ಚಿತ್ರದ ನಾಯಕಿಯಾಗಿ ಶ್ರೀನಿಧಿ ಶೆಟ್ಟಿ ಬಣ್ಣಹಚ್ಚಿದ್ದು, ಪ್ರಕಾಶ್‌ ರೈ, ಮಾಳವಿಕಾ ಅವಿನಾಶ್‌, ಬಿ.ಸುರೇಶ್‌, ಯಶ್‌ ಶೆಟ್ಟಿ, ಅರ್ಚನಾ ಜೋಯಿಷ್‌, ಅಯ್ಯಪ್ಪ ಪಿ.ಶರ್ಮ ಇನ್ನಿತರರು ತಾರಾಬಳಗದಲ್ಲಿದ್ದಾರೆ. ಪ್ರಸ್ತುತ ಪೋಸ್ಟ್‌ ಪ್ರೊಡಕ್ಷನ್‌ ಅಂತಿಮ ಹಂತದಲ್ಲಿರುವ ಈ ಚಿತ್ರ ಏಪ್ರಿಲ್‌ 14 ರಂದು ತೆರೆ ಕಾಣಲಿದೆ.

For Daily Updates WhatsApp ‘HI’ to 7406303366

NO COMMENTS

LEAVE A REPLY

Please enter your comment!
Please enter your name here

You cannot copy content of this page

Exit mobile version