
ಹೋಂಡಾ ಸ್ಕೂಟರ್ & ಮೋಟಾರ್ಸೈಕಲ್ ಇಂಡಿಯಾ (HMSI) ಹೊಸ ‘ರೆಬೆಲ್ 500’ ಬೈಕ್ ಅನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. ಈ ಬೈಕ್ ತನ್ನ ಆಕರ್ಷಕ ಕ್ಲಾಸಿಕ್ ಕ್ರೂಸರ್ ವಿನ್ಯಾಸ ಮತ್ತು ಶಕ್ತಿಶಾಲಿ ಎಂಜಿನ್ ಮೂಲಕ ಬೈಕ್ ಪ್ರಿಯರ ಮನಸ್ಸು ಗೆಲ್ಲಲು ಬಂದಿದೆ.
ಬೆಲೆ ಮತ್ತು ಲಭ್ಯತೆ: ರೆಬೆಲ್ 500 ಎಕ್ಸ್-ಶೋರೂಂ ಬೆಲೆ ರೂ. 5.12 ಲಕ್ಷ. ಪ್ರೀಮಿಯಂ ಡೀಲರ್ network ಮೂಲಕ ಬೆಂಗಳೂರಿನ, ಮುಂಬೈ ಮತ್ತು ಗುರುಗ್ರಾಮ್ ನಲ್ಲಿ ಖರೀದಿಸಬಹುದು.
ಎಂಜಿನ್ ಮತ್ತು ಪ್ರದರ್ಶನ: 471 ಸಿಸಿ ಸಮಾನಾಂತರ-ಟ್ವಿನ್ ಪೆಟ್ರೋಲ್ ಎಂಜಿನ್ 46 bhp ಶಕ್ತಿ ಮತ್ತು 43.3 ನ್ಯೂಟನ್ ಮೀಟರ್ ಟಾರ್ಕ್ ಒದಗಿಸುತ್ತದೆ. 6-ಸ್ಪೀಡ್ gearbox ಮೂಲಕ ಸೌಲಭ್ಯಕರ ಚಾಲನೆ ಸಿಗುತ್ತದೆ.
ಮೈಲೇಜ್ ಮತ್ತು ಸಸ್ಪೆನ್ಷನ್: ಸುಮಾರು 26 ಕಿ.ಮೀ/ಲೀಟರ್ ಮೈಲೇಜ್ ನೀಡುತ್ತದೆ. ಟೆಲಿಸ್ಕೋಪಿಕ್ ಫ್ರಂಟ್ ಫೋರ್ಕ್ಸ್ ಮತ್ತು ಶೋವಾ ಟ್ವಿನ್ ಶಾಕ್ ಹಿಂಭಾಗದಲ್ಲಿ ಸಸ್ಪೆನ್ಷನ್ ಇದೆ.
ಡಿಸೈನ್ ಮತ್ತು ಸುರಕ್ಷತೆ: 70ರ ದಶಕದ ಶೈಲಿಯ ಸುತ್ತಿನ ಹೆಡ್ಲೈಟ್, LED ಲೈಟ್ ಗಳು, ಡ್ಯುಯಲ್-ಚಾನೆಲ್ ABS ಮತ್ತು ಡಿಸ್ಕ್ ಬ್ರೇಕ್ ಹೊಂದಿದ್ದು, 191 ಕೆಜಿ ತೂಕ ಮತ್ತು 11.2 ಲೀಟರ್ ಫ್ಯೂಯಲ್ ಟ್ಯಾಂಕ್ ಒಳಗೊಂಡಿದೆ.
ಹೋಂಡಾ ರೆಬೆಲ್ 500, ನಗರ ಮತ್ತು ದೂರ ಪ್ರಯಾಣಗಳಿಗಾಗಿ ಶಕ್ತಿ, ವಿನ್ಯಾಸ ಮತ್ತು ಸುರಕ್ಷತೆಯ ಸಮನ್ವಯ ನೀಡುವ ಪ್ರೀಮಿಯಂ ಕ್ರೂಸರ್ ಬೈಕ್ ಆಗಿದೆ.