back to top
21.8 C
Bengaluru
Friday, August 1, 2025
HomeKarnatakaDavanagereಹೊನ್ನಾಳಿಯಲ್ಲಿ ವಿವಿಧ ಕಾಮಗಾರಿಗಳಿಗೆ ಗುದ್ದಲಿಪೂಜೆ

ಹೊನ್ನಾಳಿಯಲ್ಲಿ ವಿವಿಧ ಕಾಮಗಾರಿಗಳಿಗೆ ಗುದ್ದಲಿಪೂಜೆ

- Advertisement -
- Advertisement -

Honnali, Davanagere : ಹೊನ್ನಾಳಿಯ ಗೊಲ್ಲರಹಳ್ಳಿ ಬಳಿಯಿಂದ UTP ಕಚೇರಿವರೆಗೆ ಆಲಂಕಾರಿಕ ಹಾಗೂ ಹೈಮಾಸ್ಟ್‌ ದೀಪ ಹಾಗೂ ಹೊನ್ನಾಳಿ ಖಾಸಗಿ ಬಸ್ ನಿಲ್ದಾಣ ಮುಂಭಾಗದ ರಾಜ್ಯ ಹೆದ್ದಾರಿಯಲ್ಲಿ ವಿದ್ಯುತ್ ಆಲಂಕಾರಿಕ ದೀಪ ಅಳವಡಿಕೆ ಕಾಮಗಾರಿಗೆ ಶಾಸಕ ಎಂ.ಪಿ. ರೇಣುಕಾಚಾರ್ಯ (M. P. Renukacharya) ಗುದ್ದಲಿಪೂಜೆ (Groundbreaking) ಮಾಡಿದರು.

ನಂತರ ಮಾತನಾಡಿದ ಶಾಸಕರು “ಹೊನ್ನಾಳಿ ನಗರದ ಗೊಲ್ಲರಹಳ್ಳಿಯಿಂದ ರಸ್ತೆ ವಿಭಜಕಗಳ ಮೇಲೆ ಆಲಂಕಾರಿಕ ದೀಪ ಹಾಗೂ ಆಯ್ದ ಸ್ಥಳಗಳಲ್ಲಿ ಹೈಮಾಸ್ಟ್‌ ದೀಪಗಳನ್ನು ಅಳವಡಿಸುವ ಮೂಲಕ ನಗರವನ್ನು ಸುಂದರ ನಗರವನ್ನಾಗಿ ಮಾಡಲಾಗುವುದು. ಹೊನ್ನಾಳಿ-ನ್ಯಾಮತಿ ಅವಳಿ ತಾಲ್ಲೂಕುಗಳನ್ನು ರಾಜ್ಯದಲ್ಲಿಯೇ ಮಾದರಿ ತಾಲ್ಲೂಕುಗಳನ್ನಾಗಿ ಮಾಡಲಾಗುವುದು. ಟಿ.ಬಿ. ವೃತ್ತದಿಂದ ದಿಡಗೂರು ಡಾಬಾವರೆಗೂ ರಸ್ತೆ ವಿಸ್ತರಣೆ ಮಾಡಿ ರಸ್ತೆ ವಿಭಜಕ ಅವಳವಡಿಸಲಾಗುವುದು. ಹೊನ್ನಾಳಿ–ನ್ಯಾಮತಿ ಅವಳಿ ತಾಲ್ಲೂಕಿನಲ್ಲಿ ಕೆರೆ ತುಂಬಿಸುವ ಕಾಮಗಾರಿ ಆರಂಭಗೊಂಡಿದ್ದು ₹ 4 ಕೋಟಿ ವೆಚ್ಚದಲ್ಲಿ ಪ್ರಮಾಸಿ ಮಂದಿರ ನಿರ್ಮಾಣ ಮಾಡಲಾಗುತ್ತಿದೆ. ಕಳಪೆ ಕಾಮಗಾರಿ ಯನ್ನು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ, ಕಾಮಗಾರಿ ಕಳಪೆಯಾಗದಂತೆ ಗುತ್ತಿಗೆದಾರರು ಮತ್ತು ಸಂಬಂಧಪಟ್ಟ ಎಂಜಿನಿಯರ್‌ಗಳು ನೋಡಿಕೊಳ್ಳಬೇಕು” ಎಂದು ತಿಳಿಸಿದರು.

ಪುರಸಭೆ ಅಧ್ಯಕ್ಷ ಬಾಬು ಹೋಬಳದಾರ್, ಉಪಾಧ್ಯಕ್ಷೆ ರಂಜಿತಾ ಚನ್ನಪ್ಪ, ಸದಸ್ಯರಾದ ರಂಗಪ್ಪ, ಶ್ರೀಧರ್, ನಾಮಿನಿ ಸದಸ್ಯ ಕಿಟ್ಟಿ, ಬಿಜೆಪಿ ಮುಖಂಡರಾದ ಇಂಚರ ಮಂಜುನಾಥ್, ಅರಕೆರೆ ನಾಗರಾಜ್, ಕೆ.ಪಿ. ಕುಬೇರಪ್ಪ, ಮಹೇಶ್ ಹುಡೇದ್, ಕೋಳಿ ಸತೀಶ್, ಕೆ.ವಿ. ಚನ್ನಪ್ಪ, ಕುಮಾರಸ್ವಾಮಿ, ನೆಲಹೊನ್ನೆ ಮಂಜುನಾಥ್, ಪುರಸಭಾ ಮುಖ್ಯಾಧಿಕಾರಿ ಪಂಪಾಪತಿನಾಯ್ಕ ಪಾಲ್ಗೊಂಡಿದ್ದರು.

- Advertisement -
Latest news
- Advertisement -
Related news
- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!

You cannot copy content of this page