ತೋಟಗಾರಿಕೆ ಇಲಾಖೆ (Horticulture department) ನಿರ್ಲಕ್ಷ್ಯದಿಂದ ಬೆಂಗಳೂರಲ್ಲಿ ಹಾಪ್ ಕಾಮ್ಸ್ (HOPCOMS) ಕಣ್ಮರೆಯಾಗುತ್ತಿವೆ. ನಗರದಲ್ಲಿ 50ಕ್ಕೂ ಹೆಚ್ಚು ಹಾಪ್ ಕಾಮ್ಸ್ ಗಳು (HOPCOMS) ಈಗಾಗಲೇ ಬಂದ್ ಆಗಿದೆ.
ಗುಣಮಟ್ಟದ, ತಾಜಾ ಹಣ್ಣು, ತರಕಾರಿಗಳನ್ನು ಗ್ರಾಹಕರಿಗೆ ಪೂರೈಸುವ ಹಾಗೂ ಮಧ್ಯವರ್ತಿಗಳಿಂದ ಮುಕ್ತ ವಾದ ಮಾರುಕಟ್ಟೆ ಒದಗಿಸುವ ಮಹತ್ವದ ಉದ್ದೇಶದಿಂದ ಹಾಪ್ಸ್ ಕಾಮ್ಸ್ ಗಳನ್ನು ಓಪನ್ ಮಾಡಲಾಗಿತ್ತು.
ಹಾಪ್ಕಾಮ್ಸ್ (HOPCOMS) ಮಾರಾಟ ಮಳಿಗೆಗಳು ಕಳೆದ ಐದಾರು ವರ್ಷಗಳಿಂದ ಇದ್ದೂ ಇಲ್ಲದಂತಾಗಿವೆ. ಹಣ್ಣು, ತರಕಾರಿಗಳನ್ನು ರೈತರಿಂದ ನೇರವಾಗಿ ಖರೀದಿಸಿ, ಗ್ರಾಹಕರಿಗೆ ಒದಗಿಸುತ್ತಿದ್ದ ಕಾರ್ಯ ನಿಧಾನವಾಗಿ ಕಡಿಮೆ ಆಗಿದೆ. covid ಸಮಯದಿಂದಲೂ ಚೇತರಿಕೆ ಕಾಣದ ಇವುಗಳ ಅಭಿವೃದ್ಧಿಗೆ ತೋಟಗಾರಿಕೆ ಇಲಾಖೆ ಯಾವುದೇ ಕ್ರಮ ಕೈಗೊಂಡಿಲ್ಲ. ನಗರದ ಕೆಲವೆಡೆ ರಸ್ತೆ ಅಗಲೀಕರಣ, ಫ್ಲೈಓವರ್ಗಳು, ಮೆಟ್ರೋ ಪಿಲ್ಲರ್ಗಳು, ಬಹುಮಹಡಿ ಕಟ್ಟಡಗಳು ನಿರ್ಮಾಣಗೊಂಡ ಪರಿಣಾಮ ಮಾರಾಟ ಮಳಿಗೆಗಳು ಬಂದ್ ಆಗಿವೆ. ಇನ್ನೂ ಕೆಲವೆಡೆ ಅಗತ್ಯ ಸಿಬ್ಬಂದಿ ಇಲ್ಲದೆ ಬೀಗ ಹಾಕಲ್ಪಟ್ಟಿವೆ. ಪ್ರತಿ ತಿಂಗಳು ಕನಿಷ್ಠ 1-2 ಮಾರಾಟ ಮಳಿಗೆಗಳು ಬಂದ್ ಆಗುತ್ತಿವೆ ಎಂದು ಹಾಪ್ಕಾಮ್ಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.