Home Business ಭಾರತದಲ್ಲಿ ಗೃಹ ವೆಚ್ಚ: 2023-24ರ ಸಮೀಕ್ಷೆ ವರದಿ

ಭಾರತದಲ್ಲಿ ಗೃಹ ವೆಚ್ಚ: 2023-24ರ ಸಮೀಕ್ಷೆ ವರದಿ

Household Expenditure in India

2023-24ರ Household Consumption Expenditure ಸಮೀಕ್ಷೆಯ ಪ್ರಕಾರ, ಭಾರತದಲ್ಲಿ ಒಂದು ಮನೆಯ ಸರಾಸರಿ ವೆಚ್ಚ 5,662 ರೂ ಆಗಿದೆ. 2022-23 ಮತ್ತು 2023-24ರಲ್ಲಿ ದೇಶಾದ್ಯಾಂತ ಈ ಸಮೀಕ್ಷೆಯನ್ನು ನಡೆಸಲಾಗಿದ್ದು, ವರದಿಯನ್ನು ಕೇಂದ್ರ ಸಾಂಖ್ಯಿಕ ಮತ್ತು ಯೋಜನಾ ಅನುಷ್ಠಾನ ಸಚಿವಾಲಯ ಪ್ರಕಟಿಸಿದೆ.

ಗ್ರಾಮೀಣ ಹಾಗೂ ನಗರ ಪ್ರದೇಶಗಳ ವೆಚ್ಚದ ವ್ಯತ್ಯಾಸ: 2023-24ರ ಅವಧಿಯಲ್ಲಿ, ದೇಶದ ಗ್ರಾಮೀಣ ಭಾಗದಲ್ಲಿ ಸರಾಸರಿ ವೆಚ್ಚ 4,122 ರೂ ಹಾಗೂ ನಗರ ಭಾಗದಲ್ಲಿ 6,996 ರೂ ಆಗಿದೆ. 2011-12ರಲ್ಲಿ ಈ ವ್ಯತ್ಯಾಸ ಶೇ. 84 ಇದ್ದರೆ, 2022-23ರಲ್ಲಿ ಇದು ಶೇ. 71ಕ್ಕೆ ಇಳಿಯಾಗಿದೆ.

Household Consumption Expenditureಸಮೀಕ್ಷೆಯ ಮಹತ್ವ: ಈ ಸಮೀಕ್ಷೆ ದೇಶದಲ್ಲಿ ಬಡತನ, ಅಸಮಾನತೆ ಹಾಗೂ ಸಾಮಾಜಿಕ ಹೊರಗುಳಿಯುವಿಕೆ ಕುರಿತು ಮಹತ್ವಪೂರ್ಣ ಅಂಶಗಳನ್ನು ನೀಡುತ್ತದೆ. ಇದರಿಂದ ಸರ್ಕಾರವು ಜನಕಲ್ಯಾಣ ಮತ್ತು ಸಾಮಾಜಿಕ ಯೋಜನೆಗಳನ್ನು ನಿಖರವಾಗಿ ಜಾರಿ ಮಾಡಲು ನೆರವು ಪಡೆಯಬಹುದು.

2023-24ರ ಸಮೀಕ್ಷೆಯ ಪ್ರಕಾರ, ದೇಶಾದ್ಯಾಂತ 2,61,953 ಮನೆಗಳನ್ನು ಸಮೀಕ್ಷೆಗೆ ಒಳಪಡಿಸಲಾಗಿದೆ. ಕೇರಳದಲ್ಲಿ, ನಗರ ಮತ್ತು ಗ್ರಾಮೀಣ ವೆಚ್ಚಗಳ ನಡುವಿನ ವ್ಯತ್ಯಾಸ ಶೇ. 18 ಮಾತ್ರವೇ ಇರುತ್ತದೆ. ಇನ್ನು, ಕೇರಳದಲ್ಲಿ ಗ್ರಾಮೀಣ ಭಾಗದಲ್ಲಿ ಸರಾಸರಿ ವೆಚ್ಚ 6,611 ರೂ ಮತ್ತು ನಗರ ಭಾಗದಲ್ಲಿ 7,783 ರೂ ಇದೆ.

ಕೇರಳ, ತಮಿಳುನಾಡು, ಮತ್ತು ತೆಲಂಗಾಣ ರಾಜ್ಯಗಳಲ್ಲಿ ಅತ್ಯುತ್ತಮವಾಗಿ ಕಡಿಮೆ ವ್ಯತ್ಯಾಸ ಕಂಡು ಬಂದಿದೆ, ಮತ್ತು ಕರ್ನಾಟಕದಲ್ಲಿ ಗ್ರಾಮೀಣ ಭಾಗದಲ್ಲಿ ಸರಾಸರಿ ವೆಚ್ಚ 4,903 ರೂ ಮತ್ತು ನಗರ ಭಾಗದಲ್ಲಿ 8,076 ರೂ ಇದೆ.

For Daily Updates WhatsApp ‘HI’ to 7406303366

NO COMMENTS

LEAVE A REPLY

Please enter your comment!
Please enter your name here
This site is protected by reCAPTCHA and the Google Privacy Policy and Terms of Service apply.

The reCAPTCHA verification period has expired. Please reload the page.

You cannot copy content of this page

Exit mobile version