ಬಿಸಿಲಿನ ತೀವ್ರತೆಗೆ ಮಧುಮೇಹಿಗಳಿಗೆ (Sugar) ನಿರ್ಜಲೀಕರಣವಾಗುವ ಸಾಧ್ಯತೆ ಹೆಚ್ಚಿರುತ್ತದೆ. ನೀರಿನ ಕೊರತೆಯಿಂದ ರಕ್ತದಲ್ಲಿನ ಗ್ಲೂಕೋಸ್ ಮಟ್ಟ ಏರಿಕೆಯಾಗುತ್ತದೆ. ಜೊತೆಗೆ, ಬೆವರು ಗ್ರಂಥಿಗಳು ಸರಿಯಾಗಿ ಕಾರ್ಯನಿರ್ವಹಿಸದೆ ದೇಹ ತಂಪಾಗದಿರುವುದರಿಂದ ಇನ್ಸುಲಿನ್ ಕಾರ್ಯಕ್ಷಮತೆ ಬದಲಾಯಿಸಬಹುದು.
ಶುಗರ್ ನಿಯಂತ್ರಿಸಲು ಪಾಲಿಸಬೇಕಾದ ನಿಯಮಗಳು
- ಬೆಳಿಗ್ಗೆ 10ರಿಂದ ಸಂಜೆ 4ರವರೆಗೆ ಬಿಸಿಲಿನಿಂದ ದೂರ ಇರಬೇಕು.
- ಹಗುರವಾದ, ಹತ್ತಿ ಬಟ್ಟೆ ಧರಿಸಿ.
- ತಂಪಾದ ಸ್ಥಳದಲ್ಲಿ ಇನ್ಸುಲಿನ್ ಸಂಗ್ರಹಿಸಿ.
- ನೀರನ್ನು ಹೆಚ್ಚು ಕುಡಿಯಿರಿ.
- ವೈದ್ಯರ ಸಲಹೆ ಪಡೆದು ಔಷಧಿ ನಿಯಂತ್ರಣ ಮಾಡಿಕೊಳ್ಳಿ.
ತಾಜಾ ಆಹಾರಗಳು ಮತ್ತು ಪಾನೀಯಗಳು
- ತೆಳುವಾದ ಮಜ್ಜಿಗೆ
- ಸಕ್ಕರೆರಹಿತ ನಿಂಬೆ/ಟೊಮೆಟೊ ರಸ
- ಪುದೀನಾ, ತುಳಸಿ, ಜೀರಿಗೆ ನೀರು
- ಕಡಿಮೆ ಕ್ಯಾಲೋರಿ ತರಕಾರಿಗಳು – ಸೌತೆಕಾಯಿ, ಹಾಗಲಕಾಯಿ, ಸೋರೆಕಾಯಿ, ಹೂಕೋಸು
- ಪೌಷ್ಠಿಕ ಆಹಾರ – ಗೋಧಿ ಬ್ರೆಡ್, ಬಹುಧಾನ್ಯ ಕ್ರ್ಯಾಕರ್ಸ್
ತಜ್ಞರ ಸೂಚನೆ: ಈ ಸಲಹೆಗಳು ಸಾಮಾನ್ಯ ಮಾಹಿತಿಗಾಗಿ ಮಾತ್ರ. ಶುಗರ್ ನಿಯಂತ್ರಣಕ್ಕಾಗಿ ವೈದ್ಯರನ್ನು ಸಂಪರ್ಕಿಸುವುದು ಉತ್ತಮ.