ಪ್ರಸಿದ್ಧ ಟೆಕ್ ಬ್ರ್ಯಾಂಡ್ HP ಕಂಪನಿಯು ಭಾರತದ ವೃತ್ತಿಪರರು ಮತ್ತು ವ್ಯಾಪಾರ ಬಳಕೆದಾರರಿಗಾಗಿ ಹೊಸ AI-ಚಾಲಿತ ಪ್ರೀಮಿಯಂ ಫ್ಲಾಗ್ಶಿಪ್ EliteBook ಲ್ಯಾಪ್‌ಟಾಪ್ ಶ್ರೇಣಿಯನ್ನು ಬಿಡುಗಡೆ ಮಾಡಿದೆ. ಈ ಸರಣಿಯಲ್ಲಿ HP EliteBook Ultra G1i, HP EliteBook X G1i, HP EliteBook X G1i Flip ಮತ್ತು HP EliteBook X G1a ಲ್ಯಾಪ್‌ಟಾಪ್‌ಗಳ ಸೇರಿವೆ. ಇವು ಇಂಟೆಲ್ ಮತ್ತು AMD ಪ್ರೊಸೆಸರ್ ಹೊಂದಿದ್ದು, ಕಾರ್ಯಕ್ಷಮತೆ, ಭದ್ರತೆ ಮತ್ತು ಉತ್ಪಾದಕತೆಯನ್ನು ಹೆಚ್ಚಿಸಲು AI ಸಾಮರ್ಥ್ಯಗಳನ್ನು ಒಳಗೊಂಡಿವೆ.
EliteBook ಲ್ಯಾಪ್‌ಟಾಪ್ ವೈಶಿಷ್ಟ್ಯಗಳು
- HP EliteBook Ultra G1i 14-inch
- ತೂಕ: 1.19 ಕೆಜಿ, ಹಗುರ ವಿನ್ಯಾಸ
- ಪ್ರೊಸೆಸರ್: ಇಂಟೆಲ್ ಕೋರ್ ಅಲ್ಟ್ರಾ 5 ಮತ್ತು 7 (ಸರಣಿ 2)
- AI ಶಕ್ತಿ: 48 TOPS ಕಾರ್ಯಾಚರಣೆಗಳು
- ಡಿಸ್ಪ್ಲೇ: 120Hz 3K OLED
- ಕ್ಯಾಮೆರಾ: 9MP AI-ಚಾಲಿತ
- HP EliteBook X G1i ಮತ್ತು Flip G1i 14-inch
- ಪ್ರೊಸೆಸರ್: ಇಂಟೆಲ್ ಕೋರ್ ಅಲ್ಟ್ರಾ 5 ಮತ್ತು 7
- ವೈಶಿಷ್ಟ್ಯಗಳು: AI-ಚಾಲಿತ ಮೀಟಿಂಗ್ ಟ್ರಾನ್ಸ್ಕ್ರಿಪ್ಷನ್, ಸ್ವಯಂಚಾಲಿತ ವಿಷಯ ರಚನೆ
- ತೂಕ: 1.4 ಕೆಜಿ (Flip ಮಾದರಿಯು ಟ್ಯಾಬ್ಲೆಟ್ ಆಗಿ ಪರಿವರ್ತನೆಗೊಳ್ಳುತ್ತದೆ)
- ಸುರಕ್ಷತೆ: ಫಿಂಗರ್ಪ್ರಿಂಟ್ ಸೆನ್ಸರ್, ಪಾಲಿ ಕ್ಯಾಮೆರಾ ಪ್ರೊ
- HP EliteBook X G1a 14-inch
- ಪ್ರೊಸೆಸರ್: AMD ರೈಜೆನ್ 7 PRO ಮತ್ತು 9 PRO
- AI ಶಕ್ತಿ: 55 TOPS
- RAM: 64GB LPDDR5x
- ವೆಬ್ಕ್ಯಾಮ್: AI-ಚಾಲಿತ, ಅಡಾಪ್ಟಿವ್ ಡಿಮ್ಮಿಂಗ್
- ಚಾರ್ಜಿಂಗ್: 30 ನಿಮಿಷಗಳಲ್ಲಿ 50% ಚಾರ್ಜ್
EliteBook ಲ್ಯಾಪ್ಟಾಪ್ ಬೆಲೆ ಮತ್ತು ಲಭ್ಯತೆ
- HP EliteBook Ultra G1i 14-inch – ರೂ. 2,67,223 (ಅಟ್ಮಾಸ್ಫಿಯರ್ ನೀಲಿ)
- HP EliteBook X G1i 14-inch – ರೂ. 2,23,456 (ಅಟ್ಮಾಸ್ಫಿಯರ್ ನೀಲಿ, ಗ್ಲೇಸಿಯರ್ ಸಿಲ್ವರ್)
- HP EliteBook X G1a 14-inch – ರೂ. 2,58,989 (ಅಟ್ಮಾಸ್ಫಿಯರ್ ನೀಲಿ, ಗ್ಲೇಸಿಯರ್ ಸಿಲ್ವರ್)
ಈ ಲ್ಯಾಪ್‌ಟಾಪ್‌ಗಳ AI-ಚಾಲಿತ ವೈಶಿಷ್ಟ್ಯಗಳು, ಸ್ಮಾರ್ಟ್ ಸಹಯೋಗ ಪರಿಕರಗಳು, ಭದ್ರತಾ ಸುಧಾರಣೆಗಳು ಮತ್ತು ಸುಸ್ಥಿರ ವಿನ್ಯಾಸವನ್ನು ಒದಗಿಸುತ್ತವೆ. ವೃತ್ತಿಪರರು ಮತ್ತು ವ್ಯಾಪಾರ ಬಳಕೆದಾರರಿಗೆ ಇದು ಅತ್ಯುತ್ತಮ ಆಯ್ಕೆಯಾಗಲಿದೆ ಎಂದು HP ಕಂಪೆನಿ ತಿಳಿಸಿದೆ.