Ramanagar: ಬಮೂಲ್ ಸಂಸ್ಥೆ ರೈತರದಾಗಿದೆ ಮತ್ತು ಅದನ್ನು ಬಲಪಡಿಸುವುದು ನನ್ನ ಜವಾಬ್ದಾರಿ ಎಂದು ಅಧ್ಯಕ್ಷ ಡಿ.ಕೆ. ಸುರೇಶ್ (D.K. Suresh)ಳಿದ್ದಾರೆ. “ನನಗೆ ಡೈರಿಯ ಸಂಬಳವೂ ಬೇಡ, ಸೌಲಭ್ಯವೂ ಬೇಡ. ನಾನು ಪ್ರಾಮಾಣಿಕವಾಗಿ ಕೆಲಸ ಮಾಡುತ್ತೇನೆ. ಎಲ್ಲ ನಾಯಕರು ಸಹಕರಿಸಬೇಕು” ಎಂದು ಹೇಳಿದರು.
ಮಾಗಡಿಯಲ್ಲಿ ನಡೆದ ಅಭಿನಂದನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, “ನಂದಿನಿ ಉತ್ಪನ್ನಗಳನ್ನು ಉಳಿಸಿ, ಬೆಳೆಸಿ, ಹೆಚ್ಚು ಬಳಸಿ” ಎಂದು ಜನರಿಗೆ ಮನವಿ ಮಾಡಿದರು.
ಪನ್ನೀರಿಗೆ ಶೇ 5 ರಷ್ಟು ಮಾತ್ರ ಪೂರೈಕೆ ಆಗುತ್ತಿದೆ ಎಂದು ಅಕ್ಷೇಪ ವ್ಯಕ್ತಪಡಿಸಿ, ಪೂರೈಕೆ ಹೆಚ್ಚಿಸುವ ಗುರಿ ಹೊಂದಿರುವುದಾಗಿ ಹೇಳಿದರು. ಹೊಸಕೋಟೆ ಮತ್ತು ದೊಡ್ಡಬಳ್ಳಾಪುರದಲ್ಲಿ ಹಾಲು ಸಂಸ್ಕರಣಾ ಘಟಕ ಸ್ಥಾಪನೆಗಾಗಿಯೂ ಪ್ರಸ್ತಾಪಿಸಿದರು.
“ಸಮಸ್ಯೆ ಬಗೆಹರಿಸಲು ನಾನು ಕೆಟ್ಟವನಾಗಬೇಕಾದರೂ ಪರವಾಗಿಲ್ಲ” ಎಂದು ಸ್ಪಷ್ಟವಾಗಿ ಹೇಳಿದರು. ತಮ್ಮ ಉದ್ದೇಶ ರೈತರ ಹಿತಾಸಕ್ತಿಯೇ ಎಂದು ತಿಳಿಸಿದರು. ಹಾಲಿನ ಗುಣಮಟ್ಟ, ಪಶು ವೈದ್ಯರ ಕೊರತೆ, ಡೈರಿ ವ್ಯವಸ್ಥೆಯ ಸಮಸ್ಯೆಗಳ ಬಗ್ಗೆ ಅವರು ಮಾತನಾಡಿದರು.
ಹಾಲು ಉತ್ಪಾದಕರಿಗೆ ಪ್ರೋತ್ಸಾಹ ನೀಡಲು, 3% ಬಡ್ಡಿದರದಲ್ಲಿ 2 ಲಕ್ಷವರೆಗೆ ಸಾಲ ನೀಡಲು ಬ್ಯಾಂಕ್‌ಗಳಿಗೆ ಸೂಚನೆ ನೀಡಲಾಗಿದೆ. ಜಿಪಿಎಸ್ ವ್ಯವಸ್ಥೆ ಮತ್ತು ಗುಣಮಟ್ಟ ತಂತ್ರಜ್ಞಾನ ಅಳವಡಿಸುವ ಯೋಜನೆಯೂ ಇದೆ.
“ನಮ್ಮ ರಾಜ್ಯದಲ್ಲೇ ಮಾರುಕಟ್ಟೆ ಇದೆ, ಹೊರ ರಾಜ್ಯಕ್ಕೆ ಹೋಗಬೇಕಿಲ್ಲ” ಎಂದು ಹೇಳಿದರು. ಎಲ್ಲಾ ಹಾಲು ಸಹಕಾರಿ ಸಂಘಗಳು ನಂದಿನಿ ಬಳಕೆ ತ್ವರಿತಗೊಳಿಸುವ ಯೋಜನೆ ರೂಪಿಸಬೇಕೆಂದು ಸಲಹೆ ನೀಡಿದರು.
“ನೀರಾವರಿ ಯೋಜನೆಗೆ ಪಕ್ಷಾತೀತ ಹೋರಾಟ ಅಗತ್ಯ” ಎಂದೂ ಹೇಳಿದರು. “ನೀರು ಕುಡಿಯಲು ಕೇಳುತ್ತಿದ್ದೇವೆ, ವ್ಯವಸಾಯಕ್ಕಲ್ಲ” ಎಂಬದು ಅವರ ಅಭಿಪ್ರಾಯ.
ಕೊನೆಗೆ, “ನನಗೆ ಅಧಿಕಾರವಿಲ್ಲದಿದ್ದರೂ ನಿಮ್ಮ ಕೆಲಸ ಮಾಡುತ್ತೇನೆ” ಎಂಬ ಭರವಸೆಯ ಮಾತುಗಳ ಮೂಲಕ ಜನರ ವಿಶ್ವಾಸಕ್ಕೆ ತಕ್ಕ ಕೆಲಸ ಮಾಡುವುದಾಗಿ ಹೇಳಿದರು.