Bengaluru: ಭಾರತದಲ್ಲಿಯೇ ಮೂರನೇ ಅತಿ ದೊಡ್ಡ ಮದ್ಯ ಉತ್ಪಾದಕ ಕಂಪನಿಯಾದ ಅಲೈಡ್ ಬ್ಲೆಂಡರ್ಸ್ ಅಂಡ್ ಡಿಸ್ಟಿಲರ್ಸ್ ಲಿಮಿಟೆಡ್ (Allied Blenders and Distillers Limited-ABDL) ತನ್ನ ಐಕಾನಿಕ್ ವೈಟ್ ವಿಸ್ಕಿಯನ್ನು (Iconic white whiskey) ಕರ್ನಾಟಕದಲ್ಲಿ ಬಿಡುಗಡೆ ಮಾಡಿದೆ.
ಐಕಾನಿಕ್ ವೈಟ್ ವಿಸ್ಕಿ (Iconic white whiskey) ವಿಶ್ವದ ವೇಗವಾಗಿ ಬೆಳೆಯುತ್ತಿರುವ ಮದ್ಯ ಬ್ರ್ಯಾಂಡ್ಗಳಲ್ಲಿ ಒಂದಾಗಿದೆ. ಇದು ಭಾರತದ ವಿವಿಧ ಭಾಗಗಳ ವಿಸ್ಕಿ ಪ್ರಿಯರ ಮನಸ್ಸು ಗೆಲ್ಲುತ್ತಿದೆ.
ಐಕಾನಿಕ್ ವೈಟ್ ವಿಸ್ಕಿ, ಕರ್ನಾಟಕದ ಪ್ರೀಮಿಯಮ್ ಮತ್ತು ಡಿಲಕ್ಸ್ ಸೆಗ್ಮೆಂಟ್ ಮಾರುಕಟ್ಟೆಯಲ್ಲಿ ದೊಡ್ಡ ಹಂಚಿಕೆಯನ್ನು ಗಳಿಸುವುದರೊಂದಿಗೆ, ವಿಸ್ಕಿ ಕುಡಿಯುವ ಅನುಭವವನ್ನು ಹೊಸ ಮಟ್ಟಕ್ಕೆ ತೆಗೆದುಕೊಳ್ಳಲು ಉದ್ದೇಶಿಸಿದೆ.
ಈ ವಿಸ್ಕಿ ಸಂಸ್ಕೃತಿಯನ್ನೂ ಸೊಗಸಾದ ಅನುಭವವನ್ನು ಬಯಸುವವರಿಗೆ ವಿಶೇಷವಾಗಿ ವಿನ್ಯಾಸಗೊಳಿಸಲಾಗಿದೆ. ಇದು ಇಂಪೋರ್ಟ್ ಮಾಡಿದ ಸ್ಕಾಚ್ ಮಾಲ್ಟ್ ಮತ್ತು ಭಾರತೀಯ ಧಾನ್ಯ ಮದ್ಯದ ಮಿಶ್ರಣ, ಬರ್ಬನ್ ಓಕ್ ಕ್ಯಾಸ್ಕ್ಗಳಲ್ಲಿ ವಯಸ್ಸಾದಿದ್ದು, ಉನ್ನತ ಗುಣಮಟ್ಟ ಮತ್ತು ರುಚಿಯನ್ನು ನೀಡುವಂತೆ ತಯಾರಿಸಲಾಗಿದೆ.
ಕನ್ನಡಿಗರ ಮದ್ಯ ಮಾರುಕಟ್ಟೆಯಲ್ಲಿ 80% ಕ್ಕೂ ಹೆಚ್ಚು ಪ್ರಭಾವವಿರುವ ವಿಸ್ಕಿಯ ಸೆಗ್ಮೆಂಟ್‌ನಲ್ಲಿ, ಐಕಾನಿಕ್ ವೈಟ್‌ನ ಪರಿಚಯವು ABD ಗೆ ಮಹತ್ವದ ಹೆಜ್ಜೆಯಾಗಿದೆ.
ಈ ಮೂಲಕ ಪ್ರೀಮಿಯಮ್ ಉತ್ಪನ್ನಗಳ ಮೂಲಕ ಡಿಲಕ್ಸ್ ಸೆಗ್ಮೆಂಟ್ ನಲ್ಲಿ ಮಾರುಕಟ್ಟೆಯ ಮುಖ್ಯ ಪಾತ್ರವನ್ನಾಡಲು ABD ಪ್ರಯತ್ನಿಸುತ್ತಿದೆ.
ABDL ನ ಚೀಫ್ ಡಿಸ್ಕವರಿ ಅಂಡ್ ಸ್ಟ್ರಾಟೆಜಿ ಆಫೀಸರ್ ಬಿಕ್ರಮ್ ಬಸು ಅವರು, “ಐಕಾನಿಕ್ ವೈಟ್ ವಿಸ್ಕಿಯ ಆರಂಭವು ಪ್ರೀಮಿಯಮ್ ಗುಣಮಟ್ಟದ ವಿಸ್ಕಿ ನೀಡುವ ABD ನ ಬದ್ಧತೆಯನ್ನು ತೋರಿಸುತ್ತದೆ.
ಇದು ಪ್ರಮುಖ ಮಾರುಕಟ್ಟೆಗಳಲ್ಲಿ ವಿಸ್ಕಿ ಪ್ರಿಯರ ಆಸಕ್ತಿಯನ್ನು ಪೂರೈಸಲು ವಿನ್ಯಾಸಗೊಳಿಸಲಾಗಿದೆ,” ಎಂದು ಹೇಳಿದರು.
ಐಕಾನಿಕ್ ವೈಟ್ ವಿಸ್ಕಿ ಕರ್ನಾಟಕದಲ್ಲಿ ನಾಲ್ಕು ಮಾದರಿಗಳಲ್ಲಿ ಲಭ್ಯ
- 750 ಮಿಲಿ – ₹970
- 375 ಮಿಲಿ – ₹485
- 180 ಮಿಲಿ – ₹235
- 90 ಮಿಲಿ – ₹120
ಈ ವಿಸ್ಕಿ ಈಗಾಗಲೇ ಮಹಾರಾಷ್ಟ್ರ, ಹರಿಯಾಣ, ಮಧ್ಯಪ್ರದೇಶ, ರಾಜಸ್ಥಾನ, ಹಿಮಾಚಲ ಪ್ರದೇಶ, ಚಂಡೀಗಡ, ಗೋವಾ, ಪಶ್ಚಿಮ ಬಂಗಾಳ, ಉತ್ತರಪ್ರದೇಶ, ದೆಹಲಿ ಸೇರಿದಂತೆ 22 ರಾಜ್ಯಗಳಲ್ಲಿ ಲಭ್ಯವಿದೆ.