Search
WhatsApp alerts

Home › India

ನಕ್ಸಲರಿಂದ IED ಸ್ಫೋಟ; ಓರ್ವ ಯೋಧ ಹುತಾತ್ಮ, ಮೂವರಿಗೆ ಗಾಯ

administrator · Published

IED blast by Naxals; One soldier martyred, three injured

ಛತ್ತೀಸ್ ಗಢದ ಬಿಜಾಪುರ ಜಿಲ್ಲೆಯಲ್ಲಿ ನಕ್ಸಲ್ ವಿರೋಧಿ ಕಾರ್ಯಾಚರಣೆ ವೇಳೆ ನಕ್ಸಲರು ಇಟ್ಟಿದ್ದ ಐಇಡಿ ಬಾಂಬ್ ಸ್ಫೋಟಗೊಂಡು DRG ಯೋಧ ದಿನೇಶ್ ನಾಗ್ ಹುತಾತ್ಮರಾಗಿದ್ದಾರೆ. ಈ ದಾಳಿಯಲ್ಲಿ ಮೂವರು ಯೋಧರು ಗಾಯಗೊಂಡಿದ್ದಾರೆ.

ಆಗಸ್ಟ್ 17ರಂದು ರಾಷ್ಟ್ರೀಯ ಉದ್ಯಾನ ಪ್ರದೇಶದಲ್ಲಿ DRG ಪಡೆ ಶೋಧ ನಡೆಸುತ್ತಿದ್ದಾಗ ನಕ್ಸಲರು ನೆಲದಡಿ ಇಟ್ಟಿದ್ದ ಐಇಡಿ ಸ್ಫೋಟಗೊಂಡಿತು. ಈ ಸ್ಫೋಟ ಒತ್ತಡದಿಂದ ನಡೆದಿತ್ತೆ ಅಥವಾ ಕಮಾಂಡ್ ಸ್ವಿಚ್ ಮೂಲಕವೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.

ಮೂವರು ಯೋಧರು ಗಾಯಗೊಂಡಿದ್ದು, ಅವರ ಆರೋಗ್ಯ ಸ್ಥಿರವಾಗಿದೆ. ಅವರಿಗೆ ಸೂಕ್ತ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಎಎಸ್ಪಿ ಚಂದ್ರಕಾಂತ್ ಗೋವರ್ಣ ತಿಳಿಸಿದ್ದಾರೆ.

ಚಿಲ್ಲಾ ಮಾರ್ಕಾ ಗ್ರಾಮದ ಬಳಿ ನಕ್ಸಲರು ಬಾಂಬ್ ಅಡಗಿಸಿದ್ದರು. ಈ ಘಟನೆ ಉಲ್ಲೂರ್ ಕಣಿವೆಯ ರಾಷ್ಟ್ರೀಯ ಉದ್ಯಾನ ಪ್ರದೇಶದಲ್ಲಿ ನಡೆದಿದೆ ಎಂದು ಬಿಜಾಪುರ ಎಸ್ಪಿ ಬಿಜೇತಂದ್ರ ಯಾದವ್ ದೃಢಪಡಿಸಿದ್ದಾರೆ.

ಆಗಸ್ಟ್ 15ರ ಮೊದಲು ಬಿಜಾಪುರದ ಭೈರಾಮ್ ಗಢ ಬ್ಲಾಕ್ ನಲ್ಲೂ ಐಇಡಿ ಸ್ಫೋಟ ಸಂಭವಿಸಿ ಒಬ್ಬ ಯೋಧ ಗಾಯಗೊಂಡಿದ್ದರು.

For Daily Updates WhatsApp ‘HI’ to 7406303366

Read next

ಕೊಲುಮೇನಹಳ್ಳಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಸ್ಟಾಫ್ ನರ್ಸ್ ಹುದ್ದೆ: ನವೆಂಬರ್ 25ರ ಒಳಗೆ ಅರ್ಜಿ

ಕುಂಬಾರ ಸಮುದಾಯಗಳ ಅಭಿವೃದ್ಧಿ ನಿಗಮದ ಯೋಜನೆಗಳಿಗೆ ಅರ್ಜಿ ಆಹ್ವಾನ: ಡಿಸೆಂಬರ್ 16 ಕೊನೆಯ ದಿನ

ಶ್ರೀ ನಾರಾಯಣಗುರು ಅಭಿವೃದ್ಧಿ ನಿಗಮದ ಯೋಜನೆಗಳಿಗೆ ಅರ್ಜಿ ಆಹ್ವಾನ: ಡಿಸೆಂಬರ್ 16 ಕೊನೆಯ ದಿನ

ಸ್ಥಳೀಯ ಸಮಸ್ಯೆಗಳಿಗೆ ಪರಿಹಾರ ಕಂಡು ಹಿಡಿಯಿರಿ: ಚಿಕ್ಕಬಳ್ಳಾಪುರದಲ್ಲಿ ಮಕ್ಕಳ ವಿಜ್ಞಾನ ಸಮಾವೇಶ

You cannot copy content of this page