Washington DC: ಅಮೆರಿಕದಲ್ಲಿ ಕರ್ತವ್ಯದಲ್ಲಿದ್ದ ಗಡಿ ಭದ್ರತಾ ಅಧಿಕಾರಿಯೊಬ್ಬನ ಮೇಲೆ ಅಕ್ರಮ ವಲಸಿಗನೊಬ್ಬ (Illegal Immigrant) ಗುಂಡು ಹಾರಿಸಿದ ಘಟನೆ ನಡೆದಿದೆ. ಈ ಘಟನೆಯ ಬಗ್ಗೆ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಟ್ರಂಪ್ ಅವರು “ಟ್ರೂತ್ ಸೋಷಿಯಲ್” ಎಂಬ ತನ್ನ ಖಾತೆಯಲ್ಲಿ, ಈ ದಾಳಿ ಮಾಡಿದ ವ್ಯಕ್ತಿಯು ಏಪ್ರಿಲ್ 2023ರಲ್ಲಿ ಬಂಧನಕ್ಕೊಳಗಾಗಿದ್ದರೂ, ಗಡಿಪಾರು ಮಾಡದೇ ಬಿಡುಗಡೆ ಮಾಡಲಾಗಿದೆ ಎಂದು ಆರೋಪಿಸಿದರು. ಅವರು ಈ ಘಟನೆಗೆ ಜೋ ಬೈಡನ್ ಆಡಳಿತವನ್ನು ಹೊಣೆಹಾಕಿದ್ದಾರೆ.
ನ್ಯೂಯಾರ್ಕ್‌ನಲ್ಲಿ 21 ವರ್ಷದ ಡೊಮಿನಿಕನ್ ಪ್ರಜೆ ಮಿಗುಯೆಲ್ ಫ್ರಾನ್ಸಿಸ್ಕೊ ಮೊರಾ ನುನೆಜ್ ಎಂಬಾತ ಈ ದಾಳಿಗೆ ಕಾರಣನಾಗಿದ್ದು, ಅಕ್ರಮವಾಗಿ ಅಮೆರಿಕ ಪ್ರವೇಶಿಸಿದ್ದ ಎನ್ನಲಾಗಿದೆ. ಈತನ ವಿರುದ್ಧ ಹಲವಾರು ಅಪರಾಧ ದಾಖಲೆಗಳಿವೆ ಎಂದು ಹೇಳಲಾಗಿದೆ.
ಗುಂಡಿನ ದಾಳಿಯ ಬಳಿಕ ಅಧಿಕಾರಿಯು ಧೈರ್ಯದಿಂದ ಪ್ರತಿದಾಳಿ ನಡೆಸಿದ್ದು, ದಾಳಿ ಮಾಡಿದ ವ್ಯಕ್ತಿಗೆ ಗಾಯಗಳಾಗಿವೆ. ಘಟನೆ ನಡೆದಾಗ ಅಧಿಕಾರಿಯು ತನ್ನ ಮಹಿಳಾ ಸಹಚರನೊಂದಿಗೆ ನದಿಯ ಬಂಡೆಯ ಮೇಲೆ ಕುಳಿತಿದ್ದನು. ಆಗ ರಾತ್ರಿ 11:50ರ ಸುಮಾರಿಗೆ ಇಬ್ಬರು ದಾಳಿ ನಡೆಸಿದ್ದಾರೆ.
ಅಕ್ರಮ ವಲಸಿಗರಿಂದ ಅಮೆರಿಕದ ಭದ್ರತೆಗೆ ಅಪಾಯವಿದೆ ಎಂದು ಟ್ರಂಪ್ ಅವರು ಎಚ್ಚರಿಸಿದ್ದು, ಇಂತಹ ಕ್ರಿಮಿನಲ್ ವ್ಯಕ್ತಿಗಳನ್ನು ಮತ್ತೆ ದೇಶ ಪ್ರವೇಶಿಸಲು ಅವಕಾಶ ನೀಡಬಾರದು ಎಂದಿದ್ದಾರೆ.