back to top
27.7 C
Bengaluru
Saturday, August 30, 2025
HomeBusinessKashmir War ಪರಿಣಾಮ - Kodagu ನಲ್ಲಿ ಪ್ರವಾಸಿಗರ ಸಂಖ್ಯೆ ಏರಿಕೆ

Kashmir War ಪರಿಣಾಮ – Kodagu ನಲ್ಲಿ ಪ್ರವಾಸಿಗರ ಸಂಖ್ಯೆ ಏರಿಕೆ

- Advertisement -
- Advertisement -

Kodagu: ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಭಯೋತ್ಪಾದಕರು ಕೆಲ ಪ್ರವಾಸಿಗರನ್ನು ಕೊಂದ ನಂತರ, ಅಲ್ಲಿನ ಪ್ರವಾಸೋದ್ಯಮಕ್ಕೆ ಭಾರಿ ಹೊಡೆತ ಬಿದ್ದಿತ್ತು. ಇದಕ್ಕೆ ಪ್ರತಿಯಾಗಿ ಭಾರತೀಯ ಸೇನೆ ಉಗ್ರರ ಮೇಲೆ ದಾಳಿ ನಡೆಸಿ ಹಲವು ಶಿಬಿರಗಳನ್ನು ನಾಶ ಮಾಡಿತು. ಇದರಿಂದಾಗಿ ಕಾಶ್ಮೀರ ಪ್ರವಾಸಕ್ಕೆ (Kashmir War) ತಾತ್ಕಾಲಿಕ ಬ್ರೇಕ್ ಬಿದ್ದಿತ್ತು. ಬಳಿಕ ಭಾರತ ಮತ್ತು ಪಾಕಿಸ್ತಾನ ನಡುವಿನ ಉದ್ವಿಗ್ನ ಪರಿಸ್ಥಿತಿಯಿಂದಾಗಿ ಜನರು ಹಿಂಜರಿದ್ರು.

ಆದರೆ ಈ ಸ್ಥಿತಿಯಿಂದ ಕೊಡಗಿಗೆ ಹೋಗುವ ಪ್ರವಾಸಿಗರ ಸಂಖ್ಯೆಯಲ್ಲಿ ಮಾತ್ರ ಹೆಚ್ಚಳ ಕಂಡುಬಂದಿದೆ. ಕಾಶ್ಮೀರಕ್ಕೆ ಹೋಗಬೇಕೆಂದಿದ್ದ ಸಾವಿರಾರು ಜನರು ಈಗ ಕೊಡಗಿಯನ್ನು ಆರಿಸಿಕೊಂಡಿದ್ದಾರೆ. ಕಳೆದ 15 ದಿನಗಳಲ್ಲಿ ಸುಮಾರು 30 ಸಾವಿರಕ್ಕೂ ಹೆಚ್ಚು ಪ್ರವಾಸಿಗರು ಕೊಡಗಿಗೆ ಭೇಟಿ ನೀಡಿದ್ದಾರೆ.

ದಕ್ಷಿಣ ಭಾರತದ ರಾಜ್ಯಗಳಿಂದ ಕೊಡಗಿಗೆ ಬರುವ ಪ್ರವಾಸಿಗರ ಸಂಖ್ಯೆ ಹೆಚ್ಚಿದರೆ, ಉತ್ತರ ಭಾರತದ ಪ್ರವಾಸಿಗರ ಸಂಖ್ಯೆ ಇಳಿದಿದೆ. ಯುದ್ಧದ ಸಂದರ್ಭದಲ್ಲಿನ ವಿಮಾನ ನಿಲ್ದಾಣಗಳ ತಾತ್ಕಾಲಿಕ ಸ್ಥಗಿತದಿಂದ ಹಲವು ಬುಕ್ಕಿಂಗ್‌ಗಳು ರದ್ದುಪಡಿಸಲ್ಪಟ್ಟಿದ್ದವು.

ಸದ್ಯ ಎಲ್ಲ ವಿಮಾನ ನಿಲ್ದಾಣಗಳು ಮತ್ತೆ ಕಾರ್ಯನಿರ್ವಹಿಸುತ್ತಿರುವ ಹಿನ್ನೆಲೆಯಲ್ಲಿ, ಹಾಗೂ ಕಾಶ್ಮೀರದಲ್ಲಿ ಪ್ರವಾಸೋದ್ಯಮ ಇನ್ನೂ ಆರಂಭವಾಗದ ಕಾರಣ, ಮುಂದಿನ ವಾರಗಳಿಂದ ಕೊಡಗಿಗೆ ಬರುವ ಪ್ರವಾಸಿಗರ ಸಂಖ್ಯೆ ಇನ್ನಷ್ಟು ಹೆಚ್ಚಾಗುವ ನಿರೀಕ್ಷೆಯಿದೆ.

- Advertisement -
Latest news
- Advertisement -
Related news
- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!

You cannot copy content of this page