New Delhi: 2023-24ರ ಅಸೆಸ್ಮೆಂಟ್ ವರ್ಷದಲ್ಲಿ ದೇಶಾದ್ಯಾಂತ 2.29 ಕೋಟಿಯಷ್ಟು ಮಹಿಳೆಯರು (Women) ಆದಾಯ ತೆರಿಗೆ (income tax) ರಿಟರ್ನ್ (ITR) ಸಲ್ಲಿಸಿದ್ದಾರೆ, ಇದು 2019-20ರ ಅಸೆಸ್ಮೆಂಟ್ ವರ್ಷದಲ್ಲಿ 1.83 ಕೋಟಿ ಮಹಿಳೆಯರಿಂದ ಪಾವತಿ. ಇವು ಶೇ. 25ರಷ್ಟು ಏರಿಕೆಯನ್ನು ಸೂಚಿಸುತ್ತದೆ.
ಮಹಾರಾಷ್ಟ್ರದಲ್ಲಿ ಅತ್ಯಧಿಕ ಸಂಖ್ಯೆಯಲ್ಲಿ ಮಹಿಳೆಯರು ITR ಸಲ್ಲಿಸಿದ್ದಾರೆ. 2019-20ರಲ್ಲಿ ಮಹಾರಾಷ್ಟ್ರದಲ್ಲಿ 29.95 ಲಕ್ಷ ಮಹಿಳೆಯರು ಐಟಿಆರ್ ಸಲ್ಲಿಸಿದ್ದರು. ಇದು 2023-24ರಲ್ಲಿ 36.84 ಲಕ್ಷಕ್ಕೆ ಏರಿಕೆಯಾಗಿದೆ.
ಇನ್ನು ಕರ್ನಾಟಕದಲ್ಲಿ 2019-20ರಲ್ಲಿ 11,34,903 ಮಹಿಳೆಯರು ಐಟಿಆರ್ ಸಲ್ಲಿಸಿದ್ದರು, ಮತ್ತು 2023-24ರಲ್ಲಿ ಈ ಸಂಖ್ಯೆ 14,30,345ಕ್ಕೆ ಏರಿದೆ. ಇದು ಮಹಿಳೆಯರ ಐಟಿಆರ್ ಸಲ್ಲಿಕೆಯಲ್ಲಿ ಶೇ. 25ರಷ್ಟು ಹೆಚ್ಚಳವನ್ನು ತೋರಿಸುತ್ತದೆ.
ಮಹಿಳಾ ತೆರಿಗೆ ಪಾವತಿಯಲ್ಲಿ ಮಹಾರಾಷ್ಟ್ರ ಮತ್ತು ಉತ್ತರಪ್ರದೇಶ ನಂತರ ಗುಜರಾತ್, ಪಂಜಾಬ್, ಮತ್ತು ಕರ್ನಾಟಕ ರಾಜ್ಯಗಳು ಟಾಪ್-5ನಲ್ಲಿ ಇವೆ.