ಇಂದು ಅಡಿಲೇಡ್ ಓವಲ್‌ನಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಎರಡನೇ ಏಕದಿನ ಪಂದ್ಯ ನಡೆಯುತ್ತಿದೆ. ಟಾಸ್ ಸೋತ ಭಾರತ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದಿದೆ. ಆದರೆ ಆರಂಭದಿಂದಲೇ ಭಾರತ ಕಳಪೆ ಆರಂಭವಾಗಿದೆ. 17 ರನ್ ಗಳಿಗೆ 2 ವಿಕೆಟ್ ಕಳೆದುಕೊಂಡಿದ್ದಾರೆ.
ಆರಂಭಿಕ ಬ್ಯಾಟ್ಸ್‌ಮನ್‌ಗಳು ಶುಭಮನ ಗಿಲ್ ಮತ್ತು ರೋಹಿತ್ ಉತ್ತಮ ಆರಂಭ ಮಾಡುವ ನಿರೀಕ್ಷೆಯಲ್ಲಿ ಇದ್ದರು. ಆದರೆ ಆಸ್ಟ್ರೇಲಿಯಾ ಬೌಲರ್‌ಗಳು ಅವರಿಗೆ ಅವಕಾಶ ನೀಡಿಲ್ಲ. ಗಿಲ್ ಕೇವಲ 9 ರನ್ ಮಾಡುವಷ್ಟರಲ್ಲಿ ಪೆವಿಲಿಯನ್‌ಗೆ ಹಿಂದಿರುಗಿದರು.
ವಿರಾಟ್ ಕೊಹ್ಲಿ 3ನೇ ಬ್ಯಾಟ್ಸ್‌ಮನ್ ಆಗಿ ಬಂದರೂ ಭರ್ಜರಿ ಪ್ರದರ್ಶನ ನೀಡಲಿಲ್ಲ. 6ನೇ ಓವರಿನಲ್ಲಿ ಜೇವಿಯರ್ ಬಾರ್ಟ್ಲೆಟ್ ಅವರ ಬೌಲಿಂಗ್‌ಗೆ LBW ಆಗಿ ಅವರು ಪೆವಿಲಿಯನ್‌ಗೆ ಮರಳಿದರು. ಇದು ಕೊಹ್ಲಿಯ ಸತತ ಎರಡನೇ ಡಕೌಟ್ ಆಗಿದೆ. ಮೊದಲ ಪಂದ್ಯದಲ್ಲಿಯೂ ಅವರು ಖಾತೆ ತೆರೆಯದೆ ಕ್ಯಾಚೌಟ್ ಆಗಿದ್ದರು.







