![](https://kannadatopnews.com/wp-content/uploads/2024/01/19JanCBP02.jpg)
Chikkaballapur : ತಮ್ಮ ಹಲವು ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಗುರುವಾರದಿಂದ ಲಾರಿ, ಖಾಸಗಿ ಬಸ್, ಲಘು ವಾಹನಗಳ ಮಾಲೀಕರು ಹಾಗೂ ಚಾಲಕರು ಅನಿರ್ಧಿಷ್ಟಾವಧಿ ಮುಷ್ಕರ (indefinite strike of lorry drivers) ಆರಂಭಿಸಿದ್ದು, ಅದರ ಭಾಗವಾಗಿಯೇ ಜಿಲ್ಲೆಯಾದ್ಯಂತ ಹಲವೆಡೆ ಪ್ರತಿಭಟನಾ ಮೆರವಣಿಗೆಗಳು ನಡೆಯಿತು.
ಗೌರಿಬಿದನೂರು :
![indefinite strike of lorry drivers Gauribidanur](https://kannadatopnews.com/wp-content/uploads/2024/01/19JanGBR-1024x683-1.jpg)
ಗೌರಿಬಿದನೂರು ನಗರದಲ್ಲಿ ಲಾರಿ ಮತ್ತು ವಾಹನ ಚಾಲಕರ ಸಂಘದ ಪದಾಧಿಕಾರಿಗಳು ಅಂಬೇಡ್ಕರ್ ವೃತ್ತದವರೆಗೆ ಮೆರವಣಿಗೆ ನಡೆಸಿ ನಂತರ ಪ್ರತಿಭಟಿಸಿದರು.
ಚಿಂತಾಮಣಿ :
![indefinite strike of lorry drivers Chintamni](https://kannadatopnews.com/wp-content/uploads/2024/01/19JanCMY-1024x683-1.jpg)
ಚಿಂತಾಮಣಿ ಲಾರಿ ಮಾಲೀಕರು ಹಾಗೂ ಚಾಲಕರ ಸಂಘ, ಖಾಸಗಿ ಬಸ್ ಮಾಲೀಕರು ಹಾಗೂ ಚಾಲಕರು, ಲಘು ವಾಹನಗಳ ಮಾಲೀಕರು ಮತ್ತು ಚಾಲಕರು ಒಟ್ಟಾಗಿ ಚಿಂತಾಮಣಿ ನಗರದ ಕಾಮಕುಂಟೆ ಪ್ರದೇಶದಿಂದ ಬೈಕ್ ರ್ಯಾಲಿ ನಡೆಸಿದರು. ಚೇಳೂರು ರಸ್ತೆಯಿಂದ ಬೆಂಗಳೂರು ರಸ್ತೆಯಲ್ಲಿರುವ ಆರ್ಟಿಒ ಕಚೇರಿವರೆಗೆ, ಅಲ್ಲಿಂದ ಜೋಡಿ ರಸ್ತೆಯ ಮೂಲಕ ಬಾಗೇಪಲ್ಲಿ ವೃತ್ತ, ಎಂ.ಜಿ.ರಸ್ತೆ, ಕೋಲಾರ ವೃತ್ತದ ಮೂಲಕ ಮಾಡಿಕೆರೆ ಕ್ರಾಸ್ ತೆರಳಿ ಬೆಂಗಳೂರು-ಮದನಪಲ್ಲಿ ರಸ್ತೆಯಲ್ಲಿ ಪ್ರತಿಭಟನೆ ನಡೆಸಿದರು.
For Daily Updates WhatsApp ‘HI’ to 7406303366
The post ಜಿಲ್ಲೆಯಾದ್ಯಂತ ಲಾರಿ ಮಾಲೀಕರು ಹಾಗೂ ಚಾಲಕರ ಪ್ರತಿಭಟನೆ appeared first on Chikkaballapur.