Home India New Delhi ಕೆಂಪುಕೋಟೆ ಮೇಲೆ ಧ್ವಜಾರೋಹಣ ನಡೆಸಿದ ಪ್ರಧಾನಿ

ಕೆಂಪುಕೋಟೆ ಮೇಲೆ ಧ್ವಜಾರೋಹಣ ನಡೆಸಿದ ಪ್ರಧಾನಿ

292
Narendra Modi At Independence Day 2022 Azadi ka Amrit Mahotsav

New Delhi : ಸ್ವಾತಂತ್ರ್ಯ ದಿನಾಚರಣೆಯ ಅಮೃತ ಮಹೋತ್ಸವದ (Azadi ka Amrit Mahotsav) ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಇಂದು ಕೆಂಪುಕೋಟೆ (RedFort) ಮೇಲೆ ಸತತ 9 ನೇ ಬಾರಿಗೆ ಧ್ವಜಾರೋಹಣ ನೆರವೇರಿಸಿದರು.

ಧ್ವಜಾರೋಹಣದ ನಂತರ ದೇಶವನ್ನು ಉದ್ದೇಶಿಸಿ ಮಾತಾನಾಡಿದ ಪ್ರಧಾನಿ, ದೇಶವಾಸಿಗಳಿಗೆ 75ನೇ ಸ್ವಾತಂತ್ರೋತ್ಸವದ ಶುಭಾಶಯಗಳನ್ನು ಕೋರಿ, ಹರ್ ಘರ್ ತಿರಂಗ (Har Ghar Tiranga) ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದ ಎಲ್ಲರಿಗೂ ಅಭಿನಂದನೆ ಸಲ್ಲಿಸಿದರು. “ಮಂಗಲ್ ಪಾಂಡೆ (Mangal Pandey), ವೀರ ಸಾವರ್ಕರ್(Vinayak Damodar Savarkar), ಭಗತ್ ಸಿಂಗ್ (Bhagat Singh), ಗಾಂಧೀಜಿ (Mahatma Gandhi),ಜವಹಾರ್ ಲಾಲ್ ನೆಹರು (Jawaharlal Nehru), ತಾತ್ಯಾ ಟೋಪೆ (Tatya Tope), ಸುಖದೇವ್ (Sukhdev Thapar), ರಾಜಗುರು (Shivaram Rajguru), ಚಂದ್ರಶೇಖರ್ ಆಜಾದ್ (Chandra Shekhar Azad), ಅಶ್ಫಾಕುಲ್ಲಾ ಖಾನ್ (Ashfaqulla Khan), ರಾಮ್ ಪ್ರಸಾದ್ ಬಿಸ್ಮಿಲ್ ಸೇರಿದಂತೆ ಹಲವರು ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿ ಬ್ರಿಟಿಷ್ ಆಡಳಿತದ ಅಡಿಪಾಯವನ್ನು ಅಲುಗಾಡಿಸಿದ ನಮ್ಮ ಕ್ರಾಂತಿಕಾರಿಗಳಿಗೆ ಈ ದೇಶವು ಕೃತಜ್ಞವಾಗಿದೆ” ಎಂದು ತಿಳಿಸಿದರು.

ಭಾರತವು ಮಹತ್ವಾಕಾಂಕ್ಷೆಯ ದೇಶವಾಗಿದ್ದು ಈ 75 ವರ್ಷಗಳ ಪ್ರಯಾಣದಲ್ಲಿ, ಭರವಸೆಗಳು, ಆಕಾಂಕ್ಷೆಗಳು, ಏರಿಳಿತಗಳ ನಡುವೆ ನಾವು ಪ್ರತಿಯೊಬ್ಬರ ಪ್ರಯತ್ನದಿಂದ ಸಾಧ್ಯವಾದಷ್ಟು ಎತ್ತರಕ್ಕೆ ತಲುಪಿದ್ದೇವೆ. ಸ್ವಾತಂತ್ರ್ಯ ಶತಮಾನೋತ್ಸವದ ವೇಳೆಗೆ ನಮ್ಮ ದೇಶದ ಏಳಿಗೆಯ ಕನಸನ್ನು ಈಡೇಡಿಸಲು ನಾವು ‘ಪಂಚಪ್ರಾಣ’ (Panch Prans) ದ ಮೇಲೆ ಗಮನ ಹರಿಸಬೇಕು ಮೊದಲನೆಯದಾಗಿ, ಅಭಿವೃದ್ಧಿ ಹೊಂದಿದ ಭಾರತದ ದೊಡ್ಡ ಸಂಕಲ್ಪಗಳು ಮತ್ತು ಸಂಕಲ್ಪದೊಂದಿಗೆ ಮುಂದುವರಿಯುವುದು.
ಎರಡನೆಯದಾಗಿ, ದಾಸ್ಯದ ಎಲ್ಲಾ ಕುರುಹುಗಳನ್ನು ಅಳಿಸಿಹಾಕಿ.
ಮೂರನೆಯದಾಗಿ, ನಮ್ಮ ಪರಂಪರೆಯ ಬಗ್ಗೆ ಹೆಮ್ಮೆಪಡಿರಿ.
ನಾಲ್ಕನೆಯದು, ಏಕತೆಯ ಬಲ ಮತ್ತು
ಐದನೆಯದು, ಪ್ರಧಾನ ಮಂತ್ರಿ ಮತ್ತು ಮುಖ್ಯಮಂತ್ರಿಗಳನ್ನು ಒಳಗೊಂಡ ನಾಗರಿಕರ ಕರ್ತವ್ಯಗಳು ಎಂದು ಮೋದಿ ಹೇಳಿದರು.

For Daily Updates WhatsApp ‘HI’ to 7406303366

NO COMMENTS

LEAVE A REPLY

Please enter your comment!
Please enter your name here

You cannot copy content of this page