New Delhi: 2023ರಲ್ಲಿ 18.89 ದಶಲಕ್ಷ ವಿದೇಶಿ ಪ್ರವಾಸಿಗರು (foreign tourists) ಭಾರತಕ್ಕೆ ಆಗಮಿಸಿದ್ದಾರೆ. ಇದರಿಂದ ದೇಶದ ವಿದೇಶಿ ವಿನಿಮಯ (FEE) ಗಳಿಕೆ 2,31,927 ಕೋಟಿ ರೂ. ಗಳಿಗೆ ಏರಿಕೆಯಾಗಿದೆ ಎಂದು ಸರಕಾರ ಬುಧವಾರ ಪ್ರಕಟಿಸಿತು.
ಪ್ರವಾಸೋದ್ಯಮ ಸಚಿವಾಲಯದ ಅಂಕಿಅಂಶಗಳ ಪ್ರಕಾರ, 2023ರಲ್ಲಿ ಭಾರತದ ಪ್ರವಾಸಿಗಳಿಗೆ 9.52 ಮಿಲಿಯನ್ ವಿದೇಶಿ ಪ್ರವಾಸಿಗರು ಆಗಮಿಸಿದ್ದಾರೆ, ಹಾಗೂ 2,509 ಮಿಲಿಯನ್ ದೇಶೀಯ ಪ್ರವಾಸಿಗಳು ಪ್ರವಾಸಗಳನ್ನು ನಡೆಸಿದ್ದಾರೆ.
ಪ್ರವಾಸೋದ್ಯಮ ಕ್ಷೇತ್ರವನ್ನು ಉತ್ತೇಜಿಸಲು, ರಾಜ್ಯಗಳಿಗೆ ವಿಶೇಷ ನೆರವು (ಎಸ್ಎಎಸ್‌ಐ) ಯೋಜನೆ ಅಡಿಯಲ್ಲಿ 40 ಯೋಜನೆಗಳಿಗೆ 3,295.76 ಕೋಟಿ ರೂ. ಅನುದಾನವನ್ನು ಬಿಡುಗಡೆ ಮಾಡಲಾಗಿದೆ. ‘ಸ್ವದೇಶ ದರ್ಶನ 2.0’ ಯೋಜನೆ ಅಡಿಯಲ್ಲಿ 793.20 ಕೋಟಿ ರೂ. ವೆಚ್ಚದ 34 ಯೋಜನೆಗಳನ್ನು ಸಹ ಮಂಜೂರಿಯಾಗಿವೆ.
‘ಸ್ವದೇಶ ದರ್ಶನ 2.0’ ಯೋಜನೆ ಅಡಿಯಲ್ಲಿ ದೇಶದ ವಿವಿಧ ಪ್ರವಾಸಿ ತಾಣಗಳನ್ನು ಅಭಿವೃದ್ಧಿಪಡಿಸುವ ಉದ್ದೇಶವಿದೆ. 42 ತಾಣಗಳನ್ನು ಆಯ್ಕೆ ಮಾಡಿ ಅಭಿವೃದ್ಧಿಪಡಿಸಲು ಮತ್ತು ಪ್ರವಾಸಿಗರ ಅನುಭವವನ್ನು ಸುಧಾರಿಸಲು ಕ್ರಮಗಳನ್ನು ಕೈಗೊಂಡಿದೆ.
ಭಾರತಕ್ಕೆ ವಿದೇಶಿ ಪ್ರವಾಸಿಗರನ್ನು ಆಕರ್ಷಿಸಲು ‘ಚಲೋ ಇಂಡಿಯಾ’ ಅಭಿಯಾನವನ್ನು ಪ್ರಾರಂಭಿಸಲಾಗಿದೆ. ಇದರಡಿ, 1 ಲಕ್ಷ ಉಚಿತ ಇ-ವೀಸಾಗಳನ್ನು ನೀಡಲಾಗುತ್ತಿದೆ.