New Delhi: ಭಾರತವು ತನ್ನ ಒಟ್ಟು ಸ್ಥಾಪಿತ ವಿದ್ಯುತ್ ಉತ್ಪಾದನಾ (power generation) ಸಾಮರ್ಥ್ಯದಲ್ಲಿ ಶೇ. 50 ರಷ್ಟು ಶಕ್ತಿಯನ್ನು ಈಗ ಸ್ವಚ್ಛ ಮತ್ತು ಪಳೆಯುಳಿಕೆಯಲ್ಲದ ಇಂಧನ ಮೂಲಗಳಿಂದ ಉತ್ಪಾದಿಸುತ್ತಿದೆ. ಇದು ಭಾರತದ ಪ್ಯಾರಿಸ್ ಒಪ್ಪಂದದಂತೆ 2030ರ ಗುರಿಯೇ ಆಗಿತ್ತು. ಆದರೆ ಭಾರತವು ಐದು ವರ್ಷಗಳ ಮುಂಚೆಯೇ ಈ ಗುರಿಯನ್ನು ತಲುಪಿದೆ ಎಂದು ಕೇಂದ್ರ ಸರ್ಕಾರದ ಪ್ರಕಟಣೆ ತಿಳಿಸಿದೆ.
ಕೇಂದ್ರ ನವೀಕರಣ ಇಂಧನ ಸಚಿವ ಪ್ರಹ್ಲಾದ್ ಜೋಷಿ ಅವರು ಈ ಕುರಿತು ಎಕ್ಸ್‌ನಲ್ಲಿ (ಹಳೆಯ ಟ್ವಿಟ್ಟರ್) ಮಾಹಿತಿ ಹಂಚಿಕೊಂಡಿದ್ದಾರೆ. ಭಾರತ ಈಗ ನವೀಕರಣಶೀಲ ಇಂಧನ (solar, wind), ಜಲಶಕ್ತಿ ಮತ್ತು ಪರಮಾಣು ಇಂಧನ ಮೂಲಗಳಿಂದ ಶಕ್ತಿಯನ್ನು ಉತ್ಪಾದಿಸುತ್ತಿದೆ.
ಈಗ ದೇಶದ ಒಟ್ಟಾರೆ ಸ್ಥಾಪಿತ ಶಕ್ತಿ ಉತ್ಪಾದನಾ ಸಾಮರ್ಥ್ಯ 484.82 ಗಿಗಾವ್ಯಾಟ್ ಆಗಿದ್ದು, ಅದರಲ್ಲಿ 242.78 ಗಿಗಾವ್ಯಾಟ್ ಶಕ್ತಿ ಪಳೆಯುಳಿಕೆಯಲ್ಲದ ಮೂಲಗಳಿಂದ ಬರುತ್ತದೆ.
- ಸೌರ ಮತ್ತು ಗಾಳಿ ಶಕ್ತಿ: 184.62 ಗಿಗಾವ್ಯಾಟ
- ಜಲ ವಿದ್ಯುತ್: 49.38 ಗಿಗಾವ್ಯಾಟ್
- ಪರಮಾಣು ಶಕ್ತಿ: 8.78 ಗಿಗಾವ್ಯಾಟ್
ಪ್ರಹ್ಲಾದ್ ಜೋಷಿ ಅವರು “ಇಡೀ ಜಗತ್ತು ಹವಾಮಾನ ಬದಲಾವಣೆ ಬಗ್ಗೆ ಚಿಂತಿಸುತ್ತಿರುವಾಗ, ಭಾರತವು ದಾರಿ ತೋರಿಸುತ್ತಿದೆ. ಹಸಿರು ಪರಿವರ್ತನೆಗೆ ಇದು ಮಹತ್ವದ ಹೆಜ್ಜೆ” ಎಂದು ಹೇಳಿದ್ದಾರೆ.