New Delhi, India: ಭಾರತವು ಶನಿವಾರ ಅಫ್ಘಾನಿಸ್ತಾನಕ್ಕೆ (Afghanistan) 5 Lakh Doses COVID-19 ಲಸಿಕೆಗಳನ್ನು (Vaccine) ಹಸ್ತಾಂತರಿಸುವ ಮೂಲಕ ಹೊಸ ವರ್ಷವನ್ನು ಪ್ರಾರಂಭಿಸಿದೆ. ಇದು 10 ಲಕ್ಷ ಡೋಸ್ ಲಸಿಕೆ ಪೂರೈಕೆಯ ಭಾಗವಾಗಿದ್ದು, ಮುಂಬರುವ ವಾರಗಳಲ್ಲಿ ಇನ್ನುಳಿದ 5 ಲಕ್ಷ ಡೋಸ್ ಹಸ್ತಾಂತರಿಸುವ ಕಾರ್ಯ ಪೂರ್ಣಗೊಳ್ಳಲಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ (Ministry of External Affairs, India) ತಿಳಿಸಿದೆ.
“ಆಹಾರ ಧಾನ್ಯಗಳು, 10 ಲಕ್ಷ ಡೋಸ್ Covid-19 ಲಸಿಕೆ ಮತ್ತು ಅಗತ್ಯ ಜೀವ ಉಳಿಸುವ ಔಷಧಿಗಳನ್ನು ಒಳಗೊಂಡಿರುವ ಆಫ್ಘನ್ ಜನರಿಗೆ ಮಾನವೀಯ ನೆರವು ನೀಡಲು ಭಾರತ ಸರ್ಕಾರ ಬದ್ಧವಾಗಿದೆ” ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಪ್ರಕಟಿಸಿದೆ.
ಶನಿವಾರದ ಲಸಿಕೆ ರವಾನೆಯು ತಾಲಿಬಾನ್ ಆಳ್ವಿಕೆಯಲ್ಲಿರುವ ಅಫ್ಘಾನಿಸ್ತಾನ ದೇಶಕ್ಕೆ ಒಂದು ತಿಂಗಳೊಳಗೆ ಭಾರತ ನೀಡಿದ ಎರಡನೇ ಅಂತಹ ರವಾನೆಯಾಗಿದೆ. ಡಿಸೆಂಬರ್ 11 ರಂದು, ಭಾರತವು 1.5 ಟನ್ ಔಷಧಿಯನ್ನು ರವಾನಿಸಿತ್ತು. ಅಫ್ಘಾನಿಸ್ತಾನಕ್ಕೆ ಮಾನವೀಯ ದೃಷ್ಟಿಯಿಂದ ವಸ್ತುಗಳನ್ನು ಪೂರೈಸಲಾಗುತ್ತಿದ್ದು, ಮುಂಬರುವ ದಿನಗಳಲ್ಲಿ ಕಾಬೂಲ್ 5 ಲಕ್ಷ ಡೋಸ್ ಹೆಚ್ಚುವರಿ ಕೋವಿಡ್-19 ಲಸಿಕೆಗಳನ್ನು ಸ್ವೀಕರಿಸಲಿದೆ.
ಭಾರತವು ಫೆಬ್ರವರಿ 2021 ರಲ್ಲಿ ಅಫ್ಘಾನಿಸ್ತಾನಕ್ಕೆ COVID-19 ಲಸಿಕೆಗಳನ್ನು ಪೂರೈಕೆ ಮಾಡಿತ್ತು ಆದರೆ ಆಗಸ್ಟ್‌ನಲ್ಲಿ ತಾಲಿಬಾನ್ ಸ್ಥಾಪನೆಯಾದ ನಂತರ ಭಾರತವು ಈಗ ಇನ್ನುಳಿದ ಲಸಿಕೆಗಳು ಹಾಗೂ ಸಂಪನ್ಮೂಲಗಳನ್ನು ಕಳುಹಿಸುವ ಪ್ರಕ್ರಿಯೆಯನ್ನು ಪುನರಾರಂಭಿಸಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ತಿಳಿಸಿದೆ.