ಇಂಗ್ಲೆಂಡ್ (England) ವಿರುದ್ಧ ನಡೆದ 5ನೇ ಮತ್ತು ಅಂತಿಮ ಟಿ20 ಪಂದ್ಯದಲ್ಲಿ (5th and final T20 match) ಭಾರತ ಅದ್ಭುತ ಗೆಲುವು ಸಾಧಿಸಿದೆ. ಮುಂಬೈನ ವಾಂಖೆಡೆ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಭಾರತ ಉತ್ತಮ ಸ್ಕೋರ್ ಗಳಿಸಿತು. ಅಭಿಷೇಕ್ ಶರ್ಮಾ ಅವರ ಸ್ಪೋಟಕ ಬ್ಯಾಟಿಂಗ್ ನಿಂದ ಭಾರತ 20 ಓವರ್ಗಳಲ್ಲಿ 9 ವಿಕೆಟ್ ನಷ್ಟಕ್ಕೆ 247 ರನ್ ಗಳ ಬೃಹತ್ ಮೊತ್ತವನ್ನು ಮಾಡಿತು.
ಇಂಗ್ಲೆಂಡ್ ತಂಡ 97 ರನ್ ಗಳಿಗೆ ಪೆವಿಲಿಯನ್ ಪಯಣ ಮಾಡಿ ಸರ್ವಪತನಕ್ಕೊಳಗಾದಿತು. ಭಾರತೀಯ ಬೌಲರ್‍ಗಳು ಆಂಗ್ಲರ ಬ್ಯಾಟರ್ಸ್‍ನ್ನು ನಂದಿಸಿದರು. ಫಿಲ್ ಸಾಲ್ಟ್ ಅವರು ಅರ್ಧಶತಕ ಸಿಡಿಸಿದರು.
ಅಂತರಾಷ್ಟ್ರೀಯ ಕ್ರಿಕೆಟಿಗೆ ಮರಳಿದ ಶಮಿ 5ನೇ ಪಂದ್ಯದಲ್ಲಿ ಅದ್ಭುತ ಪ್ರದರ್ಶನ ತೋರಿದರು. ಅವರು 3 ವಿಕೆಟ್ ಗಳಿಸಿದರೆ, ವರುಣ್ ಚಕ್ರವರ್ತಿ, ಶಿವಂ ದುಬೇ, ಅಭಿಷೇಕ್ ಶರ್ಮಾ ತಲಾ 1 ವಿಕೆಟ್ ಪಡೆದರು.
ಅಭಿಷೇಕ್ ಶರ್ಮಾ ತಮ್ಮ ಸ್ಪೋಟಕ ಬ್ಯಾಟಿಂಗ್ ಮೂಲಕ 37 ಎಸೆತಗಳಲ್ಲಿ ಶತಕ ಸಿಡಿಸಿ ದಾಖಲೆ ಬರೆದರು. ಅವರ 54 ಎಸೆತಗಳಲ್ಲಿ 135 ರನ್ ಕಲೆಹಾಕುವ ಮೂಲಕ ಟಿ20ನಲ್ಲಿ ಅತೀ ಹೆಚ್ಚು ರನ್ ಗಳಿಸಿದ ಭಾರತೀಯ ಬ್ಯಾಟರ್ ಆಗಿ ದಾಖಲೆ ಬರೆದರು.
ಅಭಿಷೇಕ್ ಶರ್ಮಾ ತಮ್ಮ ಇನ್ನಿಂಗ್ಸ್‍ನಲ್ಲಿ 13 ಸಿಕ್ಸರ್‍ಗಳನ್ನು ಸಿಡಿಸಿ ಟಿ20 ಪಂದ್ಯದಲ್ಲಿ ಅತೀ ಹೆಚ್ಚು ಸಿಕ್ಸರ್ ಗಳಿಸಿದ ಭಾರತೀಯ ಬ್ಯಾಟರ್ ಎಂಬ ದಾಖಲೆ ಬರೆದರು.
ಭಾರತ 150 ರನ್ ಗಳಿಂದ ಗೆಲುವು ಸಾಧಿಸಿ, ಇಂಗ್ಲೆಂಡ್ ವಿರುದ್ಧ 13 ವರ್ಷಗಳ ಹಳೆಯ ಸೇಡನ್ನು ತೀರಿಸಿಕೊಂಡಿತು. 2012ರಲ್ಲಿ ಇಂಗ್ಲೆಂಡ್ ಭಾರತ ವಿರುದ್ಧ ವಾಂಖೆಡೆ ಮೈದಾನದಲ್ಲಿ ಗೆಲುವು ಸಾಧಿಸಿತ್ತು.