New Delhi: ತಂತ್ರಜ್ಞಾನ ಮತ್ತು ತಯಾರಿಕಾ ಕ್ಷೇತ್ರದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ (P M Narendra Modi) ಹೊಂದಿರುವ ನಿಲುವನ್ನು ಭಾರ್ತಿ ಏರ್ಟೆಲ್ ಮುಖ್ಯಸ್ಥ ಸುನೀಲ್ ಮಿಟ್ಟಲ್ (CEO Sunil Mittal) ಶ್ಲಾಘಿಸಿದರು.
ನಿನ್ನೆ ಮಂಗಳವಾರ ಇಲ್ಲಿ ನಡೆದ ITU ವರ್ಲ್ಡ್ ಟೆಲಿಕಮ್ಯೂನಿಕೇಶನ್ ಸ್ಟಾಂಡರ್ಡೈಸೇಶನ್ (ITU World Telecommunication Standardization) ಸಭೆಯಲ್ಲಿ ಮಾತನಾಡಿದ ಸುನೀಲ್ ಭಾರ್ತಿ ಮಿಟ್ಟಲ್, ಶಕ್ತಿಶಾಲಿ ಭಾರತದ ನಿರ್ಮಾಣದಲ್ಲಿ ತಮ್ಮ ಸಂಸ್ಥೆಯ ಪಾತ್ರವೂ ಇರುತ್ತದೆ ಎಂದು ಭರವಸೆ ನೀಡಿದರು. ಪ್ರಧಾನಿ ನರೇಂದ್ರ ಮೋದಿ ಹಾಗೂ ಹಲವು ಉದ್ಯಮಿಗಳು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಎಂಟು ವರ್ಷದ ಹಿಂದೆ 2ಜಿ ವೇಗದಲ್ಲಿ ತೆವಳುತ್ತಿದ್ದ ಭಾರತ ಈಗ 5ಜಿ ಹೆದ್ದಾರಿಯಲ್ಲಿ ಡಿಜಿಟಲ್ ಸೂಪರ್ಪವರ್ ಆಗುತ್ತಿದೆ. 6ಜಿಯಲ್ಲಿ ಭಾರತದ ಸಾಧನೆ ಇನ್ನೂ ಅಮೋಘವಾಗಿರಲಿದೆ ಎಂದು ಪ್ರಧಾನಿಗಳಿಗೆ ಭರವಸೆ ನೀಡುತ್ತೇನೆ ಎಂದು ಮುಕೇಶ್ ಅಂಬಾನಿ ಅವರ ಹಿರಿಯ ಮಗನಾದ ಆಕಾಶ್ ಅಂಬಾನಿ ಹೇಳಿದರು.
ರಾಷ್ಟ್ರ ರಾಜಧಾನಿಯ ಭಾರತ್ ಮಂಡಪಂನಲ್ಲಿ ನಡೆಯುತ್ತಿರುವ ಇಂಡಿಯಾ ಮೊಬೈಲ್ ಸಮ್ಮೇಳನದಲ್ಲಿ 190ಕ್ಕೂ ಹೆಚ್ಚು ದೇಶಗಳಿಂದ ತಜ್ಞರು, ನೀತಿ ರೂಪಕರು, ಉದ್ಯಮ ಮುಖಂಡರು ಪಾಲ್ಗೊಂಡಿದ್ದರು.