ಭಾರತವು 2036ರ ಒಲಿಂಪಿಕ್ (Olympics) ಕ್ರೀಡಾಕೂಟವನ್ನು ಆಯೋಜಿಸಲು ಸಂಪೂರ್ಣ ಸಿದ್ಧವಾಗಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಘೋಷಿಸಿದ್ದಾರೆ. ಉತ್ತರಾಖಂಡದಲ್ಲಿ ನಡೆದ ರಾಷ್ಟ್ರೀಯ ಕ್ರೀಡಾಕೂಟದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
“ಭಾರತದ ಕ್ರೀಡಾ ಭವಿಷ್ಯ ಅತ್ಯಂತ ಪ್ರಭಾವಶಾಲಿ. ನಮ್ಮ ದೇಶ ಒಲಿಂಪಿಕ್ಸ್ ಆಯೋಜನೆಗೆ ತಯಾರಾಗಿದೆ” ಎಂದು ಅಮಿತ್ ಶಾ ಹೇಳಿಕೆ ನೀಡಿದ್ದಾರೆ.
ರಾಜ್ಯದ ಮುಖ್ಯಮಂತ್ರಿಗಳಾದ ಪುಷ್ಕರ್ ಸಿಂಗ್ ಧಾಮಿ ಅವರ ಪ್ರಯತ್ನದಿಂದಾಗಿ, ಈ ಪ್ರದೇಶ ‘ದೇವ ಭೂಮಿ’ಯಿಂದ ‘ಕ್ರೀಡಾ ಭೂಮಿ’ಯಾಗಿ ರೂಪಾಂತರಗೊಂಡಿದೆ. ರಾಜ್ಯದ ಶ್ರೇಯಾಂಕ 21ರಿಂದ 7ನೇ ಸ್ಥಾನಕ್ಕೆ ಏರಿದ್ದು, ಇದು ಪ್ರಮುಖ ಸಾಧನೆ ಎಂದು ಅವರು ಪ್ರಶಂಸೆ ವ್ಯಕ್ತಪಡಿಸಿದರು.
ರಾಜ್ಯವು ಕ್ರೀಡಾಪಟುಗಳಿಗೆ ಸೂಕ್ತ ಸೌಲಭ್ಯ ಒದಗಿಸಲು ಬದ್ಧವಾಗಿದೆ. ಈ ಬೆಳವಣಿಗೆ ಭಾರತವನ್ನು ವಿಶ್ವದ ಪ್ರಮುಖ ಕ್ರೀಡಾ ಕೇಂದ್ರವಾಗಿ ನಿರ್ಮಿಸಲು ಸಹಾಯ ಮಾಡಲಿದೆ ಎಂದು ಕೇಂದ್ರ ಕ್ರೀಡಾ ಸಚಿವ ಮಾಂಡವಿಯಾ ಹೇಳಿದ್ದಾರೆ.