ಪಹಲ್ಗಾಮ್ ನಲ್ಲಿ ನಡೆದ ಭಯೋತ್ಪಾದಕ ದಾಳಿಯ ನಂತರ, ಭಾರತ ಪಾಕಿಸ್ತಾನದ (Pakistan) ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ತೀರ್ಮಾನಿಸಿದೆ. ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ನಡೆದ ಭದ್ರತಾ ಸಂಬಂಧಿತ ಉನ್ನತ ಮಟ್ಟದ ಸಭೆಯಲ್ಲಿ ಈ ನಿರ್ಧಾರಗಳು ಕೈಗೊಳ್ಳಲಾಯಿತು.
ಭಾರತದ 5 ಪ್ರಮುಖ ನಿರ್ಧಾರಗಳು
- ಭಾರತ ಮತ್ತು ಪಾಕಿಸ್ತಾನ ನಡುವಿನ ಅಟ್ಟಾರಿ ಗಡಿ ಚೆಕ್ ಪೋಸ್ಟ್ ಅನ್ನು ತಾತ್ಕಾಲಿಕವಾಗಿ ಮುಚ್ಚಲು ತೀರ್ಮಾನಿಸಲಾಗಿದೆ. ಇದು ಗಡಿ ಸಂಪರ್ಕವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸುತ್ತದೆ.
- ಪಾಕಿಸ್ತಾನದಲ್ಲಿರುವ ಭಾರತೀಯ ರಾಯಭಾರಿ ಕಚೇರಿಯನ್ನು ಮುಚ್ಚುವ ನಿರ್ಧಾರವೂ ತೆಗೆದುಕೊಳ್ಳಲಾಗಿದೆ.
- ಭಾರತವು ಸಿಂಧೂ ನದಿಯ ನೀರಿನ ಹಂಚಿಕೆ ಕುರಿತ ಪಾಕಿಸ್ತಾನ ಜತೆಗಿನ ಒಪ್ಪಂದವನ್ನು ಅಮಾನತು ಮಾಡಿದೆ. ಇದರಿಂದ ಪಾಕಿಸ್ತಾನಕ್ಕೆ ನೀರಿನ ಸರಬರಾಜಿನಲ್ಲಿ ಬದಲಾವಣೆ ಆಗುವ ಸಾಧ್ಯತೆ ಇದೆ.
- ಭಾರತದಲ್ಲಿರುವ ಎಲ್ಲಾ ಪಾಕಿಸ್ತಾನಿ ರಾಜತಾಂತ್ರಿಕರು 48 ಗಂಟೆಗಳ ಒಳಗೆ ದೇಶ ತೊರೆಯಬೇಕು ಎಂಬ ಆದೇಶ ಜಾರಿಗೆ ಬಂದಿದೆ.
- ಪಾಕಿಸ್ತಾನಿ ನಾಗರಿಕರಿಗೆ ಹೊಸ ಭಾರತೀಯ ವೀಸಾಗಳನ್ನು ನೀಡುವುದಿಲ್ಲ. ಈಗಾಗಲೇ ನೀಡಲಾದ ವೀಸಾಗಳನ್ನೂ ರದ್ದುಗೊಳಿಸಲಾಗಿದೆ.
ಹೆಚ್ಚುವರಿ ಕ್ರಮಗಳು
ಪಾಕಿಸ್ತಾನ ಹೈಕಮಿಷನ್ ನಲ್ಲಿ ಕೆಲಸಮಾಡುತ್ತಿರುವ ರಕ್ಷಣಾ, ನೌಕಾ ಮತ್ತು ವಾಯುಪಡೆಯ ಸಲಹೆಗಾರರನ್ನು “ಪರ್ಸನಾ ನಾನ್ ಗ್ರಾಟಾ” ಎಂದು ಘೋಷಿಸಲಾಗಿದೆ. ಅವರು ಒಂದು ವಾರದೊಳಗೆ ಭಾರತವನ್ನು ತೊರೆಯಬೇಕಾಗಿದೆ.
ಈ ಎಲ್ಲ ಕ್ರಮಗಳು ಪಾಕಿಸ್ತಾನ ವಿರುದ್ಧ ಭಾರತ ತಾಳ್ಮೆ ಕಳೆದುಕೊಂಡಿರುವ ಸಂಕೇತಗಳಾಗಿವೆ.