ಟೋಕಿಯೋ: ಜಪಾನ್ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರು, ಭಾರತದ ಆರ್ಥಿಕ ಬೆಳವಣಿಗೆಯನ್ನು ಉಲ್ಲೇಖಿಸಿ ಪ್ರಮುಖ ಸಂದೇಶ ನೀಡಿದರು.
ಬಂಡವಾಳ ಬೆಳವಣಿಗೆ: ಭಾರತದಲ್ಲಿ ಬಂಡವಾಳ ಕೇವಲ ಬೆಳೆಯುತ್ತಿಲ್ಲ, ಅದು ದ್ವಿಗುಣಗೊಳ್ಳುತ್ತಿದೆ. ರಾಜಕೀಯ ಸ್ಥಿರತೆ ಮತ್ತು ಪಾರದರ್ಶಕತೆಯೇ ಇದಕ್ಕೆ ಕಾರಣ ಎಂದು ಹೇಳಿದರು.
ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆ: ಕಳೆದ 11 ವರ್ಷಗಳಲ್ಲಿ ಭಾರತ ಹಲವು ಸುಧಾರಣೆಗಳ ಮೂಲಕ ವಿಶ್ವದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಯಾಗಿದೆ. ಶೀಘ್ರದಲ್ಲೇ ಜಗತ್ತಿನ ಮೂರನೇ ಅತಿದೊಡ್ಡ ಆರ್ಥಿಕತೆಯಾಗಲಿದೆ.
ಮೂಲಸೌಕರ್ಯ ಅಭಿವೃದ್ಧಿ: ಬಂದರು ಸಾಮರ್ಥ್ಯ ದುಪ್ಪಟ್ಟಾಗಿದೆ. ಜಪಾನ್ ಸಹಕಾರದೊಂದಿಗೆ ಮುಂಬೈ–ಅಹಮದಾಬಾದ್ ವೇಗದ ರೈಲು ಯೋಜನೆ ನಡೆಯುತ್ತಿದೆ.
ತಂತ್ರಜ್ಞಾನ ಸಹಕಾರ: ಜಪಾನ್ ತಂತ್ರಜ್ಞಾನ ಮತ್ತು ಭಾರತೀಯ ಪ್ರತಿಭೆ ಒಟ್ಟಾಗಿ ತಂತ್ರಜ್ಞಾನ ಕ್ರಾಂತಿಯನ್ನು ಮುನ್ನಡೆಸಬಹುದು ಎಂದು ಮೋದಿ ಹೇಳಿದರು.
ಶುದ್ದ ಶಕ್ತಿ ಗುರಿ: ಭಾರತ 2047ರೊಳಗೆ 100 ಗಿಗಾವ್ಯಾಟ್ ಪರಮಾಣು ಶಕ್ತಿ ಉತ್ಪಾದನೆ ಗುರಿ ಹೊಂದಿದೆ. ಭಾರತ-ಜಪಾನ್ ಶುದ್ಧ ಶಕ್ತಿಯ ಸಹಕಾರ ಹಸಿರು ಭವಿಷ್ಯಕ್ಕೆ ದಾರಿ ಮಾಡಲಿದೆ.
ಸುಧಾರಣೆಗಳು: ಸರಳ ಆದಾಯ ತೆರಿಗೆ, ಡಿಜಿಟಲ್ ಅನುಮೋದನೆ, 45 ಸಾವಿರ ಅನುಸರಣೆಗಳ ಕಡಿತ, ರಕ್ಷಣಾ–ಬಾಹ್ಯಾಕಾಶ ವಲಯ ಖಾಸಗೀಕರಣ – ಇವುಗಳ ಮೂಲಕ ಭಾರತ ಹೂಡಿಕೆಗೆ ಆಕರ್ಷಕ ತಾಣವಾಗಿದೆ.
ಭಾರತ-ಜಪಾನ್ ಸಹಭಾಗಿತ್ವ: ಇದು ಕಾರ್ಯತಂತ್ರ ಮತ್ತು ನೈಪುಣ್ಯದ ಶಕ್ತಿಯಾಗಿದೆ. ಏಷ್ಯಾದ ಶತಮಾನವನ್ನು ಸ್ಥಿರತೆ, ಬೆಳವಣಿಗೆ ಮತ್ತು ಸಮೃದ್ಧಿಯಿಂದ ರೂಪಿಸೋಣ ಎಂದು ಮೋದಿ ಕರೆ ನೀಡಿದರು.