ಸ್ವಿಚ್ ಮೊಬಿಲಿಟಿ ಲಿಮಿಟೆಡ್, (Switch Mobility Limited) ಅಶೋಕ್ ಲೇಲ್ಯಾಂಡ್‌ನ (Ashok Leyland) ಅಂಗಸಂಸ್ಥೆ ಮತ್ತು ಹಿಂದೂಜಾ ಗ್ರೂಪ್‌ನ (Hinduja Group) ಭಾಗವಾಗಿ, ತನ್ನ ಹೊಸ ಎಲೆಕ್ಟ್ರಿಕ್ ಬಸ್ ಪ್ಲಾಟ್ ಫಾರ್ಮ್ “ಸ್ವಿಚ್ ಇಐವಿ 12” (Switch EIV 12) ಅನ್ನು ಪರಿಚಯಿಸಿದೆ.
ಇದು ಚಾಸಿಸ್-ಮೌಂಟೆಡ್ ಬ್ಯಾಟರಿಗಳೊಂದಿಗೆ ಬರುವ ಭಾರತದ ಮೊದಲ ಲೋ-ಫ್ಲೋರ್ ಸಿಟಿ ಬಸ್ ಆಗಿದ್ದು, 400+ kWh ಬ್ಯಾಟರಿ ಸಾಮರ್ಥ್ಯವನ್ನು ಹೊಂದಿದೆ. 39 ಪ್ರಯಾಣಿಕ ಆಸನಗಳೊಂದಿಗೆ ಬರುವ ಈ ಬಸ್, ನಿರ್ವಾಹಕರಿಗೆ ಹೆಚ್ಚಿನ ಆದಾಯವನ್ನು ತರಲು ಸಹಾಯ ಮಾಡಲಿದೆ.
ಈ ಬಸ್ ಅನ್ನು ಭಾರತದ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವ ನಿತಿನ್ ಗಡ್ಕರಿ, ಹಿಂದೂಜಾ ಗ್ರೂಪ್‌ನ ಅಧ್ಯಕ್ಷ ಅಶೋಕ್ ಪಿ. ಹಿಂದೂಜಾ ಮತ್ತು ಉದ್ಯಮದ ಪ್ರಮುಖರ ಜತೆಗೆ ಬಿಡುಗಡೆ ಮಾಡಲಾಯಿತು.
ಹೊಸ ಬಸ್ ಪ್ಲಾಟ್‌ಫಾರ್ಮ್ ಸ್ಥಳೀಯವಾಗಿ ವಿನ್ಯಾಸಗೊಳಿಸಿ, ಅಭಿವೃದ್ಧಿಪಡಿಸಲಾಗಿದೆ. ಇದು ಪರ್ಫಾಮೆನ್ಸ್, ಸುರಕ್ಷತೆ, ವಿಶ್ವಾಸಾರ್ಹತೆ ಮತ್ತು ಸೌಕರ್ಯಗಳಲ್ಲಿ ಜಾಗತಿಕ ಮಟ್ಟವನ್ನು ಹೊತ್ತಿದೆ.
ವಿಕಲಚೇತನ ಪ್ರಯಾಣಿಕರಿಗೆ ಆಟೋಮ್ಯಾಟಿಕ್ ವೀಲ್‌ಚೇರ್ ರಾಂಪ್ ಮತ್ತು ಮೀಸಲಾದ ಸ್ಥಳಗಳನ್ನು ಒದಗಿಸಲಾಗಿದೆ. ಬಸ್‌ನಲ್ಲಿ 5 ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದ್ದು, ಯಾವುದೇ ಬ್ಲೈಂಡ್ ಸ್ಪಾಟ್‌ಗಳು ಇಲ್ಲ.
ಮಹಿಳೆಯರಿಗಾಗಿ 5 ಮೀಸಲಾದ ಆಸನಗಳು ಕೂಡ ಇವೆ. ಬಸ್‌ನ ಗಾಜಿನ ಭಾಗವು ಬಹಳ ವಿಸ್ತಾರವಾಗಿದೆ, ಇದು ಉತ್ತಮ ಗೋಚರತೆ ಮತ್ತು ಸುರಕ್ಷತೆಯನ್ನು ನೀಡುತ್ತದೆ.
“ಸ್ವಿಚ್ ಐಒನ್” ಎಂಬ ಟೆಲಿಮ್ಯಾಟಿಕ್ಸ್ ಸಿಸ್ಟಮ್, ರಿಯಲ್ ಟೈಮ್ ವೆಹಿಕಲ್ ಹೆಲ್ತ್ ಸೂಪರ್ವಿಷನ್, ITMS ಮತ್ತು ಫ್ಲೀಟ್ ನಿರ್ವಹಣೆಯನ್ನು ನೀಡುತ್ತದೆ. ಈ ಬಸ್ ಹಿಂಬದಿಯ ಡ್ಯುಯಲ್-ಗನ್ ಚಾರ್ಜಿಂಗ್ ಇಂಟರ್ಫೇಸ್‌ನ್ನು ಹೊಂದಿದ್ದು, ತ್ವರಿತ ರೀಚಾರ್ಜಿಂಗ್ ಸಪೋರ್ಟ್‌ನ್ನು ಒದಗಿಸುತ್ತದೆ.
ಸ್ವಿಚ್ E1 ಬಸ್, ಯುರೋಪಿಯನ್ ಮಾರುಕಟ್ಟೆಗೆ ವಿನ್ಯಾಸಗೊಳಿಸಲಾದ ಹಗುರವಾದ ಮೊನೊಕಾಕ್ ನಿರ್ಮಾಣದಿಂದ ಬಂದಿದೆ. ಇದರಲ್ಲಿ ಫ್ಲಾಟ್ ಗ್ಯಾಂಗ್ವೇ ವಿನ್ಯಾಸ ಮತ್ತು ಟ್ರಿಪಲ್-ಡೋರ್ ಕಾನ್ಫಿಗರೇಶನ್ ಹೊಂದಿದೆ, ಇದು ಪ್ರಯಾಣಿಕರಿಗೆ ಸುಲಭವಾಗಿ ಹತ್ತಲು ಮತ್ತು ಇಳಿಯಲು ಸಹಾಯ ಮಾಡುತ್ತದೆ.
ಹಿಂದೂಜಾ ಗ್ರೂಪ್‌ನ ಅಧ್ಯಕ್ಷ ಅಶೋಕ್ ಪಿ. ಹಿಂದೂಜಾ, “ಈ ಬಸ್‌ಗಳು ಪ್ರಧಾನ ಮಂತ್ರಿಯ ಮೇಕ್ ಇನ್ ಇಂಡಿಯಾ ದೃಷ್ಟಿಯೊಂದಿಗೆ ಸಮನ್ವಯವಾಗಿದೆ. ಇದು ಭಾರತದಲ್ಲಿ ಮತ್ತು ಭಾರತದಿಂದ ಪ್ರಪಂಚಕ್ಕೆ ತಯಾರಿಸಲ್ಪಟ್ಟಿದೆ.” ಎಂದು ಹೇಳಿದರು.
ಸ್ವಿಚ್ ಮೊಬಿಲಿಟಿಯ CEO ಮಹೇಶ್ ಬಾಬು, “ನಾವು ಭಾರತ ಮತ್ತು ಯುರೋಪ್‌ನಲ್ಲಿ ಎರಡು ಹೊಸ ಉತ್ಪನ್ನಗಳನ್ನು ಅನಾವರಣಗೊಳಿಸಲು ಉತ್ಸುಕರಾಗಿದ್ದೇವೆ. ಇವು ಅತ್ಯಾಧುನಿಕ ಇವಿ ತಂತ್ರಜ್ಞಾನವನ್ನು ಬಳಸಿಕೊಂಡು ಶ್ರೇಷ್ಠ ದಕ್ಷತೆ, ಸುರಕ್ಷತೆ ಮತ್ತು ಪ್ರಯಾಣಿಕರ ಸೌಕರ್ಯವನ್ನು ಒದಗಿಸುತ್ತವೆ” ಎಂದು ಹೇಳಿದರು.