back to top
28.2 C
Bengaluru
Saturday, August 30, 2025
HomeBusinessSolar Power Generation ಯಲ್ಲಿ ಜಪಾನನ್ನು ಹಿಂದಿಕ್ಕಿದ ಭಾರತ: Minister Pralhad Joshi

Solar Power Generation ಯಲ್ಲಿ ಜಪಾನನ್ನು ಹಿಂದಿಕ್ಕಿದ ಭಾರತ: Minister Pralhad Joshi

- Advertisement -
- Advertisement -

ಭಾರತವು ಸೌರಶಕ್ತಿ ಉತ್ಪಾದನೆಯಲ್ಲಿ ಜಪಾನ್ ದೇಶವನ್ನು ಮೀರಿದೆಯೆಂದು ಕೇಂದ್ರ ನವೀಕರಿಸಬಹುದಾದ ಇಂಧನ ಸಚಿವ ಪ್ರಲ್ಹಾದ್ ಜೋಶಿ ತಿಳಿಸಿದ್ದಾರೆ.

ಭಾರತದ ಸಾಧನೆ: ಜಪಾನ್ 96,459 GWh ವಿದ್ಯುತ್ ಉತ್ಪಾದನೆ ಮಾಡುತ್ತಿದ್ದರೆ, ಭಾರತ ಈಗ 1,08,494 GWh ವಿದ್ಯುತ್ ಉತ್ಪಾದಿಸಿ ಮೂರನೇ ಅತಿದೊಡ್ಡ ಸೌರಶಕ್ತಿ ಉತ್ಪಾದಕ ರಾಷ್ಟ್ರವಾಗಿದೆ. ಚೀನಾ ಮತ್ತು ಅಮೆರಿಕದ ನಂತರದ ಸ್ಥಾನದಲ್ಲಿ ಭಾರತ ಉನ್ನತ ಸ್ಥಾನದಲ್ಲಿದೆ.

ಈ ಸಾಧನೆಯ ಪಟದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ದೃಷ್ಟಿಕೋಣ, ಮಾರ್ಗದರ್ಶನ ಹಾಗೂ ಪ್ರೋತ್ಸಾಹ ಮಹತ್ವದ್ದಾಗಿದ್ದು, ಭಾರತದ ಶುದ್ಧ ಇಂಧನ ಕ್ರಾಂತಿಗೆ ಬಲ ನೀಡಿದೆ.

ವಿಶ್ವ ಮಟ್ಟದ ಅಂಕಿಅಂಶಗಳು

  • ಅಂತಾರಾಷ್ಟ್ರೀಯ ಇಂಧನ ಸಂಸ್ಥೆಯ ಪ್ರಕಾರ,
  • ಚೀನಾ 2023ರಲ್ಲಿ 260 GW ಸೌರಶಕ್ತಿ ಸ್ಥಾಪಿಸಿದೆ.
  • ಅಮೆರಿಕ 2023ರಲ್ಲಿ 32 GW ಸಾಧಿಸಿ ಶೇ.70ರಷ್ಟು ಬೆಳವಣಿಗೆಯಾಗಿದೆ.
  • ಭಾರತ 2023ರಲ್ಲಿ 12 GW ಸ್ಥಾಪಿಸಿದೆ, 2024ರಲ್ಲಿ ಈ ಸಂಖ್ಯೆ ಹೆಚ್ಚಾಗಲಿದೆ.
  • ಬ್ರೆಜಿಲ್ 15 GW ಸ್ಥಾಪಿಸಿ ಶೇ.30ರಷ್ಟು ವೃದ್ಧಿಯಾಗಿದೆ.

ಭಾರತ ಪ್ಯಾರಿಸ್ ಒಪ್ಪಂದದ ಗುರಿಗಳನ್ನು ನಿಗದಿತ ಸಮಯಕ್ಕಿಂತ 5 ವರ್ಷ ಮುಂಚೆ ಸಾಧಿಸಿದ್ದು, ಈಗಾಗಲೇ ತನ್ನ ವಿದ್ಯುತ್ ಸಾಮರ್ಥ್ಯದ ಶೇ.50ರಷ್ಟು ಪಳೆಯುಳಿಕೆಯೇತರ ಮೂಲಗಳಿಂದ ಪಡೆಯುತ್ತಿದೆ.

ಭವಿಷ್ಯದ ಗುರಿಗಳು

  • 2030ರ ವೇಳೆಗೆ 500 GW ಪಳೆಯುಳಿಕೆಯೇತರ ಇಂಧನ ಸಾಮರ್ಥ್ಯ.
  • ಶೇ.50ರಷ್ಟು ವಿದ್ಯುತ್ ಅಗತ್ಯ ನವೀಕರಿಸಬಹುದಾದ ಮೂಲಗಳಿಂದ ಪೂರೈಕೆ.
  • 1 ಶತಕೋಟಿ ಟನ್ ಇಂಗಾಲದ ಹೊರಸೂಸುವಿಕೆ ಕಡಿತ.
  • 2030ರ ವೇಳೆಗೆ ಶೇ.45ರಷ್ಟು ಇಂಧನ ಉಳಿತಾಯ ಮತ್ತು 2070ರ ವೇಳೆಗೆ “ನಿವ್ವಳ ಶೂನ್ಯ” ಗುರಿ.

ಭಾರತ ಶುದ್ಧ ಇಂಧನದಲ್ಲಿ ಜಾಗತಿಕ ನಾಯಕತ್ವದತ್ತ ದಿಟ್ಟ ಹೆಜ್ಜೆ ಹಾಕುತ್ತಿದೆ.

For Daily Updates WhatsApp ‘HI’ to 7406303366

- Advertisement -
Latest news
- Advertisement -
Related news
- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!

You cannot copy content of this page