ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತೊಮ್ಮೆ ಭಾರತ–ಪಾಕಿಸ್ತಾನ ಯುದ್ಧ ಮಧ್ಯಸ್ಥಿಕೆಯ (India-Pakistan conflict) ಕುರಿತು ಹೇಳಿಕೆ ನೀಡಿದ್ದಾರೆ. ನ್ಯೂಯಾರ್ಕ್‌ನಲ್ಲಿ ಮಾತನಾಡಿದ ಅವರು, “ಭಾರತ ಮತ್ತು ಪಾಕಿಸ್ತಾನದ ನಡುವಿನ ಸೇನಾ ಸಂಘರ್ಷವನ್ನು ಮಾತುಕತೆ ಮೂಲಕ ಕೊನೆಗೊಳಿಸಲು ನಾವು ಸಹಾಯ ಮಾಡಿದೆವು” ಎಂದು ತಿಳಿಸಿದ್ದಾರೆ.
ಟ್ರಂಪ್ ಪ್ರಕಾರ, ಯುದ್ಧದ ವೇಳೆ 6 ಜೆಟ್‌ಗಳನ್ನು ಹೊಡೆದುರುಳಿಸಲಾಯಿತು. ಆದರೆ, ಯಾವ ದೇಶದ ಜೆಟ್‌ಗಳು ನಷ್ಟವಾದವು ಎಂಬುದನ್ನು ಅವರು ಸ್ಪಷ್ಟಪಡಿಸಲಿಲ್ಲ. ಕಳೆದ ತಿಂಗಳು ಇದೇ ವಿಷಯ ಕುರಿತು ಮಾತನಾಡಿದ್ದಾಗ, ಅವರು 5 ಜೆಟ್‌ಗಳು ಪತನಗೊಂಡವು ಎಂದು ಹೇಳಿದ್ದರು.
ಟ್ರಂಪ್ ಹೇಳಿಕೆಯನ್ನು ಭಾರತ ಈಗಾಗಲೇ ತಳ್ಳಿ ಹಾಕಿದೆ. ಯಾವುದೇ ದೇಶದ ಮಧ್ಯಸ್ಥಿಕೆ ಇಲ್ಲದೆ, ಎರಡೂ ದೇಶಗಳ ಸೇನಾ ಮುಖ್ಯಸ್ಥರ ಮಾತುಕತೆಯಿಂದಲೇ ಕದನ ವಿರಾಮ ಘೋಷಣೆ ಮಾಡಲಾಗಿತ್ತು ಎಂದು ಭಾರತ ತಿಳಿಸಿದೆ.
ಅಜೆರ್ಬೈಜಾನ್ ಅಧ್ಯಕ್ಷ ಮತ್ತು ಅರ್ಮೇನಿಯಾ ಪ್ರಧಾನಿ ಸಮ್ಮುಖದಲ್ಲಿ ಶಾಂತಿ ಒಪ್ಪಂದಕ್ಕೆ ಸಹಿ ಹಾಕಿದ ನಂತರ ಟ್ರಂಪ್, “ಜಗತ್ತಿನಲ್ಲಿ ಶಾಂತಿ ಮತ್ತು ಸ್ಥಿರತೆಯನ್ನು ತರುವುದು ನನ್ನ ಆಶಯ” ಎಂದು ಹೇಳಿದರು. ಭಾರತ–ಪಾಕಿಸ್ತಾನದ ಯಶಸ್ವಿ ಮಾತುಕತೆ ಬಳಿಕ, ಇಂದು ಅಜೆರ್ಬೈಜಾನ್–ಅರ್ಮೇನಿಯಾ ನಡುವೆ ಒಪ್ಪಂದ ಸಾಗಿದೆ ಎಂದು ತಿಳಿಸಿದರು.
ಟ್ರಂಪ್ ಪ್ರಕಾರ, ವ್ಯಾಪಾರದ ಹೊರತಾಗಿ ಯಾವುದೇ ಕಾರಣವಿಲ್ಲದೆ ಭಾರತ ಮತ್ತು ಪಾಕಿಸ್ತಾನ ಸಂಘರ್ಷ ನಿಲ್ಲಿಸಲಾಯಿತು. “ಜಗತ್ತಿಗೆ ತಮನ್ನು ಪ್ರದರ್ಶಿಸಲು ಪ್ರಯತ್ನಿಸುತ್ತಿರುವ ದೇಶದೊಂದಿಗೆ ನಾನು ವ್ಯಾಪಾರ ಮಾಡುವುದಿಲ್ಲ” ಎಂದು ಅವರು ತಿಳಿಸಿದರು.
ಕಾರ್ಯಕ್ರಮದಲ್ಲಿ ಎರಡು ಬಾರಿ ಈ ವಿಚಾರ ಪ್ರಸ್ತಾಪಿಸಿದ ಟ್ರಂಪ್, ಭಾರತ–ಪಾಕಿಸ್ತಾನ ಯುದ್ಧದ ಕುರಿತು ಈಗಾಗಲೇ ಸುಮಾರು 35 ಬಾರಿ ಹೇಳಿಕೆ ನೀಡಿದ್ದಾರೆ.