back to top
20.2 C
Bengaluru
Saturday, July 19, 2025
HomeNewsIndia-Pakistan Tension ತಾವೇ ಪರಿಹಾರ ಕಂಡುಕೊಳ್ಳುತ್ತಾರೆ - ಟ್ರಂಪ್

India-Pakistan Tension ತಾವೇ ಪರಿಹಾರ ಕಂಡುಕೊಳ್ಳುತ್ತಾರೆ – ಟ್ರಂಪ್

- Advertisement -
- Advertisement -

New York: ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ನಲ್ಲಿ ನಡೆದ ಉಗ್ರರ ದಾಳಿಯನ್ನು ಅಮೆರಿಕ ತೀವ್ರವಾಗಿ ಖಂಡಿಸಿದೆ. ದಾಳಿಯ ನಂತರ ಭಾರತಕ್ಕೆ ಬೆಂಬಲ ನೀಡುವುದಾಗಿ ಹೇಳಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, “ಭಾರತ ಹಾಗೂ ಪಾಕಿಸ್ತಾನ ನಡುವೆ ಉದ್ವಿಗ್ನತೆ (India-Pakistan tension) ಬಹುಕಾಲದಿಂದ ಇರುತ್ತಾ ಬಂದಿದೆ. ಈ ಸಮಸ್ಯೆ ಅವರನ್ನು ತಾವು ಒಂದಲ್ಲೊಂದು ರೀತಿಯಲ್ಲಿ ಬಗೆಹರಿಸಿಕೊಳ್ಳುತ್ತಾರೆ” ಎಂದು ಹೇಳಿದ್ದಾರೆ.

ರೋಮ್‌ಗೆ ತೆರಳುವ ಸಂದರ್ಭದಲ್ಲಿ ಟ್ರಂಪ್ ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯಿಸಿ, “ನಾನು ಭಾರತಕ್ಕೂ ಪಾಕಿಸ್ತಾನಕ್ಕೂ ಸಮಾನವಾಗಿ ಹತ್ತಿರವಿದ್ದೇನೆ. ಕಾಶ್ಮೀರ ವಿಚಾರದಲ್ಲಿ ಇವರು ವರ್ಷಗಳಿಂದ ಜಗಳವಾಡುತ್ತಿದ್ದಾರೆ. ಇದು ಮುಂದಿನ 1000 ವರ್ಷಗಳವರೆಗೂ ಮುಂದುವರಿಯಬಹುದು. ಪಹಲ್ಗಾಮ್ ದಾಳಿ ತುಂಬಾ ಭಯಾನಕವಾಗಿತ್ತು” ಎಂದರು.

ಪಹಲ್ಗಾಮ್ ದಾಳಿಯಲ್ಲಿ 26 ಮಂದಿ ಸಾವನ್ನಪ್ಪಿದ ಬಳಿಕ, ಭಾರತ-ಪಾಕಿಸ್ತಾನ ನಡುವಿನ ಉದ್ವಿಗ್ನತೆ ಬಗ್ಗೆ ಮತ್ತು ನಾಯಕರ ಜೊತೆ ಮಾತುಕತೆ ನಡೆಯುತ್ತದೆಯೆಂದು ಮಾಧ್ಯಮಗಳು ಕೇಳಿದಾಗ, “ಇವರ ನಡುವೆ ಗಡಿಯಲ್ಲಿ ವರ್ಷಗಳಿಂದ ಉದ್ವಿಗ್ನತೆ ಇದೆ. ಅವರು ತಾವೇ ಸಮಸ್ಯೆ ಬಗೆಹರಿಸಿಕೊಳ್ಳುತ್ತಾರೆ ಎಂಬ ನಂಬಿಕೆ ನನಗಿದೆ. ಏಕೆಂದರೆ ನನಗೆ ಇಬ್ಬರೂ ನಾಯಕರು ಗೊತ್ತಿದ್ದಾರೆ” ಎಂದರು.

ಪಹಲ್ಗಾಮ್ ನಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಹೆಚ್ಚಿನವರು ಪ್ರವಾಸಿಗರಾಗಿದ್ದರು. 2019ರ ಪುಲ್ವಾಮಾ ದಾಳಿಯ ನಂತರದ ಇದು ಅತ್ಯಂತ ಭೀಕರ ದಾಳಿ. ಪಾಕಿಸ್ತಾನ ಮೂಲದ ನಿಷೇಧಿತ ಉಗ್ರ ಸಂಘಟನೆಯಾದ ಲಷ್ಕರ್-ಎ-ತೈಬಾ ಸಂಬಂಧಿತ “ರೆಸಿಸ್ಟೆನ್ಸ್ ಫ್ರಂಟ್” ಈ ದಾಳಿಗೆ ಹೊಣೆ ಹೊತ್ತಿದೆ.

ಈ ದಾಳಿಯನ್ನು ವಿಶ್ವಸಂಸ್ಥೆ ಭದ್ರತಾ ಮಂಡಳಿ ತೀವ್ರವಾಗಿ ಖಂಡಿಸಿದೆ. ಭಯೋತ್ಪಾದಕರನ್ನು ನ್ಯಾಯದ ಮುಂದೆ ತರಬೇಕು ಎಂದು ತೀವ್ರವಾಗಿ ಒತ್ತಿ ಹೇಳಿದೆ. ಸಾವನ್ನಪ್ಪಿದವರ ಕುಟುಂಬಗಳಿಗೆ ಸಂತಾಪ ಸೂಚಿಸಿರುವ ವಿಶ್ವಸಂಸ್ಥೆ, ಗಾಯಗೊಂಡವರಿಗೆ ಶೀಘ್ರ ಚೇತರಿಕೆ ಆಗಲಿ ಎಂದು ಹಾರೈಸಿದೆ.

For Daily Updates WhatsApp ‘HI’ to 7406303366

- Advertisement -
Latest news
- Advertisement -
Related news
- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!

You cannot copy content of this page