HomeNewsಮೈದಾನದಲ್ಲಿ ಮತ್ತೆ India-Pakistan ಯುದ್ಧ! ಜುಲೈ 20ರಂದು Edgbaston ನಲ್ಲಿ ಭರ್ಜರಿ ಪಂದ್ಯ

ಮೈದಾನದಲ್ಲಿ ಮತ್ತೆ India-Pakistan ಯುದ್ಧ! ಜುಲೈ 20ರಂದು Edgbaston ನಲ್ಲಿ ಭರ್ಜರಿ ಪಂದ್ಯ

- Advertisement -
- Advertisement -

ಇತ್ತೀಚೆಗೆ ನಡೆದ ಭಯೋತ್ಪಾದಕ ದಾಳಿಗೆ ಪ್ರತಿಯಾಗಿ ‘ಆಪರೇಷನ್ ಸಿಂದೂರ್’ ಮೂಲಕ ಪಾಕಿಸ್ತಾನಕ್ಕೆ ತೀವ್ರ ಪ್ರತ್ಯುತ್ತರ ನೀಡಿದ್ದ ಭಾರತ, ನಂತರ ಕದನ ವಿರಾಮಕ್ಕೆ ಒಪ್ಪಿಗೆ ನೀಡಿತ್ತು. ಆದರೆ ಇದೀಗ ಗಡಿಗೋಡಿಲ್ಲದೆ ಇನ್ನೊಂದು ಯುದ್ಧ ನಡೆಯುತ್ತಿದೆ, ಅದು ಕ್ರಿಕೆಟ್ ಮೈದಾನದಲ್ಲಿ!

ವರ್ಲ್ಡ್ ಚಾಂಪಿಯನ್ಶಿಪ್ ಆಫ್ ಲೆಜೆಂಡ್ಸ್‌ ಎರಡನೇ ಆವೃತ್ತಿಯಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡಗಳು ಮತ್ತೆ ಮುಖಾಮುಖಿಯಾಗಲು ಸಜ್ಜಾಗಿವೆ. ಜುಲೈ 20ರಂದು ಎಡ್ಜ್ಬಾಸ್ಟನ್‌ನಲ್ಲಿ ಭಾರತದ ಮೊದಲ ಪಂದ್ಯ ಪಾಕಿಸ್ತಾನದ ವಿರುದ್ಧ ನಡೆಯಲಿದೆ.

ಈ ಟೂರ್ನಿಯು ನಿವೃತ್ತಿ ಹೊಂದಿದ ದಿಗ್ಗಜ ಕ್ರಿಕೆಟಿಗರಿಗೆ ಮೀಸಲಾಗಿದ್ದು, ಯುವರಾಜ್ ಸಿಂಗ್ ನೇತೃತ್ವದ ಭಾರತ ತಂಡ ಪುಟ ಹಾರಿಸಲು ಸಜ್ಜಾಗಿದೆ. 2024ರ ಮೊದಲ ಆವೃತ್ತಿಯಲ್ಲಿ ಭಾರತ ಪಾಕಿಸ್ತಾನವನ್ನು ಸೋಲಿಸಿ ಕಪ್ ಗೆದ್ದಿತ್ತು.

ಭಾರತ ತಂಡದ ಪಂದ್ಯಗಳ ವಿವರ

  • ಭಾರತ vs ಪಾಕಿಸ್ತಾನ – ಜುಲೈ 20, ಎಡ್ಜ್ಬಾಸ್ಟನ್
  • ಭಾರತ vs ದಕ್ಷಿಣ ಆಫ್ರಿಕಾ – ಜುಲೈ 22, ನಾರ್ಥಾಂಪ್ಟನ್
  • ಭಾರತ vs ಆಸ್ಟ್ರೇಲಿಯಾ – ಜುಲೈ 26, ಹೆಡಿಂಗ್ಲೆ, ಲೀಡ್ಸ್
  • ಭಾರತ vs ಇಂಗ್ಲೆಂಡ್ – ಜುಲೈ 27, ಹೆಡಿಂಗ್ಲೆ, ಲೀಡ್ಸ್
  • ಭಾರತ vs ವೆಸ್ಟ್ ಇಂಡೀಸ್ – ಜುಲೈ 29, ಲೀಸೆಸ್ಟರ್‌ಶೈರ್

ಭಾರತ ಲೆಜೆಂಡ್ಸ್ ತಂಡ: ಯುವರಾಜ್ ಸಿಂಗ್ (ನಾಯಕ), ಸುರೇಶ್ ರೈನಾ, ರಾಬಿನ್ ಉತ್ತಪ್ಪ, ಮೊಹಮ್ಮದ್ ಕೈಫ್, ಇರ್ಫಾನ್ ಪಠಾನ್, ಪಾರ್ಥಿವ್ ಪಟೇಲ್, ಹರ್ಭಜನ್ ಸಿಂಗ್, ಯೂಸುಫ್ ಪಠಾನ್ ಮತ್ತಿತರರು.

ಪಾಕಿಸ್ತಾನ ಲೆಜೆಂಡ್ಸ್ ತಂಡ: ಯೂನಿಸ್ ಖಾನ್ (ನಾಯಕ), ಶಾಹಿದ್ ಅಫ್ರಿದಿ, ಮಿಸ್ಬಾ ಉಲ್ ಹಕ್, ಶೋಯೆಬ್ ಮಲಿಕ್, ಮೊಹಮ್ಮದ್ ಅಮೀರ್, ವಹಾಬ್ ರಿಯಾಜ್ ಮತ್ತಿತರರು.

For Daily Updates WhatsApp ‘HI’ to 7406303366

- Advertisement -
Latest news
- Advertisement -
Related news
- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!