back to top
17.2 C
Bengaluru
Wednesday, January 14, 2026
HomeBusinessಭಾರತದಿಂದ Maldives ಗೆ 50 ಮಿಲಿಯನ್ ಡಾಲರ್ ಆರ್ಥಿಕ ನೆರವು

ಭಾರತದಿಂದ Maldives ಗೆ 50 ಮಿಲಿಯನ್ ಡಾಲರ್ ಆರ್ಥಿಕ ನೆರವು

- Advertisement -
- Advertisement -

MALE (Maldives): ಮಾಲ್ಡೀವ್ಸ್ (Maldives) ಅಧ್ಯಕ್ಷ ಮೊಹಮದ್ ಮುಯಿಜ್ ಭಾರತದೊಂದಿಗೆ ಅಸಹಕಾರ ನೀತಿಯನ್ನು ಅನುಸರಿಸುತ್ತಿದ್ದರೂ ಕೂಡ, ಭಾರತವು ಸಹಾಯ ಹಸ್ತ ಚಾಚಿದ್ದು, ಆ ದೇಶಕ್ಕೆ 50 ಮಿಲಿಯನ್ ಡಾಲರ್‌ಗಳ ಬಡ್ಡಿರಹಿತ ಆರ್ಥಿಕ ನೆರವನ್ನು ನೀಡಿದೆ.

ಮಾಲ್ಡೀವ್ಸ್ ಸರ್ಕಾರದ ವಿನಂತಿಯಂತೆ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ಮೂಲಕ ಆ ಹಣವನ್ನು ಒಂದು ವರ್ಷದ ಅವಧಿಗೆ ನೀಡಲಾಗಿದೆ ಎಂದು ಮಾಲ್ಡೀವ್ಸ್‌ನಲ್ಲಿನ ಭಾರತೀಯ ಹೈಕಮಿಷನ್ ತಿಳಿಸಿದೆ.

ಭಾರತವು 2019ರಿಂದ ತುರ್ತು ಆರ್ಥಿಕ ನೆರವಿನ ರೂಪದಲ್ಲಿ ಮಾಲ್ಡೀವ್ಸ್‌ಗೆ ಸಹಾಯ ಮಾಡುತ್ತಿದೆ. ಈ ಅನುದಾನ ಬಡ್ಡಿರಹಿತವಾಗಿದ್ದು, ದೇಶದ ಅಭಿವೃದ್ಧಿಗೆ ನೆರವಾಗುವ ಉದ್ದೇಶವಿದೆ. ಇದು ಭಾರತ ಮತ್ತು ಮಾಲ್ಡೀವ್ಸ್‌ ನಡುವಿನ ವಿಶೇಷ ಸಂಬಂಧವನ್ನು ಪ್ರತಿಬಿಂಬಿಸುತ್ತದೆ.

ಭಾರತದ ‘ನೆರೆಹೊರೆ ಮೊದಲು’ ಎಂಬ ನೀತಿಯಡಿ, ನೆರೆಯ ದ್ವೀಪ ರಾಷ್ಟ್ರವಾದ ಮಾಲ್ಡೀವ್ಸ್‌‌ಗೆ ಅಗತ್ಯ ಸಮಯದಲ್ಲಿ ಸಹಾಯ ಮಾಡಲಾಗಿದೆ. ಈ ವರ್ಷ ಆರಂಭದಲ್ಲಿ ಮಾಲ್ಡೀವ್ಸ್‌ಗೆ ಅಗತ್ಯ ವಸ್ತುಗಳನ್ನು ರಫ್ತು ಮಾಡುವ ನಿರ್ಧಾರಕ್ಕೂ ಸಹ ಭಾರತ ಮುಂದಾಗಿದೆ.

ಭಾರತದ ಬೆಂಬಲಕ್ಕೆ ಪ್ರತಿಕ್ರಿಯೆ ನೀಡಿದ ಮಾಲ್ಡೀವ್ಸ್‌ನ ವಿದೇಶಾಂಗ ಸಚಿವ ಅಬ್ದುಲ್ಲಾ ಖಲೀಲ್ ಅವರು, ಹಣಕಾಸಿನ ನೆರವಿಗೆ ಧನ್ಯವಾದಗಳನ್ನು ತಿಳಿಸಿದ್ದಾರೆ. ಅವರು ಭಾರತದ ವಿದೇಶಾಂಗ ಸಚಿವ ಡಾ. ಎಸ್. ಜಯಶಂಕರ್ ಅವರಿಗೂ ವಿಶೇಷವಾಗಿ ಕೃತಜ್ಞತೆ ಸಲ್ಲಿಸಿದ್ದಾರೆ.

For Daily Updates WhatsApp ‘HI’ to 7406303366

- Advertisement -
Latest news
- Advertisement -
Related news
- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!

You cannot copy content of this page