New Delhi: ಉಕ್ರೇನ್ ಯುದ್ಧಕ್ಕೆ ಶಾಂತಿಯುತ (Ukraine war) ಪರಿಹಾರ ನೀಡಲು ಭಾರತ ಸಂಪೂರ್ಣವಾಗಿ ಸಹಕರಿಸಲು ಸಿದ್ಧವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
75ನೇ ಹುಟ್ಟುಹಬ್ಬದ ಶುಭಾಶಯಕ್ಕಾಗಿ ಫೋನ್ ಮಾಡಿದ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಗೆ ಧನ್ಯವಾದ ಅರ್ಪಿಸಿದ ಮೋದಿ, ಭಾರತ-ರಷ್ಯಾ ಸ್ನೇಹವನ್ನು ಇನ್ನಷ್ಟು ಬಲಪಡಿಸುವುದಾಗಿ ಹೇಳಿದ್ದಾರೆ.
ಮೋದಿಯವರು ಎಕ್ಸ್ (X) ನಲ್ಲಿ, “ನನ್ನ ಹುಟ್ಟುಹಬ್ಬದಂದು ಫೋನ್ ಮಾಡಿ ಶುಭ ಹಾರೈಸಿದ ಪುಟಿನ್ ಅವರಿಗೆ ಧನ್ಯವಾದಗಳು. ಭಾರತ ಯಾವಾಗಲೂ ಉಕ್ರೇನ್ ಯುದ್ಧದ ಶಾಂತಿಯುತ ಪರಿಹಾರಕ್ಕೆ ಬೆಂಬಲ ನೀಡುತ್ತದೆ” ಎಂದು ಬರೆದಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಇಂದು (ಸೆಪ್ಟೆಂಬರ್ 17) 75 ವರ್ಷ ತುಂಬಿದರು. ಈ ಸಂದರ್ಭದಲ್ಲಿ ಇಸ್ರೇಲ್ ಪ್ರಧಾನಿ ನೆತನ್ಯಾಹು, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಇಟಲಿಯ ಪ್ರಧಾನಿ ಮೆಲೋನಿ ಸೇರಿದಂತೆ ಅನೇಕ ಜಾಗತಿಕ ನಾಯಕರು ಮೋದಿ ಅವರಿಗೆ ಶುಭ ಹಾರೈಸಿದ್ದಾರೆ.