back to top
25.8 C
Bengaluru
Saturday, August 30, 2025
HomeBusinessIndia ವಿದ್ಯುತ್ ಉತ್ಪಾದನೆಯಲ್ಲಿ ಜಾಗತಿಕ ಮೂರನೇ ಸ್ಥಾನಕ್ಕೆ ಏರಿಕೆ

India ವಿದ್ಯುತ್ ಉತ್ಪಾದನೆಯಲ್ಲಿ ಜಾಗತಿಕ ಮೂರನೇ ಸ್ಥಾನಕ್ಕೆ ಏರಿಕೆ

- Advertisement -
- Advertisement -

New Delhi: ಭಾರತದಲ್ಲಿ ಇತ್ತೀಚೆಗೆ ಇಂಧನ ಅಥವಾ ವಿದ್ಯುತ್ ಉತ್ಪಾದನೆ (power generation) ಸಾಮರ್ಥ್ಯ ಬಹಳ ವೇಗವಾಗಿ ಹೆಚ್ಚಾಗಿದೆ. ಅಂತಾರಾಷ್ಟ್ರೀಯ ಇಂಧನ ಸಂಸ್ಥೆ (IEA) ನೀಡಿರುವ ಮಾಹಿತಿ ಪ್ರಕಾರ, ಕಳೆದ 5 ವರ್ಷಗಳಲ್ಲಿ ಈ ಕ್ಷೇತ್ರದಲ್ಲಿ ಹೆಚ್ಚು ಬೆಳವಣಿಗೆ ಸಾಧಿಸಿದ ದೇಶಗಳ ಪೈಕಿ ಭಾರತ ಮೂರನೇ ಸ್ಥಾನದಲ್ಲಿದೆ. ಚೀನಾ ಮತ್ತು ಅಮೆರಿಕ ಮೊದಲ ಎರಡು ಸ್ಥಾನಗಳಲ್ಲಿ ಇವೆ.

ಈ ಅವಧಿಯಲ್ಲಿ ಭಾರತದಲ್ಲಿ ಎಷ್ಟು ಪ್ರಮಾಣದಲ್ಲಿ ವಿದ್ಯುತ್ ಉತ್ಪಾದನಾ ಸಾಮರ್ಥ್ಯ ಹೆಚ್ಚಿದೆ ಎಂಬ ವಿವರಗಳನ್ನು ಐಇಎ ನೀಡಿಲ್ಲ. ಆದರೆ ಭಾರತದಲ್ಲಿ ವಿದ್ಯುತ್ ಬೇಡಿಕೆ ಹೆಚ್ಚುತ್ತಿದೆ ಎಂಬುದನ್ನು ಮಾತ್ರ ಸ್ಪಷ್ಟಪಡಿಸಿದೆ.

ಏಕೆ ವಿದ್ಯುತ್ ಬೇಡಿಕೆ ಹೆಚ್ಚುತ್ತಿದೆ?

  • ನವಿನ ವಾಣಿಜ್ಯ ಕಟ್ಟಡಗಳು ಮತ್ತು ಮನೆಗಳ ಸಂಖ್ಯೆ ಹೆಚ್ಚುತ್ತಿದೆ
  • ಎಸಿ ಹಾಗೂ ಇತರ ವಿದ್ಯುತ್ ಉಪಕರಣಗಳ ಬಳಕೆ ಹೆಚ್ಚಾಗಿದೆ
  • ಕೈಗಾರಿಕೆಗಳಿಂದ ಹೆಚ್ಚಿನ ವಿದ್ಯುತ್ ಬೇಡಿಕೆ ಇದೆ

ಸೌರಶಕ್ತಿಗೆ ಹೆಚ್ಚಿನ ಒತ್ತು: ಹಿಂದೆ ಭಾರತದಲ್ಲಿ ಕಲ್ಲಿದ್ದಲು ಆಧಾರಿತ ವಿದ್ಯುತ್ ಉತ್ಪಾದನೆಯೇ ಹೆಚ್ಚು ಇತ್ತು. ಈಗ ಸರ್ಕಾರ ಸ್ವಚ್ಛ ಮತ್ತು ನವೀಕೃತ ಇಂಧನಕ್ಕೆ (Clean Energy) ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಿದೆ. ಇದರಲ್ಲಿ ಸೌರಶಕ್ತಿ ಮುಖ್ಯವಾಗಿದೆ. ಕಳೆದ ಐದು ವರ್ಷಗಳಲ್ಲಿ ಭಾರತದಲ್ಲಿ ಇಂಧನ ಹೂಡಿಕೆಯಲ್ಲಿ ಅರ್ಧಕ್ಕಿಂತ ಹೆಚ್ಚು ಹಣ ಸೌರಶಕ್ತಿಗೆ ಹೋಗಿದೆ. 2024ರಲ್ಲಿ ಶೇ. 83ರಷ್ಟು ಹೂಡಿಕೆ ಸ್ವಚ್ಛ ಇಂಧನ ಕ್ಷೇತ್ರಕ್ಕೆ ಮಾಡಿದೆಯಂತೆ.

2023ರಲ್ಲಿ ಹೆಚ್ಚು ವಿದ್ಯುತ್ ಉತ್ಪಾದಿಸಿದ ದೇಶಗಳು (ಒಟ್ಟು ಉತ್ಪಾದನೆಯ ಆಧಾರದಲ್ಲಿ)

  • ಚೀನಾ: 9,456 ಟೆರಾ ವ್ಯಾಟ್ ಅವರ್ (TWh)
  • ಅಮೆರಿಕ: 4,254 TWh
  • ಭಾರತ: 1,958 TWh
  • ರಷ್ಯಾ: 1,178 TWh
  • ಜಪಾನ್: 1,013 TWh
  • ಬ್ರೆಜಿಲ್: 710 TWh
  • ಕೆನಡಾ: 633 TWh
  • ದಕ್ಷಿಣ ಕೊರಿಯಾ: 618 TWh
  • ಫ್ರಾನ್ಸ್: 518 TWh
  • ಜರ್ಮನಿ: 497 TWh

ಈ ಸಂಖ್ಯೆಗಳು ಎಲ್ಲ ಶಕ್ತಿಮೂಲಗಳಿಂದ (ಕಲ್ಲಿದ್ದಲು, ಜಲಶಕ್ತಿ, ಪರಮಾಣು, ಸೌರಶಕ್ತಿ, ಇತ್ಯಾದಿ) ಒಟ್ಟಾರೆ ಉತ್ಪಾದನೆಯ ಲೆಕ್ಕವನ್ನ ಸೂಚಿಸುತ್ತವೆ.

For Daily Updates WhatsApp ‘HI’ to 7406303366

- Advertisement -
Latest news
- Advertisement -
Related news
- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!

You cannot copy content of this page