New Delhi: ಭೂಕಂಪದಿಂದ ಪೀಡಿತ ಮ್ಯಾನ್ಮಾರ್ಗೆ (Myanmar) ಭಾರತ ಮತ್ತೆ ಸಹಾಯ ನೀಡುತ್ತಿದೆ. ಸೋಮವಾರ 50 ಟನ್ ಗಳಷ್ಟು ಪರಿಹಾರ ಸಾಮಗ್ರಿಗಳನ್ನು ಮೂರು ಹಡಗುಗಳಲ್ಲಿ ಮ್ಯಾನ್ಮಾರ್ ಗೆ ಕಳುಹಿಸಲಾಗಿದೆ.
ಭಾರತೀಯ ನೌಕಾಪಡೆಯ INS ಸಾತ್ಪುರ ಮತ್ತು INS ಸಾವಿತ್ರಿ ಹಡಗುಗಳು Myanmar ನ ಯಾಂಗೂನ್ ನಗರಕ್ಕೆ ತಲುಪಿವೆ. ಇನ್ನೂ ಮೂರು ಹಡಗುಗಳು, ಎಲ್ಸಿಯು-52, ಐಎನ್ಎಸ್ ಕಾರ್ಮುಖ್ ಮತ್ತು ಐಎನ್ಎಸ್ ಘರಿಯಾಲ್, 500 ಟನ್ಗಳಿಗೆ ಹೆಚ್ಚು ಪರಿಹಾರ ಸಾಮಗ್ರಿಗಳನ್ನು ಹೊತ್ತಿದ್ದು, ಯಾಂಗೂನ್ ಸಾಗಿವೆ.
ವಿದೇಶಾಂಗ ಸಚಿವ ಡಾ. ಎಸ್. ಜೈಶಂಕರ್ ಅವರು ಸಾಮಾಜಿಕ ಮಾಧ್ಯಮದಲ್ಲಿ ಮಾಹಿತಿ ಹಂಚಿಕೊಂಡು, “ಆಪರೇಷನ್ ಬ್ರಹ್ಮ” ಎಂಬ ಹೆಸರಿನಲ್ಲಿ ಭಾರತದ ಈ ಸಹಾಯ ಕಾರ್ಯವನ್ನು ಪ್ರಸ್ತಾಪಿಸಿದರು.
ಪರಿಹಾರ ಸಾಮಗ್ರಿಗಳನ್ನು ಕಳುಹಿಸಲು ಭಾರತ ಇತ್ತೀಚೆಗೆ ಐದು ಮಿಲಿಟರಿ ವಿಮಾನಗಳನ್ನು ಬಳಸಿ, ರಕ್ಷಣಾ ತಂಡಗಳು ಮತ್ತು ವೈದ್ಯಕೀಯ ಉಪಕರಣಗಳನ್ನು ಸಹ ರವಾನಿಸಿತ್ತು.
ಈಗಾಗಲೇ, 80 ಸದಸ್ಯರ NDRF ತಂಡ ನಾಪತ್ತೆಯಾದವರ ಶೋಧ ಮತ್ತು ರಕ್ಷಣಾ ಕಾರ್ಯಗಳನ್ನು ಮುಂದುವರಿಸಿದ್ದಾರೆ.
ಮಾರ್ಚ್ 28 ರಂದು ಸಂಭವಿಸಿದ ಭೂಕಂಪದಲ್ಲಿ 2,000ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದು, 3,900ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. 7.7 ರಿಕ್ಟರ್ ತೀವ್ರತೆಯ ಭೂಕಂಪವು ವಿದ್ವಾಂಸವನ್ನುಂಟುಮಾಡಿತು.